ಮಹಾರಾಷ್ಟ್ರ : ನೀಟ್ನಲ್ಲಿ ಶೇ. 99.99 ಮಾರ್ಕ್ಸ್ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು.!
news.ashwasurya.in
ಅಶ್ವಸೂರ್ಯ/ಮಹಾರಾಷ್ಟ್ರ :ಎಂಬಿಬಿಸ್ ಗೆ ಪ್ರವೇಶ ಪಡೆಯುವ ದಿನವೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.!
ಚಂದ್ರಾಪುರ ಜಿಲ್ಲೆಯ 19 ವರ್ಷದ ಅನುರಾಗ್ ಅನಿಲ್ ಬೋರ್ಕರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ . ನೀಟ್ ಪರೀಕ್ಷೆಗೆ ಉತ್ತಮ ತಯಾರಿಯನ್ನು ನಡೆಸಿದ್ದ ಅನುರಾಗ್ ನೀಟ್ ಯುಜಿ ಪರೀಕ್ಷೆಯಲ್ಲಿ 99.99 ಶೇಕಡಾ ಅಂಕದೊಂದಿಗೆ ಶ್ರೇಷ್ಠ ಫಲಿತಾಂಶವನ್ನು ಪಡೆದಿದ್ದ. ಅಲ್ಲದೆ ಒಬಿಸಿ ವಿಭಾಗದಲ್ಲಿ 1475 ರ ಅಖಿಲ ಭಾರತ ರ್ಯಾಂಕ್ ಗಳಿಸಿದ್ದ ಎನ್ನಲಾಗಿದೆ.
ನೀಟ್ ನಲ್ಲಿ ಉತ್ತಮ ಫಲಿತಾಂಶ ಪಡೆದ ಬೆನ್ನಲ್ಲೇ ಪೋಷಕರ ಆಸೆಯಂತೆ ಎಂಬಿಬಿಎಸ್ ಕೋರ್ಸ್ಗೆ ಪ್ರವೇಶ ಪಡೆಯಲು ಉತ್ತರ ಪ್ರದೇಶದ ಗೋರಖ್ಪುರಕ್ಕೆ ತೆರಳಲು ತಯಾರಿ ನಡೆಸುತ್ತಿದ್ದ.
ಆದರೆ, ಅನುರಾಗ್ ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೆತ್ ನೋಟ್ ಕೂಡ ಸಿಕ್ಕಿದ್ದು, “ನಾನು ವೈದ್ಯನಾಗಲು ಬಯಸುವುದಿಲ್ಲ” ಎಂದಷ್ಟೇ ಬರೆದಿದ್ದ ಎಂದು ತಿಳಿದುಬಂದಿದೆ.
ಎಂದಿಗೂ ಒಳ್ಳೆಯ ವಿದ್ಯಾರ್ಥಿಗಳಿಗೆ ಅವರ ಹೆತ್ತವರು ಇದನ್ನೇ ನೀನು ಓದಬೇಕು ಎಂದು ಯಾವತ್ತಿಗೂ ಒತ್ತಾಯ ಮಾಡಬೇಡಿ ಉತ್ತಮ ವಿದ್ಯಾರ್ಥಿಗಳು ತಾವೇನು ಆಗಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ. ನೀವುಗಳು ಹಠಹಿಡಿದು ಮಕ್ಕಳಿಗೆ ಇದನ್ನೆ ಓದಬೇಕು ಎಂದರೆ ಮಕ್ಕಳ ಮನಸ್ಸು ವಿಚಲಿತವಾಗಿ ಎನಾಗಬಹುದು ಎನ್ನುವುದಕ್ಕೆ ಈ ಪ್ರಕರಣವೆ ಸಾಕ್ಷಿಯಾಗಿದೆ.! ಪ್ರತಿಯೊಬ್ಬ ವಿದ್ಯಾರ್ಥಿಗಳ ತಂದೆ ತಾಯಿಂದಿರು ಮಕ್ಕಳ ಇಷ್ಟದಂತೆ ಎನನ್ನು ಓದುತ್ತಾರೊ ಅ ಹಾದಿಯಲ್ಲಿ ಬಿಡಿ ಅವರಲ್ಲೂ ಇದನ್ನೆ ಮಾಡಬೇಕೆನ್ನುವ ಹಠವಿರುತ್ತದೆ ಸಾಧಿಸಿ ತೋರಿಸುತ್ತಾರೆ….


