
SHIVAMOGGA : ಮದುವೆಗೆ ಒಪ್ಪದ ಪ್ರಿಯತಮೆಯನ್ನು ಭದ್ರ ಕಾಲುವೆಗೆ ತಳ್ಳಿ ಹತ್ಯೆಮಾಡಿದ ಪ್ರಿಯಕರ.!

news.ashwasurya.in
ಶಿವಮೊಗ್ಗ/ಭದ್ರಾವತಿ : ಪ್ರೀತಿಯ ಸುಳಿಗೆ ಯುವತಿಯೊಬ್ಬಳ ಹತ್ಯೆಯಾಗಿದೆ.! ಪ್ರೀತಿಸಿದವಳನ್ನು ಕೊಂದವನು ಪ್ರಿಯಕರನೆ.!? ಕಳೆದ ಮೂರು ವರ್ಷದಿಂದ ಸ್ವಾತಿ ಹಾಗೂ ಸೂರ್ಯ ಪ್ರೀತಿಸುತ್ತಿದ್ದರಂತೆ.? ಇಬ್ಬರು ಎದುರು ಬದುರು ಮನೆಯವರಾಗಿದ್ದರಿಂದ ಈ ನಡುವೆ ಪೋಷಕರಿಗೆ ಗೊತ್ತಾಗಿದೆ ಇಬ್ಬರ ಮದುವೆಗೆ ಯುವತಿ ಸ್ವಾತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಇದ್ದರೂ ಕೂಡ ಸ್ವಾತಿಗೆ ತನ್ನನ್ನು ಮದುವೆಯಾಗು ಎಂದು ಪ್ರಿಯಕರ ಸೂರ್ಯ ಬೆನ್ನುಬಿದ್ದಿದ್ದಾನೆ. ಮಂಗಳವಾರ ಸಂಜೆ ಭದ್ರಾ ಕಾಲುವೆಯಲ್ಲಿ ಸ್ವಾತಿಯ ಮೃತ ದೇಹ ಪತ್ತೆಯಾಗಿದೆ.
ಮದುವೆಯಾಗಲು ಒಪ್ಪದ ಪ್ರೇಯಸಿಯನ್ನು ಪ್ರಿಯಕರನೆ ಕಾಲುವೆಗೆ ತಳ್ಳಿ ಕೊಂದ್ದಿದ್ದಾನೆ ಎಂದು ವರದಿಯಾಗಿತ್ತು.!

ಘಟನೆಯ ಹಿನ್ನೆಲೆ :
ಹೆತ್ತವರ ವಿರೋಧ ಎದುರಿಸಿ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಪ್ರೇಯಸಿ ಸ್ವಾತಿ ಹೇಳಿದ್ದಳಂತೆ,ಇದರಿಂದ ಕೋಪಗೊಂಡ ಪ್ರಿಯಕರ ಸೂರ್ಯ ಸ್ವಾತಿಯನ್ನು ಭದ್ರ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯಕ್ಕುಂದದಲ್ಲಿ ನಡೆದಿದೆ. ಪ್ರಿಯಕರನಿಂದ ಹತ್ಯೆಯಾದ ಯುವತಿ ತೆರೇನಹಳ್ಳಿಯ ಸ್ವಾತಿ,
ಸೆಪ್ಟೆಂಬರ್ 21ರಂದು ಪ್ರಿಯಕರ ಸೂರ್ಯ, ಸ್ವಾತಿಯನ್ನು ನಿನ್ನ ಹತ್ತಿರ ಮಾತನಾಡಬೇಕೆಂದು ಮರುಳು ಮಾಡಿ ಕರೆದುಕೊಂಡು ಹೋಗಿದ್ದಾನೆ.
ಮಂಗಳವಾರ (ಸೆ,23 )ರ ಸಂಜೆ ಭದ್ರಾ ಕಾಲುವೆಯಲ್ಲಿ ಸ್ವಾತಿಯ ಮೃತ ದೇಹ ಪತ್ತೆಯಾಗಿದೆ. ಯುವತಿ ಸಾವಿನ ತನಿಖೆಗೆ ಮುಂದಾದ ಪೊಲೀಸರಿಗೆ ಪ್ರಿಯಕರ ಸೂರ್ಯನ ಮೇಲೆ ಅನುಮಾನ ಬರುತ್ತಿದ್ದಂತೆ ಆತನ ಹುಡುಕಾಟ ಆರಂಭಿಸಿದ್ದರು.
ಸ್ವಾತಿ ಡಿಗ್ರಿ ಎರಡನೇ ವರ್ಷ ಓದುತ್ತಿದ್ದಳು. ಅಂದು ಸ್ವಾತಿಯನ್ನು ಸೂರ್ಯ ಮೋಸದಿಂದ ಕರೆದುಕೊಂಡು ಹೋಗಿದ್ದಾನೆ ಎಂದು ಸೆಪ್ಟೆಂಬರ್ 23ರಂದು ಭದ್ರಾವತಿ ಠಾಣೆಗೆ ಸ್ವಾತಿ ಪೋಷಕರು ದೂರು ನೀಡಿದ್ದಾರೆ.

ಸ್ವಾತಿ ಶವ ಪತ್ತೆ ಆಗುತ್ತಿದ್ದಂತೆ ಪ್ರಿಯಕರ ಸೂರ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಹೇಳಲಾಗುತ್ತಿದ್ದು ಸಧ್ಯಕ್ಕೆ ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ದೂರು ದಾಖಲಾಗಿದ್ದು ಸ್ವಾತಿ ಪೋಷಕರು ಇಬ್ಬರ ವಿರುದ್ಧ ಕೂಡ ದೂರು ದಾಖಲಿಸಿದ್ದಾರೆ. ಸದ್ಯ ಭದ್ರಾವತಿ ಪೊಲೀಸರು ಸೂರ್ಯ ಮತ್ತು ತಂದೆ ಸ್ವಾಮಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


