Headlines

ಶಿರಸಿ : ಏರ್ ಗನ್ ಮಿಸ್ ಫೈರ್ ಬಾಲಕನ ಸಾವಿಗೆ ಬಿಗ್ ಟ್ವಿಸ್ಟ್ .!

ಶಿರಸಿ : ಏರ್ ಗನ್ ಮಿಸ್ ಫೈರ್ ಬಾಲಕನ ಸಾವಿಗೆ ಬಿಗ್ ಟ್ವಿಸ್ಟ್ .!

news.ashwasurya.in

ಅಶ್ವಸೂರ್ಯ/ಕಾರವಾರ : ಮನೆಯಲ್ಲಿದ್ದ ಏರ್ ಗನ್ ನಿಂದ ಮಿಸ್ ಫೈರ್ ಆಗಿ 9 ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ಬೆಳಕಿಗೆ‌ ಬರುತ್ತಿದ್ದ ಹಾಗೆ ಶಿರಸಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ, ತನಿಖೆಯಲ್ಲಿ ಸತ್ಯ ಬಯಲಾಗಿದೆ.
ಹೌದು. ಮೃತ ಬಾಲಕ ಕರಿಯಪ್ಪನ ಸಹೋದರನ ಕೈಯಿಂದ ಮಿಸ್ ಫೈರಿಂಗ್ ಆಗಿಲ್ಲ ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ. ಬಾಲಕನ ಮನೆಯ ಕೆಲಸಗಾರ ನಿತೀಶ್ ಗೌಡನ ಕೈಯಿಂದ ಮಿಸ್ ಫೈರ್ ಆಗಿ ಬಾಲಕ ಸಾವನ್ನಪ್ಪಿದ್ದಾನೆ. ಎಂಬುದು ಶಿರಸಿ ಗ್ರಾಮಾಂತರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ. ಮೊದಲು ತಮ್ಮನ ಕೈಯಲ್ಲಿದ್ದ ಗನ್ ಮಿಸ್ ಫೈರ್ ಆಗಿ ಗುಂಡು ತಗುಲಿತ್ತು ಎನ್ನಲಾಗಿತ್ತು. ಪೊಲೀಸರು ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಗೆ ಬಿದ್ದಿದೆ.
ಮಕ್ಕಳಿಬ್ಬರು ಆಟವಾಡುತ್ತಾ ಏರ್ ಗನ್ ಹಿಡಿದುಕೊಂಡಿದ್ದ ನಿತೀಶ್ ಬಳಿಗೆ ಬಂದಿದ್ದಾರೆ. ವಿಶೇಷ ಚೇತನ ನಿತಿಶ್ ಗೌಡನಿಗೆ ಎಡಗೈ ಊನವಾಗಿತ್ತು. ಮಕ್ಕಳು ಬಂದ ಹಿನ್ನೆಲೆಯಲ್ಲಿ ಏರ್ ಗನ್ ಸರಿಸುವಾಗ ಎಡಗೈ ತಾಗಿತ್ತು. ಪರಿಣಾಮ ಗುಂಡು ನೇರವಾಗಿ ಬಾಲಕ ಕರಿಯಪ್ಪನ ಎದೆ ಸೀಳಿತು. ಪರಿಣಾಮ ಸ್ಥಳದಲ್ಲೇ ಬಾಲಕ ಕರಿಯಪ್ಪ(9) ಮೃತಪಟ್ಟಿದ್ದ. ಗನ್ ಬಳಸುವ ಮಾಹಿತಿಯೇ ಇಲ್ಲದ ಕೆಲಸಗಾರ ನಿತೀಶ್ ಗೌಡ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಗಳನ್ನು ಓಡಿಸಲು ಬಳಸುವ ಏರ್ ಗನ್ ನಿಂದ ಗುಂಡು ಸಿಡಿದು ಅವಘಡ ಸಂಭವಿಸಿತ್ತು.ಈ ಸಂಬಂಧ ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!