ಚೆನೈ : ಕರೂರು ಕಾಲ್ತುಳಿತ ಪ್ರಕರಣಕ್ಕೆ ಟ್ವಿಸ್ಟ್? ಕೋರ್ಟ್‌ಗೆ ಸಲ್ಲಿಸಿರೋ ಅರ್ಜಿಯಲ್ಲಿರೋದೇ ಅಸಲಿ ಎನು?
news.ashwasurya.in
ಅಶ್ವಸೂರ್ಯ/ಕರೂರು : ಪಿತೂರಿಯ ಆರೋಪ, ಕೋರ್ಟ್ ಮೆಟ್ಟಿಲೇರೊತ್ತ ವಿಜಯ್ ಪಕ್ಷ.!? ಕಾಲ್ತುಳಿತ ಘಟನೆ ನಡೆದ ಬೆನ್ನಲ್ಲೇ ವಿಜಯ್ ಅವರ ಪಕ್ಷ ಟಿವಿಕೆ, ಇದು ಆಕಸ್ಮಿಕ ಸಾವಲ್ಲ, ಇದೊಂದು ವ್ಯವಸ್ಥಿತ ಪಿತೂರಿ ಎಂದು ಗಂಭೀರ ಆರೋಪ ಮಾಡಿದೆ. ಜನಸಂದಣಿ ಹೆಚ್ಚಾಗಿದ್ದಾಗ ಯಾರೋ ಕಲ್ಲು ತೂರಾಟ ನಡೆಸಿದ್ರು, ಅದೇ ಸಮಯದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ರಿಂದ ಜನ ಭಯಭೀತರಾಗಿ ಓಡಲು ಶುರುಮಾಡಿದ್ರು, ಇದರಿಂದಲೇ ಈ ದುರಂತ ಸಂಭವಿಸಿತು ಅಂತ ಪಕ್ಷ ಆರೋಪಿಸಿದೆ.
ಸುಮ್ಮನೆ ಆರೋಪ ಮಾಡಿ ಕೂರದೇ, ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಅಂತ ಕೋರಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.! ಇದು ಪ್ರಕರಣಕ್ಕೆ ದೊಡ್ಡ ತಿರುವು ಕೊಟ್ಟಿದೆ.

ಅಲ್ಲಿ ನಡೆದದ್ದಾದರು ಏನು.? ಪ್ರತ್ಯಕ್ಷದರ್ಶಿಗಳು ಹೇಳೋದೇನು?
ಘಟನೆ ನಡೆದಾಗ ಅಲ್ಲೇ ಇದ್ದವರು ಹೇಳುವ ಪ್ರಕಾರ, ವಿಜಯ್ ವೇದಿಕೆಗೆ ಬರೋದಕ್ಕೆ ಸ್ವಲ್ಪ ಹೊತ್ತು ಮುಂಚೆ ಇದ್ದಕ್ಕಿದ್ದಂತೆ ಕರೆಂಟ್ ಹೋಯ್ತು. ರ್‍ಯಾಲಿಗೆ
ಬರೋಕೆ ಇದ್ದಿದ್ದೇ ಕಿರಿದಾದ ರಸ್ತೆಗಳು, ಅ ಸ್ಥಳದಲ್ಲಿ ಲಕ್ಷಾಂತರ ಜನ ಸೇರಿದ್ದರಿಂದ ವಿಪರೀತ ನೂಕುನುಗ್ಗಲು ಉಂಟಾಯ್ತು. ಕತ್ತಲಲ್ಲಿ ಏನಾಗ್ತಿದೆ ಅಂತ ಗೊತ್ತಾಗದೆ ಜನ ದಿಕ್ಕಾಪಾಲಾಗಿ ಓಡಲು ಶುರುಮಾಡಿದ್ರು.
ಈ ಗಲಾಟೆಯಲ್ಲಿ ಅಪ್ಪ-ಅಮ್ಮನಿಂದ ಮಕ್ಕಳು ಬೇರೆಯಾದ್ರು, ಉಸಿರಾಡೋಕೂ ಕಷ್ಟಪಟ್ಟು ಅನೇಕರು ಕೆಳಗೆ ಬಿದ್ದರು. ಅವರ ಮೇಲೆಯೇ ಜನ ಓಡಾಡಿದ್ದರಿಂದ ಉಸಿರುಗಟ್ಟಿ ಪ್ರಾಣ ಹೋಯ್ತು ಅಂತ ಮರಣೋತ್ತರ ಪರೀಕ್ಷೆ ವರದಿಯೂ ಹೇಳಿದೆ.
ಮಾರನೇ ದಿನ ಬೆಳಿಗ್ಗೆ ಆ ಸ್ಥಳ ನೋಡಿದವರ ಎದೆ ನಡುಗುವಂತಿತ್ತು, ಎಲ್ಲೆಂದರಲ್ಲಿ ಬಿದ್ದಿದ್ದ ಚಪ್ಪಲಿ, ಶೂಗಳು, ಹರಿದುಹೋದ ಬಟ್ಟೆ, ಮುರಿದುಬಿದ್ದ ಬ್ಯಾರಿಕೇಡ್‌ಗಳು… ಆ ಸ್ಥಳವೇ ಸ್ಮಶಾನದಂತೆ ಕಾಣುತ್ತಿತ್ತು.

“ನನ್ನ ಎದೆ ಒಡೆದು ಹೋಗಿದೆ” ಎಂದ ವಿಜಯ್, ಪರಿಹಾರ ಘೋಷಣೆ ಮಾಡಿದ ವಿಜಯ್,
ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ವಿಜಯ್, “ನನ್ನ ಎದೆ ಒಡೆದು ಹೋಗಿದೆ, ಇದೊಂದು ತುಂಬಲಾರದ ನಷ್ಟ” ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ 20 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. “ಈ ದುಃಖದ ಸಮಯದಲ್ಲಿ ನಾನು ನಿಮ್ಮ ಕುಟುಂಬದ ಮಗನಾಗಿ ನಿಮ್ಮ ಜೊತೆ ನಿಲ್ಲುತ್ತೇನೆ” ಎಂದು ಭರವಸೆ ನೀಡಿದ್ದಾರೆ.
ಇತ್ತ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡಲೇ ಕರೂರಿಗೆ ದೌಡಾಯಿಸಿ, ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಾರೆ, ರಾಜಕೀಯದ ಆರಂಭದಲ್ಲೇ ವಿಜಯ್ ಅವರಿಗೆ ಈ ದುರಂತ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದು ಕೇವಲ ವ್ಯವಸ್ಥೆಯ ವೈಫಲ್ಯದಿಂದಾದ ಆಕಸ್ಮಿಕನಾ? ಅಥವಾ ವಿಜಯ್ ಅವರ ರಾಜಕೀಯ ಬೆಳವಣಿಗೆಯನ್ನು ತಡೆಯಲು ಯಾರೋ ಪಿತೂರಿ ನಡೆಸಿದ್ದಾರ.? ಸತ್ಯಾಸತ್ಯತೆ ಹೈಕೋರ್ಟ್ ತನಿಖೆಯಿಂದ ಮಾತ್ರ ಹೊರಬರಬೇಕಾಗಿದೆ. ಆದ್ರೆ ಜೀವ ಕಳೆದುಕೊಂಡ 38 ಮಂದಿಯ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ.


