
ಶಿವಮೊಗ್ಗ : ಪ್ರತಿಷ್ಠಿತ ಸರ್ಎಂವಿ ಪಿಯು ಕಾಲೇಜ್ ಮತ್ತು ಸರ್ಎಂವಿ ಅಕಾಡೆಮಿ ಸಹಯೋಗದ ವಿದ್ಯಾಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಸರ್ಎಂವಿ ಪಿಯು ಕಾಲೇಜ್ ಮತ್ತು ಸರ್ಎಂವಿ ಅಕಾಡೆಮಿಯ ಸಹಯೋಗದ ಶ್ರೀ ವಿದ್ಯಾ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ 16-09-2025 ರಂದು ಆಯೋಜಿಸಲಾದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಮಲೆನಾಡಿನ ಹೆಮ್ಮೆಯ ಸರ್ಎಂವಿ ಕಾಲೇಜಿನ ವಿದ್ಯಾರ್ಥಿಗಳು ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ 19 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮೂರು ವಿದ್ಯಾರ್ಥಿಗಳು, ಬ್ಯಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು, ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಒಬ್ಬ ವಿದ್ಯಾರ್ಥಿ, ಬಾಕ್ಸಿಂಗ್ ಸ್ಪರ್ಧೆಯಲ್ಲಿ ಒಬ್ಬ ಮತ್ತು ಫುಟ್ಬಾಲ್ ಸ್ಪರ್ಧೆಯಲ್ಲಿ ಇಬ್ಬರು ಹಾಗೂ ಲಾಂಗ್ ಟೆನ್ನಿಸ್ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು, ಚೆಸ್ ಸ್ಪರ್ಧೆಯಲ್ಲಿ ಇಬ್ಬರು, ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಇಬ್ಬರು, ಟೆನಿ ಕ್ವಾಯಿಟ್ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ತಾವು ವಿದ್ಯೆ ಕಲಿಯುತ್ತಿರುವ ಕಾಲೇಜಿಗೂ ಮತ್ತು ಪ್ರಾಂಶುಪಾಲರು ಹಾಗೂ ಬೋಧನಾ ಸಿಬ್ಬಂದಿ ವರ್ಗಕ್ಕೆ ಕೀರ್ತಿ ತಂದಿದ್ದಾರೆ.

ಶಿವಮೊಗ್ಗದ ಸರ್ಎಂವಿ ಅಕಾಡೆಮಿಯ ಸಹಯೋಗದ ಶ್ರೀ ವಿದ್ಯಾಭಾರತಿ ಪಿಯು ಕಾಲೇಜು ವಿದ್ಯಾರ್ಥಿಗಳು ಕೂಡ 16-09-2025 ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಮ್ಮ ಸಾಮಾರ್ಥ್ಯವನ್ನು ಪ್ರದರ್ಶಿಸಿ ಉತ್ತಮ ಯಶಸ್ಸನ್ನು ಸಾಧಿಸಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗದಲ್ಲಿ ಉತ್ಸಾಹದಿಂದ ಭಾಗವಹಿಸಿದ 23 ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದ ಕ್ರೀಡೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು,
ಟೇಕ್ವಾಂಡೋ ಸ್ಫರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು, ಚೆಸ್ ಸ್ಪರ್ಧೆಯಲ್ಲಿ ಆರು ಜನ ವಿದ್ಯಾರ್ಥಿಗಳು,
ಫುಟ್ಬಾಲ್ ಸ್ಪರ್ಧೆಯಲ್ಲಿ ಒಬ್ಬ ವಿದ್ಯಾರ್ಥಿ ಮತ್ತು
ಕುಸ್ತಿ ಸ್ಪರ್ಧೆಯಲ್ಲಿ ಒಬ್ಬ ಹಾಗೂ ಬೆಲ್ಟ್ ಕುಸ್ತಿ ಸ್ಪರ್ಧೆಯಲ್ಲಿ ಐದು ವಿದ್ಯಾರ್ಥಿಗಳು,
ಬ್ಯಾಡ್ಮಿಂಟನ್ ವಿಭಾಗದಲ್ಲಿ ಮೂರು ವಿದ್ಯಾರ್ಥಿಗಳು,
ಬ್ಯಾಸ್ಕೆಟ್ಬಾಲ್ ಸ್ಪರ್ಧೆಯಲ್ಲಿ ಒಬ್ಬ ವಿದ್ಯಾರ್ಥಿ,
ಸ್ಕೇಟಿಂಗ್ ಒಂದು ಮತ್ತು ಈಜು ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು,
ರಾಜ್ಯಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ,
ಕ್ರೀಡಾ ಮಾರ್ಗದರ್ಶಕರ ಮಾರ್ಗದರ್ಶನ ಮತ್ತು ಸಂಸ್ಥೆಯ ಪ್ರೋತ್ಸಾಹದಿಂದಾಗಿ ಈ ಗಮನಾರ್ಹ ಯಶಸ್ಸು ಸಾಧಿಸುವಲ್ಲಿ ಶಿವಮೊಗ್ಗ ನಗರದ ಹೆಮ್ಮೆಯ ಕಾಲೇಜುಗಳಾದ ಸರ್ಎಂವಿ ಮತ್ತು ಶ್ರೀ ವಿದ್ಯಾಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಶ್ರೇಷ್ಠ ಮಟ್ಟದ ಆಟವನ್ನು ಪ್ರದರ್ಶಿಸಿ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ,
ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಎರಡು ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ ಎಂವಿ ಮ್ಯಾನೇಜ್ಮೆಂಟ್ ನಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದರ ಜೋತೆಗೆ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲೂ ತಾವುಗಳು ಭಾಗವಹಿಸುವ ಎಲ್ಲಾ ಸ್ಪರ್ಧೆಗಳಲ್ಲೂ ಶ್ರೇಷ್ಠ ಮಟ್ಟದ ಆಟವನ್ನು ಪ್ರದರ್ಶಿಸಿ ಹೆಚ್ಚಿನ ಗೆಲುವನ್ನು ಸಾಧಿಸಿ ಸರ್ಎಂವಿ ಸಂಸ್ಥೆಗೂ ಮತ್ತು ಕಾಲೇಜಿಗೂ ಜಿಲ್ಲೆಗೂ ಹಾಗೂ ನಿಮ್ಮ ಪೋಷಕರಿಗೂ ಕೀರ್ತಿ ತರುವಂತಾಗಲಿ ಎಂದು ಹಾರೈಸಿದ್ದಾರೆ.


