ಶಿವಮೊಗ್ಗ : ನರಸತ್ತು ಮಲಗಿದ ಆಹಾರ ಇಲಾಖೆ.! ಶಿವಮೊಗ್ಗ ನಗರದಲ್ಲಿ “ಅನ್ನಭಾಗ್ಯ” ಅಕ್ಕಿಯ ಭರ್ಜರಿ ಅಕ್ರಮ ದಂಧೆ..!
ರಾಜ್ಯ ಸರ್ಕಾರದ ಹೆಮ್ಮೆಯ ಯೋಜನೆ

news.ashwasurya.in
ಸಾಂದರ್ಭಿಕ ಚಿತ್ರ

ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ “ಅನ್ನಭಾಗ್ಯ” ಅಕ್ಕಿಯ ಭರ್ಜರಿ ಅಕ್ರಮ ದಂಧೆ ರಾಜ ರೋಷವಾಗಿ ನೆಡೆಯುತ್ತಿದ್ದು ಕೇಳುವವರೆ ದಿಕ್ಕಿಲ್ಲದಂತಾಗಿದೆ.!ಅಕ್ರಮ ಪಡಿತರ ಅಕ್ಕಿಯ ದಂಧೆಯನ್ನು ಮಟ್ಟ ಹಾಕಬೇಕಾದ ಅಧಿಕಾರಿಗಳು ಲಂಚದ ಹಣಕ್ಕೆ ಕೈಯೊಡ್ಡಿ ಸೈಲೆಂಟಾಗಿ ಕುಳಿತಿದ್ದಾರೆ.ಯಾವ ಮಟ್ಟಕ್ಕೆ ಈ ಪಡಿತರ ಅಕ್ಕಿ ದಂಧೆ ನೆಡೆಯುತ್ತಿದೆ ಎಂದರೆ ಕೇಲವು ಸೊಸೈಟಿಗಳ ಬಾಗಿಲಿನಲ್ಲೆ ಪಡಿತರ ಅಕ್ಕಿ ಬಿಕರಿಯಾಗುತ್ತಿದೆ.ಅ ಮಟ್ಟದ ನೆಟ್‌ವರ್ಕ್ ನೆಡೆಸುತ್ತಿದೆ ದಂಧೆಕೋರ ಗ್ಯಾಂಗ್ ಎಂದರೆ ನೀವು ನಂಬಲೆ ಬೇಕು. ಈ ಅಕ್ರಮ ದಂಧೆಯಲ್ಲಿ ಕೈಜೋಡಿಸಿದ್ದು ಸಮಾಜಮುಖಿ ನಾಯಕ ನೇನ್ನಿಸಿಕೊಂಡ ವ್ಯಕ್ತಿಯೊಬ್ಬ ಈ ದಂಧೆಯಲ್ಲಿ ಕೈಜೋಡಿಸಿ ಆಹಾರ ಇಲಾಖೆಯನ್ನು ತನ್ನ ಸುಪರ್ದಿಗೆ ಇಟ್ಟುಕೊಂಡು ಹಲವು ವರ್ಷಗಳಿಂದ ಹಣ ಗುಡ್ಡೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.!?
ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಜನಪ್ರಿಯ ಯೋಜನೆ “ಅನ್ನಭಾಗ್ಯ” ಯೋಜನೆ

ಇವನ ಬೆನ್ನಿಗೆ ನೂರಾರು ಹುಡುಗರ ದಂಡು ಆಕ್ರಮ ಪಡಿತರದ ದಂಧೆಯಲ್ಲಿ ಆತನಿಗೆ ಕೈಜೋಡಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ಶಿವಮೊಗ್ಗ ನಗರದಲ್ಲಿ ದಂಧೆ ಭರ್ಜರಿಯಾಗಿ ನೆಡೆಯುತ್ತಿದೆ.
ಇಲ್ಲಿ ಗಮನಿಸ ಬೇಕಾಗಿರುವುದು ಆಹಾರ ಇಲಾಖೆಯ ಅಧಿಕಾರಿಗಳು ನೌಕರರು ನಿದ್ದಿಗೆ ಜಾರಿರುವುದು.!? ಶಿವಮೊಗ್ಗದ ಒಂದಷ್ಟು ಜಾಗಗಳಲ್ಲಿ ಅಕ್ರಮ ಪಡಿತರ ಅಕ್ಕಿ ಸಂಗ್ರಹವಾಗಿದ್ದು ಈ ದಂಧೆಯಲ್ಲಿ ದೊಡ್ಡ ದೊಡ್ಡ ತಿಮಿಂಗಿಲ ಗಳೆ ಇದ್ದು ಇದನ್ನೆ ತಮ್ಮ ಬದುಕು ಮಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಆಹಾರ ನಿರೀಕ್ಷಕರು ತಮ್ಮ ಜವಾಬ್ದಾರಿಯನ್ನು ಮರೆತು ಕುಳಿತಂತೆ ಕಾಣುತ್ತಿದೆ.ರಾಜ್ಯದಲ್ಲಿ ಒಂದಷ್ಟು ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿದಂಧೆಯ ವಿರುದ್ಧ ಅಧಿಕಾರಿಗಳು ಸಮರ ಸಾರಿದ್ದು..

ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಅಕ್ರಮ ಪಡಿತರ ಅಕ್ಕಿದಂಧೆ ಜೋರಾಗಿ ನೆಡೆಯುತ್ತಿದ್ದರು ಅಧಿಕಾರಿಗಳ ಕೆಲಸ ಮಾತ್ರ ಶೂನ್ಯವಾಗಿದೆ.. ಯಾವ ಯಾವ ಅಧಿಕಾರಿಗೆ ಎಷ್ಟು.?ಯಾವ ನೌಕರನಿಗೆ ಎಷ್ಟು.? ತಿಂಗಳ ಮಾಮೂಲು ತಲುಪುತ್ತಿದೆ.?ಈ ದಂಧೆಯ ಚುಕ್ಕಾಣಿ ಹಿಡಿದಿರುವ ದಂಗೆಕೋರ ಯಾರು.? ಪಡಿತರ ಅಕ್ಕಿ ಎಲ್ಲಿಂದ ಎಲ್ಲಿಗೆ ಸಾಗಾಟವಾಗುತ್ತದೆ.ಒಂದು ತಿಂಗಳ ಅಕ್ರಮ ಅಕ್ಕಿ ದಂಧೆಯ ವಹಿವಾಟು ಎಷ್ಟು.?
ಶಿವಮೊಗ್ಗ ಜಿಲ್ಲೆಯ ಅದರಲ್ಲೂ ನಗರ ವ್ಯಾಪ್ತಿಯ ಅನ್ನಭಾಗ್ಯ ಅಕ್ಕಿಯ ಅಕ್ರಮ ದಂಧೆಯ ಅಳ ಅಗಲವನ್ನು ನಿಮ್ಮ ಮುಂದೆಡಲಿದ್ದೇನೆ.!? ನಿರೀಕ್ಷಿಸಿ…


