ಧರ್ಮಸ್ಥಳ : ಧರ್ಮಸ್ಥಳ ಚಲೋದಲ್ಲೂ ಬಿಜೆಪಿಯಲ್ಲಿ ಭಿನ್ನಮತದ ಹೊಗೆ.! ಅಸಮಾಧಾನಕ್ಕೆ ಕಾರಣವಾಯ್ತಾ ವಿಜಯೇಂದ್ರ ನಡೆ.!?


news.ashwasurya.in
ಅಶ್ವಸೂರ್ಯ/ಬೆಂಗಳೂರು: ‘ಧರ್ಮಸ್ಥಳ ಚಲೋ’ ಹಮ್ಮಿಕೊಂಡಿದ್ದ ಬಿಜೆಪಿ ಕೊನೆಯ ಕ್ಷಣದಲ್ಲಿ ಹತ್ಯೆಗೀಡಾಗಿದ್ದ ಸೌಜನ್ಯ ನಿವಾಸಕ್ಕೆ ಭೇಟಿನೀಡುವ ಕಾರ್ಯಕ್ರಮ ನಿಗದಿಪಡಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪುಂಜಾ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೌಜನ್ಯ ಮನೆಗೆ ತೆರಳಿ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಾತುಕತೆ ಮಾಡಿ ಸೌಜನ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾದರೆ ಅಗತ್ಯ ಕಾನೂನು ನೆರವು ನೀಡುವ ಭರವಸೆಯನ್ನೂ ನೀಡಿ ಬಂದಿದ್ದರು.ಆದರೆ, ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದು ಈಗ ಬಿಜೆಪಿಯೊಳಗೇ ಆಕ್ಷೇಪಕ್ಕೆ ಕಾರಣವಾಗಿದೆ.
ಬಿಜೆಪಿ ಒಳಗಿನ ಅಸಮಾಧಾನಕ್ಕೆ ಕಾರಣವೇನು? ಎನ್ನುವುದನ್ನು ಹುಡುಕಲು ಹೋದರೆ
ಕೊನೆಯ ಕ್ಷಣದಲ್ಲಿ ಸೌಜನ್ಯ ನಿವಾಸಕ್ಕೆ ಭೇಟಿ ನಿಗದಿಪಡಿಸಿದ ವಿಜಯೇಂದ್ರ.
ಭೇಟಿಗೆ 15 ನಿಮಿಷಗಳ ಮೊದಲು ನಾಯಕರಿಗೆ ಮಾಹಿತಿ ರವಾನೆ ಮಾಡಿದ್ದರು.
ಸಮಾವೇಶ ಮುಗಿಸಿ ಧರ್ಮಸ್ಥಳದಿಂದ ಶಿಕಾರಿಪುರಕ್ಕೆ ನಿಗದಿಯಾಗಿದ್ದ ವಿಜಯೇಂದ್ರ ಟೂರ್ ಪ್ಲಾನ್. ಕೊನೆಯ ಕ್ಷಣದಲ್ಲಿ ಬದಲಾವಣೆಯಾಗಿ ಸೌಜನ್ಯ ನಿವಾಸಕ್ಕೆ ಭೇಟಿ ನಿಗದಿಯಾಗಿತ್ತು.

ಉಳಿದ ನಾಯಕರಿಗೆ ಮಾಹಿತಿ ಹೋಗುವ ವೇಳೆಗಾಗಲೇ ಅವರೆಲ್ಲ ಧರ್ಮಸ್ಥಳದಿಂದ ಬೆಂಗಳೂರು ಮಂಗಳೂರು ಇನ್ನೀತರೆ ಸ್ಥಳಗಳಿಗೆ ಹೋಗಲು ಹಾದಿ ಹಿಡಿದಾಗಿತ್ತು.
ಮಾಹಿತಿ ಬರುವ ವೇಳೆ ಪ್ರಹ್ಲಾದ್ ಜೋಶಿ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿ. ಸುನೀಲ್ ಕುಮಾರ್, ಡಿ.ವಿ. ಸದಾನಂದ ಗೌಡ ಬೆಂಗಳೂರಿನತ್ತ ಹೊರಟಿದ್ದರು.ನಳೀನ್ ಕುಮಾರ್ ಕಟೀಲ್ ಮಂಗಳೂರಿನತ್ತ ಹೊರಟಿದ್ದರು.
ಹೀಗಾಗಿ ಬಿಜೆಪಿಯ ಇತರ ನಾಯಕರು ವಿಜಯೇಂದ್ರ ಜೊತೆ ಸೌಜನ್ಯ ನಿವಾಸಕ್ಕೆ ತೆರಳಿರಲಿಲ್ಲ.ಇದೆ ಅಸಮಧಾನಕ್ಕೆ ಕಾರಣವಿರಬಹುದು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.


