ಮುಖ್ಯಮಂತ್ರಿ ಅವರು ಸೂಚಿಸಿದರೆ ರಾಜಿನಾಮೆಗೆ ಸಿದ್ಧ : ರಾಜ್ಯ ಭೋವಿ ನಿಗಮದ ಅಧ್ಯಕ್ಷ, ಎಸ್ ರವಿಕುಮಾರ್.
AI ತಂತ್ರಜ್ಞಾನ ಬಳಸಿ ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ.
‘ನಾನು ಯಾರ ಬಳಿಯೂ ಕಮೀಷನ್ ಪಡೆದಿಲ್ಲ,
ನಿಗಮದ ಅಧ್ಯಕ್ಷನಾದ ನಂತರ ನಾನು ಯಾರ ಬಳಿಯೂ ಕಮೀಷನ್ ಪಡೆದಿಲ್ಲ. ಯಾರಿಗೂ ಕೊಟ್ಟಿಲ್ಲ. AI ತಂತ್ರಜ್ಞಾನ ಬಳಸಿಕೊಂಡು ತೆಗೆದಿರುವ ವಿಡಿಯೋಯದಲ್ಲಿ ನನ್ನ ಮಾತುಗಳನ್ನು ತಿರುಚಲಾಗಿದೆ. ಎಂದರು. ನಿಗಮದ ಕಚೇರಿಯಲ್ಲಿಯೇ ವಿಡಿಯೊ ಚಿತ್ರೀಕರಿಸಿರುವುದು ಅಚ್ಚರಿ ಮೂಡಿಸಿದೆ. ಈ ಪಿತೂರಿಯಲ್ಲಿ ನಿಗಮದ ಅಧಿಕಾರಿಗಳ ಪಾತ್ರವನ್ನು ಅಲ್ಲಗಳೆಯಲಾಗದು. ಮುಖ್ಯಮಂತ್ರಿ ಮತ್ತು ಡಿಸಿಎಂ ಅವರನ್ನು ಭೇಟಿಯಾಗಿ ವಾಸ್ತವ ಏನೆಂಬುದನ್ನು ಮನವರಿಕೆ ಮಾಡಿಕೊಟ್ಟು ತನಿಖೆ ನಡೆಸುವಂತೆ ಮನವಿ ಮಾಡಲಿದ್ದೇನೆ ಎಂದು ರವಿಕುಮಾರ್ ತಿಳಿಸಿದರು.
ಅಶ್ವಸೂರ್ಯ/ಶಿವಮೊಗ್ಗ : ಪಕ್ಷಕ್ಕೆ ಮುಜುಗರ ಅಗುವುದಾದರೆ ರಾಜೀನಾಮೆ ನೀಡುವೆ ಎಂದು ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಹೇಳಿದರು.
ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾ ಚಾರ ನಡೆದಿದೆ ಎನ್ನುವ ಆರೋಪ ಮಾಧ್ಯ ಮಗಳಲ್ಲಿ ಬಂದಿರುವ ವಿಡಿಯೋಗಳ ಕುರಿತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ಮುಖ್ಯಮಂತ್ರಿಗಳು ನನಗೆ ಫೋನ್ ಮಾಡಿದ್ದು ನಿಜ. ಟಿವಿಗಳಲ್ಲಿ ನಿಮ್ಮ ಬಗ್ಗೆ ಪ್ರಸಾರವಾಗುತ್ತಿದೆ ಎಂದು ಕೇಳಿದರು. ನಾನು ಅವರಿಗೆ ಹೇಳಿದೆ. ನಾನು ಯಾವುದೇ ತಪ್ಪು
ಮಾಡಿಲ್ಲ ಎಂದಿದ್ದೇನೆ. ಅವರು ನನಗೆ ರಾಜೀ ನಾಮೆ ಕೊಡು ಎಂದು ಹೇಳಿಲ್ಲ. ಆದರೆ ಕೊಡ ಬೇಕು ಎಂದು ಅವರು ಹೇಳಿದರೆ ಕೊಡುವೆ. ಪಕ್ಷಕ್ಕೆ ಮುಜುಗರ ಆಗುವುದಾದರೆ ರಾಜಿನಾಮೆ ಕೊಡಲು ಸಿದ್ಧ ಎಂದು ಹೇಳಿದರು.
ನನ್ನ ಮೇಲೆ ಬಂದಿರುವ ಆರೋಪ ಸಂಪೂರ್ಣ ಷಡ್ಯಂತ್ರದಿಂದ ಕೂಡಿದ್ದು. ನಿಗಮದ ಸೌಲಭ್ಯ ನೀಡಲು ಕಮಿಷನ್ ಕೇಳಿದ್ದೇನೆ ಎನ್ನುವ ಆ ವಿಡಿಯೋದಲ್ಲಿ ನಾನು ಇರುವುದು ನಿಜ ವಾದರೂ ಮಾತನಾಡಿದ್ದು ನಾನಲ್ಲ. ಆ ಧ್ವನಿ ನನ್ನದೂ ಅಲ್ಲ. ಇಡೀ ಸಂಭಾಷಣೆಗೆ ಬೇರೆ ಧ್ವನಿ ನೀಡಲಾಗಿದೆ. ಇದಕ್ಕಾಗಿ AI ತಂತ್ರಜ್ಞಾನ(ಕೃತಕ ಬುದ್ಧಿಮತ್ತೆ) ಬಳಸಿ ತಿರುಚಲಾಗಿದೆ. ವಿಡಿಯೋದಲ್ಲಿನ ಧ್ವನಿಗೂ ನನ್ನ ಧ್ವನಿಗೂ ಸಂಬಂಧವೇ ಇಲ್ಲ. ಬೇಕಾದರೆ ಇದನ್ನು ಯಾವುದೇ ರೀತಿಯ ತನಿಖೆಗೆ ಒಳಪಡಿಸಿದರು ನಾನು ಸಿದ್ಧನಿದ್ದೇನೆ ಎಂದರು.

ಇದು ವ್ಯವಸ್ಥಿತವಾದ ಷಡ್ಯಂತ್ರವಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ದಲಿತ ವಿರೋಧಿಗಳು, ಶೋಷಿತ ಸಮುದಾಯದ ವಿರೋಧಿಗಳು ಈ ಪ್ರಕರಣದಲ್ಲಿ ಕೆಲಸ ಮಾಡಿವೆ. ಆ ಕಾರಣ ದಿಂದಲೇ ನಾನು ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸಿದ್ದೇನೆ. ಅಧ್ಯಕ್ಷ ನಾಗಿ ಬಂದ ಮೇಲೆ ನಿಗಮಕ್ಕೆ ಶಿಸ್ತು ತಂದಿದ್ದೇನೆ. ಎಲ್ಲ ವ್ಯವಸ್ಥೆಗಳು ಆನ್ ಲೈನ್ ಮೂಲಕವೇ ನಡೆಯುತ್ತವೆ. ಇಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಬರು ವುದಿಲ್ಲ. ನನ್ನ ಮೇಲಿನ ಆರೋಪಗಳು ಶುದ್ಧ ಸುಳ್ಳು. ಹಿಡನ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿ ಅದಕ್ಕೆ ಇನ್ನೊಬ್ಬರ ಧ್ವನಿ ಸೇರಿಸಿ ಕಮಿಷನ್ ಕೇಳಿದೆ ಎನ್ನು ವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹಾಗಾಗಿ ನನ್ನ ವಿರುದ್ಧದ ಷಡ್ಯಂತ್ರದ
ವಿಡಿಯೋ ತಿರುಚಿದವರ ವಿರುದ್ಧ ನ್ಯಾಯಾ ಲಯಕ್ಕೆ ಹೋಗುವೆ. ಸೂಕ್ತ ತನಿಖೆಗೂ ಒತ್ತಾಯಿ ಸುವೆ. ರಾಜೀನಾಮೆ ಕೊಡಬೇಕು ಎನ್ನುವುದು ಸರ್ಕಾರದ ನಿರ್ಧಾರ. ಇದಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ, ಇಲಾಖೆ ಸಚಿವರನ್ನು ನಾನು ಭೇಟಿ ಮಾಡಬೇಕು. ನಿಜವಾಗಿ ನಡೆದಿರುವುದು ಏನೆಂದು ತಿಳಿಸಬೇಕಾಗಿದೆ. ಮುಂದೆ ಅವರು ನೀಡುವ ಸೂಚನೆಗೆ ನಾನು ಬದ್ಧನಾಗಿದ್ದೇನೆ. ರಾಜೀನಾಮೆ ನೀಡಬೇಕು ಎಂದರೆ ಖಂಡಿತ ನೀಡುವೆ.ಸಂಪೂರ್ಣ ಪ್ರಕರಣವನ್ನು ಸರಿಯಾದ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೀರೇಶ್ ಕ್ಯಾತಿನಕೊಪ್ಪ, ಮನ್ಸೂರ್. ಕೃಷ್ಣಪ್ಪ, ತಿಮ್ಮರಾಜು, ದೇವಿಕುಮಾರ್, ಪಿ.ಒ. ಶಿವಕುಮಾರ,ಬಾಬು ಇದ್ದರು.


