Headlines

9 ರಿಂದ ಪಿಯುಸಿವರೆಗೆ NMMS ವಿದ್ಯಾರ್ಥಿವೇತನ 2025: ಅರ್ಜಿ ಸಲ್ಲಿಸಿ, ₹12,000 ಪಡೆಯಿರಿ!

ಅಶ್ವಸೂರ್ಯ/ : ಎನ್‌ಎಂಎಮ್‌ಎಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. 8ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವಾರ್ಷಿಕ ವಿದ್ಯಾರ್ಥಿವೇತನ. ಅರ್ಹತಾ ಮಾನದಂಡ, ಪರೀಕ್ಷಾ ಮಾದರಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಲ್ಲಿ ತಿಳಿಯಿರಿ.
ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ (Karnataka School Examination and Assessment Board – KSEAB) ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ಬರುವ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ಸ್ಕಾಲರ್‌ಶಿಪ್ (National Means-cum-Merit Scholarship – NMMS 2025) ಯೋಜನೆಯಡಿ ವಿದ್ಯಾರ್ಥಿವೇತನಕ್ಕಾಗಿ ಪ್ರವೇಶ ಪರೀಕ್ಷೆ ಆಯೋಜಿಸಿದೆ. ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕಾಲ ಪ್ರತಿ ವರ್ಷ ₹12,000 ಮೊತ್ತದ ಆರ್ಥಿಕ ನೆರವು ಒದಗಿಸಲಾಗುತ್ತದೆ.

ಯಾರು ಅರ್ಜಿ ಹಾಕಬಹುದು?
ಈ ಯೋಜನೆಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ, ಆದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉತ್ತೇಜಿಸುವುದಾಗಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದ 8ನೇ ತರಗತಿಯಲ್ಲಿ ಸರ್ಕಾರಿ, ಅನುದಾನಿತ ಅಥವಾ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಖಾಸಗಿ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆ, ರಾಜ್ಯ/ಕೇಂದ್ರ ಸರ್ಕಾರ ನಡೆಸುವ ವಸತಿ ಶಾಲೆಗಳು ಹಾಗೂ ಖಾಸಗಿ ವಸತಿ ಶಾಲೆಯ ವಿದ್ಯಾರ್ಥಿಗಳು ಅರ್ಹರಲ್ಲ.
ವಿದ್ಯಾರ್ಥಿಯ ಪಾಲಕರ ವಾರ್ಷಿಕ ಆದಾಯವು ₹3.50 ಲಕ್ಷ ಮೀರಬಾರದು.
7ನೇ ತರಗತಿಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ಕನಿಷ್ಠ 55% ಅಂಕಗಳು ಹಾಗೂ ಪರಿಶಿಷ್ಟ ವಿದ್ಯಾರ್ಥಿಗಳು 50% ಅಂಕಗಳು ಗಳಿಸಿರಬೇಕು.
ಐಟಿಐ ಮತ್ತು ಡಿಪ್ಲೊಮಾ ಅಭ್ಯಾಸ ಮಾಡುವವರನ್ನು ಈ ಯೋಜನೆಯಡಿಯಲ್ಲಿ ಪರಿಗಣಿಸಲಾಗುವುದಿಲ್ಲ.
ಪರೀಕ್ಷೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆ
ಈ ವರ್ಷದ ಎನ್‌ಎಂಎಮ್‌ಎಸ್ ಪ್ರವೇಶ ಪರೀಕ್ಷೆ ಡಿಸೆಂಬರ್ 7, 2025ರಂದು ನಡೆಯಲಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 15, 2025 ಆಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ತಾಲೂಕು ಮಟ್ಟದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸಿದ್ದಪಡಿಸಿದೆ.
ಪರೀಕ್ಷೆಯ ಮಾದರಿ
ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ:

ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (Mental Ability Test – MAT)

ಒಟ್ಟು 90 ಬಹು ಆಯ್ಕೆ ಪ್ರಶ್ನೆಗಳು.

ಪ್ರತಿ ಪ್ರಶ್ನೆಗೆ 1 ಅಂಕದಂತೆ 90 ಅಂಕಗಳು.

ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (Scholastic Ability Test – SAT)

ವಿಜ್ಞಾನ: 35 ಪ್ರಶ್ನೆಗಳು

ಸಮಾಜ ವಿಜ್ಞಾನ: 35 ಪ್ರಶ್ನೆಗಳು

ಗಣಿತ: 20 ಪ್ರಶ್ನೆಗಳು

ಒಟ್ಟು: 90 ಪ್ರಶ್ನೆಗಳು (90 ಅಂಕಗಳು)

Leave a Reply

Your email address will not be published. Required fields are marked *

Optimized by Optimole
error: Content is protected !!