
ಶಿವಮೊಗ್ಗ : ವಿಜಯ ದಶಮಿಯ ದಿನದಂದೆ ಹರಿದಿತ್ತು ನೆತ್ತರು.!ಅಂದು ನೆಡೆದಿತ್ತು ಅಮ್ಜದ್ ಮೇಲೆ ಡೆಡ್ಲಿ ಅಟ್ಯಾಕ್.!ಇಂದು ಚಿಕಿತ್ಸೆ ಫಲಿಸದೆ ಅಮ್ಜದ್ ಸಾವು.!

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಎನ್ ಟಿ ರಸ್ತೆಯಲ್ಲಿ ಅಕ್ಟೋಬರ್ 2 ರಂದು ಅಮ್ಜದ್ ಖಾನ್ ಎಂಬ ಯುವಕನ ಮೇಲೆ ಮೂರರಿಂದ ನಾಲ್ಕು ಮಂದಿ ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅಮ್ಜದ್ನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಾಲ್ಕು ದಿನಗಳಿಂದ ಆಸ್ಪತ್ರೆಯ ಹಾಸಿಗೆಯ ಮೇಲೆ ಬದುಕಿಗಾಗಿ ಹೋರಾಟ ನೆಡೆಸಿದ ಅಮ್ಜದ್ಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆ (ಅ,5) ಉಸಿರೆಳೆದಿದ್ದಾನೆ.ಅಮ್ಜದ್ ಮೇಲಿನ ಅಟ್ಯಾಕ್ನ ಕಾರಣಮಾತ್ರ ಗೊಂದಲದ ಗೂಡಾಗಿದೆ.!? ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನೆಡೆದಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇತ್ತೀಚಿಗೆ ಮುಸಲ ಪಾತಕ ಲೋಕ ಗರಿಬಿಚ್ಚಿದೆ .ಅದರಲ್ಲೂ ಗಾಂಜಾ ಘಮಲು ಕೇಲವು ಏರಿಯಾವನ್ನು ಕಬ್ಜ ಮಾಡಿದೆ.ಗಾಂಜಾ ನಶೆಯಲ್ಲಿ ಅರಿವಿಲ್ಲದೆ ಕ್ರೈಮ್ ನೆಡೆಯುತ್ತಿದೆ ಎಂದರೆ ನೀವು ನಂಬಲೆ ಬೇಕು.!? ಈ ಗಾಂಜಾ ನಶೆ ಏರಿಸಿಕೊಂಡು ಬಂದ ಗ್ಯಾಂಗ್ ಒಂದು ಅಮ್ಜದ್ ಮೇಲೆ ಮಾರಣಾಂತಿಕ ಹಲ್ಲೆ ನೆಡೆಸಿರ ಬಹುದು.! ಎನ್ ಟಿ ರಸ್ತೆಯಲ್ಲಿ ಈ ಭೀಕರ ಕೃತ್ಯ ನಡೆದಿತ್ತು, ಮೂರರಿಂದ ನಾಲ್ಕು ಮಂದಿಯ ಗ್ಯಾಂಗ್ ಅಮ್ಜದ್ ಮೇಲೆ ಮಾರಣಾಂತಿಕವಾಗಿ ಮನಬಂದಂತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ದಾಳಿಯಿಂದ ಗಾಯಗೊಂಡಿರುವ ಅಮ್ಜದ್ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಆತನನ್ನು ಕೂಡಲೇ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಅಮ್ಜದ್ ಇಂದು ಸಾವಿನ ಮನೆ ಸೇರಿದ್ದಾರೆ.ಅಮ್ಜದ್ ಮೃತದೇಹವನ್ನು ಶವಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ತರಲಾಗಿದೆ ಆಸ್ಪತ್ರೆ ಬಳಿ ಬಿಗುವಿನ ವಾತಾವರಣವಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.
ಅಮ್ಜದ್ ಮೇಲೆ ಟೆಂಪೋ ಸ್ಟ್ಯಾಂಡ್ ಬಳಿ ಅಟ್ಯಾಕ್ :

ಅಕ್ಟೋಬರ್ 2 ಎರಡರಂದು ರಾತ್ರಿ ಶಿವಮೊಗ್ಗ ನಗರದ ಎನ್ ಟಿ ರಸ್ತೆಯಲ್ಲಿರುವ ಟೆಂಪೋ ಸ್ಟ್ಯಾಂಡ್ ಬಳಿ ಅಮ್ಜದ್ ಮೇಲೆ ಮಾರಣಾಂತಿಕ ಅಟ್ಯಾಕ್ ನಡೆದಿತ್ತು.ಮೂರರಿಂದ ನಾಲ್ಕು ಮಂದಿ ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಇರಿದಿದ್ದರು, ಇರಿತಕ್ಕೊಳಗಾದ ಯುವಕನ್ನು ಅಮ್ಜದ್ ಖಾನ್ (38) ಎಂದು ಗುರುತಿಸಲಾಗಿತ್ತು. ಅಮ್ಜದ್ ಖಾನ್ ಅವರು ತಮ್ಮ ಸ್ನೇಹಿತ ಶಾಹಿದ್ ಜೊತೆಗೆ ಬೈಕಿನಲ್ಲಿ ಬರುತ್ತಿದ್ದರು. ಈ ವೇಳೆ ಟೆಂಪೋ ಸ್ಟ್ಯಾಂಡ್ ಬಳಿ ಮೊದಲೇ ಹೊಂಚು ಹಾಕಿ ಕಾಯುತ್ತಿದ್ದ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಅಮ್ಜದ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಚಾಕುವಿನಿಂದ ಇರಿದ ದುಷ್ಕರ್ಮಿಗಳು, ಕೃತ್ಯ ನಡೆಸಿದ ತಕ್ಷಣವೇ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಚಾಕು ಇರಿತಕ್ಕೊಳಗಾದ ಅಮ್ಜದ್ ಖಾನ್ ಅವರಿಗೆ ತೀವ್ರ ರಕ್ತಸ್ರಾವವಾಗಿ ಅವರ ಸ್ಥಿತಿ ಗಂಭೀರವಾಗಿತ್ತು ಅಲ್ಲೆ ಇದ್ದವರು ಕೂಡಲೇ ಅವರನ್ನು ನಗರದ ಖಾಸಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ವೈದ್ಯರು ಸಾವು ಬದುಕಿನೊಡನೆ ಹೋರಾಡುತ್ತಿದ್ದ ಅಮ್ಜದ್ ಅವರಿಗೆ ಪ್ರಾಣ ಉಳಿಸಲು ತುರ್ತು ಚಿಕಿತ್ಸೆ ನೀಡಲಾಗಿತ್ತು.ಆದರೂ ಕಳೆದ ನಾಲ್ಕು ದಿನದಿಂದ ನಿರಂತವಾಗಿ ವೈದ್ಯರು ಬದುಕಿಸಲು ಎಲ್ಲಾ ರೀತಿಯ ಚಿಕಿತ್ಸೆ ನೀಡಿದರು ಅಮ್ಜದ್ ಚಿಕಿತ್ಸೆ ಫಲಿಸದೆ ಕೊನೆ ಉಸಿರು ಎಳೆದಿದ್ದಾನೆ. ಕಳೆದ ನಾಲ್ಕು ದಿನದಿಂದ ಚಿಕಿತ್ಸೆ ಫಲಿಸದೆ ಅಮ್ಜದ್ ಸಾವಿನ ಮನೆ ಸೇರಿದ್ದರು
ಈ ಕೃತ್ಯದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಹಳೆಯ ದ್ವೇಷ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಈ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣವು ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಹಂತಕರ ಪತ್ತೆಗಾಗಿ ತೀವ್ರ ತನಿಖೆಯನ್ನು ಆರಂಭಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಸ್ಥಳೀಯರು, ಸಾರ್ವಜನಿಕ ಸ್ಥಳದಲ್ಲಿ ಇಂತಹ ದಾಳಿಗಳು ನಡೆಯುತ್ತಿರುವುದು ನಾಗರಿಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಈ ಹತ್ಯೆ ಮೇಲಿನ ಅಸಲಿ ಸತ್ಯ ಬಯಲಾಗ ಬೇಕಿದ್ದರೆ ಹಂತಕರನ್ನು ಪೊಲೀಸರು ಬಂಧಿಸ ಬೇಕಿದೆ.


