
ಬೆಂಗಳೂರು: ಮೂವರನ್ನು ಅಪಹರಿಸಿ 1.1 ಕೋಟಿ ರೂಪಾಯಿ ದೋಚಿದ್ದ 8 ಮಂದಿಯ ಬಂಧನ.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ದಂಪತಿಗಳ ಬಳಿ ಎರಡು ಚೀಲಗಳಲ್ಲಿ ಸುಮಾರು 1.1 ಕೋಟಿ ರೂಪಾಯಿ ನಗದು ಇತ್ತು. ಪೊಲೀಸರ ಪ್ರಕಾರ, ಹೇಮಂತ್ ಮತ್ತು ದಂಪತಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಅಕ್ಷಯ ಪಾರ್ಕ್‌ನಲ್ಲಿದ್ದರು.
ಅ ಸಮಯದಲ್ಲಿ ದಂಪತಿ ಮತ್ತು ಅವರ ಕಾರು ಚಾಲಕನನ್ನು ಅಪಹರಿಸಿದ ಎಂಟು ಮಂದಿಯ ಗ್ಯಾಂಗ್ ಸುಮಾರು 1.1 ಕೋಟಿ ರೂಪಾಯಿ ನಗದು ದೋಚಿ ಎಸ್ಕೇಪ್ ಆಗಿದ್ದರು.ವಿಷಯ ತಿಳಿದ ಹುಳಿಮಾವು ಪೊಲೀಸರು ಆರೋಪಿಗಳನ್ನು ಈಗ ಬಂಧಿಸಿದ್ದಾರೆ. ಕಳೆದ ಶನಿವಾರ (ಸೆ,27) ಬೆಂಗಳೂರು ಹುಳಿಮಾವು ಠಾಣಾ ಸರಹದ್ದಿನ ಸಂಜೆ ಅಕ್ಷಯ ಪಾರ್ಕ್ ಬಳಿ ಸಂಜೆ ವೇಳೆಯಲ್ಲಿ ಈ ಘಟನೆ ನಡೆದಿದೆ. ವಶಪಡಿಸಿಕೊಳ್ಳಲಾದ ನಗದು ಹಣ ಹವಾಲಾ ವ್ಯವಹಾರಕ್ಕೆ ಸಂಬಂಧಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಆರೋಪಿಗಳನ್ನು ನರಸಿಂಹ (34), ಕಾರು ಚಾಲಕ ಜೀವನ್ (27), ಜಿಮ್ ತರಬೇತುದಾರ ವೆಂಕಟ್ ರಾಜ್ (28), ಕಿಶೋರ್ (30), ಆಟೋರಿಕ್ಷಾ ಚಾಲಕ ಚಂದ್ರ (32), ಭದ್ರತಾ ಸಿಬ್ಬಂದಿ ರವಿ ಕಿರಣ್ (33), ಮತ್ತು ಕುಮಾರ್ ಎನ್ (36) ಮತ್ತು ನಮನ್ (18) ಎಂದು ಗುರುತಿಸಲಾಗಿದ್ದು, ಎಲ್ಲರೂ ಆಗ್ನೇಯ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವಾಸಿಗಳಾಗಿದ್ದಾರೆ.
ದೂರುದಾರ ಹೇಮಂತ್ (32), ಕಾರು ಚಾಲಕ, ತುಮಕೂರಿನ ಅಡಿಕೆ ವ್ಯಾಪಾರಿ ಮೋಹನ್, ರಾಜಸ್ಥಾನ ಮೂಲದ ಅಕ್ಷಯ ಲೇಔಟ್ ನಿವಾಸಿಗಳಾದ ರಿಯಲ್ ಎಸ್ಟೇಟ್ ಬ್ರೋಕರ್ ಮೋಟಾ ರಾಮ್ ಅಲಿಯಾಸ್ ರಮೇಶ್ ಮತ್ತು ಅವರ ಪತ್ನಿ ಲಕ್ಷ್ಮಿದೇವಿ ಅವರಿಂದ ಹಣ ಸಂಗ್ರಹಿಸಲು ಕೇಳಿದ್ದರು ಎಂದು ಹೇಳಿದ್ದಾರೆ. ದಂಪತಿ ಎರಡು ಚೀಲಗಳಲ್ಲಿ 1.1 ಕೋಟಿ ರೂಪಾಯಿ ನಗದು ಇತ್ತು. ಪೊಲೀಸರ ಪ್ರಕಾರ, ಹೇಮಂತ್ ಮತ್ತು ದಂಪತಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಅಕ್ಷಯ ಪಾರ್ಕ್‌ನಲ್ಲಿದ್ದರು.ಅ ಸಂಧರ್ಭದಲ್ಲಿ ಈ ಘಟನೆ ನೆಡೆದಿದೆ.


