ಸಾಂದರ್ಭಿಕ ಚಿತ್ರ
ಲವ್ ಜಿಹಾದ್ ಆರೋಪ: ಮದುವೆಯಾಗುವುದಾಗಿ ನಂಬಿಸಿ ಧರ್ಮಾಂತರಕ್ಕೆ ಒತ್ತಾಯ!
ಕಳೆದ ಒಂದು ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ (Social Media) ಯುವತಿಯೊಬ್ಬರು ಶ್ರೀನಗರ ಯುವಕನ ವಿರುದ್ಧ ಲವ್ ಜಿಹಾದ್ (Love Jihad) ಆರೋಪ ಮಾಡಿ,ಬೆಂಗಳೂರು ನಗರ ಪೊಲೀಸರಿಗೆ ಒಂದು ಟ್ವೀಟ್ ಮಾಡಿದ್ದಳು. ಲವ್ ಜಿಹಾದ್ ಆರೋಪ ಮಾಡಿದ್ದ ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿ, ಆಕೆಯಿಂದ ಹೇಳಿಕೆ ಪಡೆದು ಎಫ್‌ಐಆರ್ ದಾಖಲಿಸಿ ಕೊಂಡಿದ್ದಾರೆ. ಯುವತಿ ಲವ್ ಜಿಹಾದ್ ಆರೋಪ ಮಾಡಿದ್ದು ಮೊದಲು ಬೆಳ್ಳಂದೂರು ಠಾಣೆಯಲ್ಲಿ (Bellandur Police Station) ಕೇಸ್ ದಾಖಲಾಗಿತ್ತು.ಈ ಪ್ರಕರಣ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಲಾಗಿದ್ದು ಸಂತ್ರಸ್ತ ಯುವತಿ ಹೆಬ್ಬಗೋಡಿ ಪೊಲೀಸರ ಮುಂದೆ ನೆಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ.
ಬೆಂಗಳೂರು: ಲಿವ್ ಇನ್ ಗೆಳತಿಗೆ ಮತಾಂತರವಾಗಲು, ಒತ್ತಾಯ,ಶ್ರೀನಗರ ಮೂಲದ ಟೆಕ್ಕಿ ಬಂಧನ
ಬೆಂಗಳೂರು: 2018 ರಿಂದಲೂ ವಿವಾಹವಾಗುವುದಾಗಿ ನಂಬಿಸಿ ಲಿವ್ ಇನ್ ಗೆಳತಿಗೆ ಕಿರುಕುಳ ನೀಡುತ್ತಿದ ಶ್ರೀನಗರ ಮೂಲದ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 32 ವರ್ಷದ ಟೆಕ್ಕಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನೊಂದಿಗೆ ಇದ್ದ ಯುವತಿಯನ್ನು ಒತ್ತಾಯಪೂರ್ವಕವಾಗಿ ಮತಾಂತರವಾಗುವಂತೆ ಕಿರುಕುಳ ನೀಡುವುದರ ಜೋತೆಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಮೊಗಿಲ್ ಅಶ್ರಫ್ ಬೇಗ್ ಎನ್ನುವಾತ ಒತ್ತಾಯಿಸುತ್ತಿದ್ದನಂತೆ. ಈತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಂತ್ರಸ್ತೆಗೆ ಇತನೊಂದಿಗೆ ಕಳೆದ 2018 ರಿಂದಲೂ ಪರಿಚಯವಿದ್ದಾನೆ ಹಾಗೂ ಇಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರಂತೆ. ಯುವತಿ ಕೂಡ ಟೆಕ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ ಈ ಜೋಡಿ ಮದುವೆಯಾಗಲು ತಿರ್ಮಾನಿಸಿದ್ದರು ಆದರೆ ಅಶ್ರಫ್ ಬೇಗ್ ನಾನು ಮದುವೆಯಾಗಲು ನಿನು ಇಸ್ಲಾಮ್ ಗೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದನಂತೆ! ಅಷ್ಟೇ ಅಲ್ಲದೇ ವಿವಾಹವಾಗುವುದಾಗಿ ನಂಬಿಸಿ ನನ್ನನ್ನು ಬಳಸಿಕೊಂಡಿದ್ದು, ನನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳಂತೆ? ಅಷ್ಟೇ ಅಲ್ಲದೇ ಬೇಗ್ ನ ಸಹೋದರ ಕೂಡ ನನಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ, ನಾನು ಲವ್ ಜಿಹಾದ್ ನ ಸಂತ್ರಸ್ತೆ, ನನ್ನ ಜೀವ ಅಪಾಯದಲ್ಲಿದೆ ಎಂದು ಟ್ವಿಟರ್ ನಲ್ಲಿ ಬರೆದು ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದು, ಮಹಿಳೆ ದೂರು ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣೆ ಅಧಿಕಾರಿಗಳು 376 (ಅತ್ಯಾಚಾರ) 377 (ಅಸಹಜ ಅಪರಾಧಗಳು) 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ಪತ್ತೆಗಾಗಿ ಪೋಲಿಸ್ ಅಧಿಕಾರಿಗಳ ತಂಡ ಆರೋಪಿತನ ಬಂಧನಕ್ಕೆ ಜಮ್ಮು-ಕಾಶ್ಮೀರಕ್ಕೆ ತೆರಳಿ ಆತನ ಇರುವಿಕೆಯ ಜಾಡು ಹಿಡಿದು ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದು ಕೋರ್ಟ್ ಎದುರು ಹಾಜರು ಪಡಿಸಲಾಗಿದೆ. ಕೋರ್ಟ್ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಎರಡು ದಿನಗಳಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಸುಧೀರ್ ವಿಧಾತ ,ಶಿವಮೊಗ್ಗ