ಏಷ್ಯನ್ ಗೇಮ್ಸ್ ಕ್ರೀಡಾಕೂಟ : ಮಹಿಳಾ ಟಿ20 ಕ್ರಿಕೆಟ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಚಿನ್ನ ಗೆದ್ದು ಬಿಗಿದ ಭಾರತ ತಂಡ

ಚಿನ್ನ ಗೆದ್ದ ಸಂಭ್ರಮದಲ್ಲಿ ಭಾರತೀಯ ವನಿತೆಯರು

ಏಷ್ಯನ್ ಗೇಮ್ಸ್ ಕ್ರೀಡಾಕೂಟ : ಮಹಿಳಾ ಟಿ20 ಕ್ರಿಕೆಟ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಚಿನ್ನ ಗೆದ್ದು ಬಿಗಿದ ಭಾರತ ತಂಡ
ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಫೈನಲ್ ನಲ್ಲಿ ಭಾರತಕ್ಕೆ ಜಯ.ಚಿನ್ನಕ್ಕೆ ಕೊರಳೊಡ್ಡಿದ ಭಾರತದ ವೀರ ವನಿತೆಯರು

ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ ಐತಿಹಾಸಿಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಡೆದೆ ವನಿತೆಯರ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ ತಂಡ 19ರನ್ ಗಳ ಅಂತರದಲ್ಲಿ ಮಣಿಸಿ ಮೊದಲ ಬಾರಿಗೆ ಐತಿಹಾಸಿಕ ಮೊದಲ ಚಿನ್ನದ ಪದಕವನ್ನು ತನ್ನ ಜೋಳಿಗೆಗೆ ಹಾಕಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ವನಿತೆಯರು ಬ್ಯಾಟಿಂಗ್ ನಲ್ಲಿ ಬಾರಿ ಮೊತ್ತವನ್ನು ಕಲೆಹಾಕುವಲ್ಲಿ ವಿಫಲವಾಯಿತು. ಶ್ರೀಲಂಕಾಗೆ ಗೆಲ್ಲಲು ಕೇವಲ 117ರನ್ ಗಳ ಸಾಧಾರಣ ಗುರಿ ನೀಡಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 116 ರನ್ ಗಳನ್ನಷ್ಟೇ ಕಲೆಹಾಕಲು ಸಾಧ್ಯವಾಯಿತು. ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (46 ರನ್, 45 ಎಸೆತ)ಮತ್ತು ಜೆಮಿಮಾ ರೋಡ್ರಿಗಸ್ (42 ರನ್, 40 ಎಸೆತ) ಇವರನ್ನು ಹೊರತು ಪಡಿಸಿ ಉಳಿದಾವರಾರು ಕ್ರಿಸ್ ನಲ್ಲಿ ನಿಂತು ಎರಡಂಕಿ ಮೊತ್ತ ದಾಟಲಿಲ್ಲ.
ಶಫಾಲಿ ವರ್ಮಾ 9 ರನ್ ಗಳಿಸಿ ಔಟಾದರೆ, ರಿಚಾ ಘೋಷ್ 9, ನಾಯಕಿ ಹರ್ಮನ್ ಪ್ರೀತ್ ಕೌರ್‌ ಕೇವಲ 2 ರನ್ ಹೊಡೆದು ವಿಕೆಟ್ ಒಪ್ಪಿಸಿದರು ಇನ್ನೂ ಪೂಜಾ ವಸ್ತ್ರಾಕರ್ 2 ರನ್ ಗಳನ್ನು ಮಾತ್ರಗಳಿಸಿ ನಿರಾಶೆ ಮೂಡಿಸಿದರು. ಶ್ರೀಲಂಕಾ ಪರ ಉದೇಶಿಕ ಪ್ರಬೋಧನಿ, ಸೌಗಂದಿಕಾ ಕುಮಾರಿ ಮತ್ತು ಇನೋಕಾ ರಣವೀರಾ ತಲಾ ಎರಡು ವಿಕೆಟ್ ಪಡೆದು ಬೌಲಿಂಗ್ ನಲ್ಲಿ ಮಿಂಚಿದರು. ನಂತರ ಶ್ರೀಲಂಕಾ ತಂಡ ಗೆಲ್ಲಲು 20 ಓವರ್ ನಲ್ಲಿ 117ರನ್ ಕಲೆಹಾಕಬೇಕಿತ್ತು. ಅದರೆ
ಭಾರತ ನೀಡಿದ 118ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ವನಿತೆಯರು ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 97 ರನ್ ಗಳನ್ನು ಗಳಿಸಲು ಶಕ್ತವಾಯಿತು. ಭಾರತೀಯ ವನಿತೆಯರು ನೀಡಿದ ಸಾದಾರಣ ಮೊತ್ತವನ್ನು ಬೆನ್ನು ಹತ್ತುವಲ್ಲಿ ವಿಫಲರಾದ ಶ್ರೀಲಂಕಾ ವನಿತೆಯರು 19ರನ್ ಗಳ ಅಂತರದಲ್ಲಿ ಭಾರತೀಯರೆದುರು ಸೋಲು ಕಂಡಿತು. ಆರಂಭಿಕ ಹಂತದಲ್ಲೆ ಲಂಕಾದ ಉತ್ತಮ ಆಟಗಾರ್ತಿಯರು ಬೇಗನೆ ಪೆವಿಲಿಯನ್ ಕಡೆ ಹೆಜ್ಜೆಹಾಕಿದರು. ಇದು ಶ್ರೀಲಂಕಾ ತಂಡಕ್ಕೆ ಮುಳುವಾಯಿತು. 
ಭಾರತ ಪರ ಟಿಟಾಸ್ ಸಧು 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ರಾಜೇಶ್ವರಿ ಗಾಯಕ್ವಾಡ್ 2, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಮತ್ತು ದೇವಿಕಾ ವೈದ್ಯ ತಲಾ 1 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಮಾಡಿ ಶ್ರೀಲಂಕಾ ಆಟಗಾರ್ತಿಯರನ್ನು ಕಟ್ಟು ಹಾಕಿದರು. ಶ್ರೀಲಂಕಾ ಪರ ಹಸಿನಿ ಪರೇರಾ 25ರನ್, ನಿಲಾಕ್ಷಿ ಡಿಸಿಲ್ವಾ 23ರನ್ ಮತ್ತು ಒಶಾಧಿ ರಣಸಿಂಘೆ 19ರನ್ ಗಳಿಸಿದರು.
ಒಟ್ಟಿನಲ್ಲಿ ಭಾರತೀಯ ವನಿತೆಯರ ಕ್ರಿಕೆಟ್ ತಂಡ ತಾನು ಭಾಗವಹಿಸಿದ ಮೊದಲ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
 

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!