ಮಂಗಳೂರು : ಅಡ್ಡೂರು ಅಕ್ರಮ ಮರಳು ದಂಧೆಯ ಅಡ್ಡೆಗೆ ಪೊಲೀಸರ ರೈಡ್. ದಾಳಿಯಲ್ಲಿ ಎರಡು ಟಿಪ್ಪರ್ ಸಹಿತ ಹದಿನೈದು ದೋಣಿ ವಶಕ್ಕೆ..!

ಪೋಲಿಸರು ವಶಪಡಿಸಿಕೊಂಡ ದೋಣಿಗಳು

ಮಂಗಳೂರು : ಅಡ್ಡೂರು ಅಕ್ರಮ ಮರಳು ದಂಧೆಯ ಅಡ್ಡೆಗೆ ಪೊಲೀಸರ ರೈಡ್. ದಾಳಿಯಲ್ಲಿ ಎರಡು ಟಿಪ್ಪರ್ ಸಹಿತ ಹದಿನೈದು ದೋಣಿ ವಶಕ್ಕೆ..!

ಮಂಗಳೂರು ತಾಲೂಕಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಗ್ರಾಮದ ನಂದ್ಯಾ ಎಂಬಲ್ಲಿ ಗುರುಪುರದ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಶನಿವಾರ ನಸುಕಿನ ವೇಳೆ ಬಜ್ಪೆ ಪೊಲೀಸರು ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ‌ ನೆಡೆಯುತ್ತಿದೆ ಇದನ್ನು ಮಟ್ಟ ಹಾಕಬೇಕಾದ ಅಧಿಕಾರಿಗಳ ವರ್ಗ ಎಂಜಿಲು ಕಾಸಿಗೆ ಕೈಯೊಡ್ಡಿ ಮೌನಕ್ಕೆ ಜಾರಿದೆ ಪೋಲಿಸ್ ಇಲಾಖೆ ಮಾತ್ರ ತನಗೆ ಮಾಹಿತಿ ಸಿಕ್ಕಾಗಲೇಲ್ಲ ರೈಡು ಬಿದ್ದು ದಂಧೆ ಕೋರರಿಗೆ‌ ಬಿಸಿಮುಟ್ಟಿಸುತ್ತಿದೆ. ಅದರೂ ಮರಳು ದಂಧೆ ಕೋರರು ಮಾತ್ರ ನಿರ್ಭಯವಾಗಿ ತಮ್ಮ ದಂಧೆಯಲ್ಲಿ ತೊಡಗಿಕೊಂಡು ರಾತ್ರಿ ಹಗಲೆನ್ನದೆ ಅಕ್ರಮವಾಗಿ ಮರಳು ಬಾಚುತ್ತಿದ್ದಾರೆ.

ಮಂಗಳೂರು ತಾಲೂಕಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಗ್ರಾಮದ ನಂದ್ಯಾ ಎಂಬಲ್ಲಿ ಗುರುಪುರದ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಶನಿವಾರ ಮುಂಜಾನೆ ಬಜ್ಪೆ ಪೊಲೀಸರು ತಂಡ ಪಕ್ಕಾ ಮಾಹಿತಿ ಅಧಾರದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭ ಸ್ಥಳದಲ್ಲಿದ್ದ ಎರಡು ಮರಳು ತುಂಬಿದ ಟಿಪ್ಪರ್ ಲಾರಿಗಳ‌ ಸಹಿತ ಹದಿನೈದು ದೋಣಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಗುರುಪುರ ಫಲ್ಗುಣಿ ನದಿಯ ತಟದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿರುವ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಬಜ್ಪೆ ಪೊಲೀಸರು ಬೆಳಗ್ಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಈ ಕಾರ್ಯಾಚರಣೆ‌ ಕೈಗೊಂಡಿದ್ದಾರೆ. ಕಾರ್ಯಚರಣೆಯ ವೇಳೆ ಪೋಲಿಸ್ ಅಧಿಕಾರಿಗಳು ಮತ್ತು ಪೋಲಿಸರ ತಂಡ ಪೂರ್ವಯೋಜಿತ ಫ್ಲಾನ್ ನಂತೆ ಮರಳು ಅಡ್ಡೆಯ ಮೇಲೆ ದಾಳಿಮಾಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಖಡಕ್ ಅಧಿಕಾರಿ ಅನುಪಮ್ ಅಗರ್ವಾಲ್ ಐಪಿಎಸ್ ಅವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ ಗೋಯೆಲ್ ಅವರ ನೇತ್ರತ್ವದಲ್ಲಿ ಬಜ್ಪೆ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ತಲಾ 5ಲಕ್ಷ ರೂ. ಮೌಲ್ಯದ ಎರಡು ಟಿಪ್ಪರ್ ಲಾರಿಗಳು, ತಲಾ 50 ಸಾವಿರ ರೂ. ಮೌಲ್ಯದ 15 ದೋಣಿಗಳು ಹಾಗೂ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಸೊತ್ತುಗಳು ಸೇರಿ ಒಟ್ಟು 17.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!