Headlines

ಚಿತ್ರದುರ್ಗ :ಪವವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ ಮಾಡಿದ ಕಿರತಾಕರು.!

ಚಿತ್ರದುರ್ಗ :ಪವವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ ಮಾಡಿದ ಕಿರತಾಕರು.!

ಅಶ್ವಸೂರ್ಯ/ ಚಿತ್ರದುರ್ಗ: ದುರ್ಗದ ಹುಲಿ ಮದಕರಿ ನಾಯಕ ಆಳಿದ ಪುಣ್ಯ ಭೂಮಿಯಲ್ಲಿ ಅಮಾಯಕ ವಿಧ್ಯಾರ್ಥಿನಿಯ ಆಕ್ರಂದನ ಮುಗಿಲು ಮುಟ್ಟಿ ಮಸಣ ಸೇರಿದೆ.. ಕೊನೆಯದಾಗಿ ಕೂಗಲು ಧ್ವನಿ ಇಲ್ಲದೆ ಅತ್ಯಾಚಾರಿಗಳ ಆಕ್ರಮಣಕ್ಕೆ ಉಸಿರು ಚಲ್ಲಿದ್ದಾಳೆ.ಪದವಿ ದ್ವಿತೀಯ ವ್ಯಾಸಾಂಗ ಮಾಡುತ್ತಿದ್ದ ಯುವತಿ ವರ್ಷಿತಾ.! ವಿಧ್ಯಾರ್ಥಿನಿ ವರ್ಷಿತಾಳನ್ನು ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿ ಕೊಲೆ ಮಾಡಿರುವ ಸುದ್ದಿ ರಾಜ್ಯವನ್ನೆ ಬೆಚ್ಚಿ ಬಿಳಿಸಿದೆ.ಈ ಘಟನೆ ಮಂಗಳವಾರ ಚಿತ್ರದುರ್ಗ ಗ್ರಾಮಾಂತರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ.
ಕೋವೇರಹಟ್ಟಿ ಮೂಲದ ಪದವಿ ದ್ವಿತೀಯ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ವರ್ಷಿತಾ(19) ಕೊಲೆಯಾದ ಯುವತಿ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ
ಜ್ಯೋತಿ ತಿಪ್ಪೇಸ್ವಾಮಿ ಅವರ ಮಗಳು ವರ್ಷಿತಾ ಅವರು ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ದ್ವಿತೀಯ ವ್ಯಾಸಾಂಗ ಮಾಡುತ್ತಿದ್ದ ಯುವತಿ ನಗರದಲ್ಲಿನ ಎಸ್ಸಿ, ಎಸ್ಟಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡಿದ್ದಳು ಎಂದು ತಿಳಿದುಬಂದಿದೆ.
ಕಳೆದ ಆಗಸ್ಟ್ 14 ರಂದು ಊರಿಗೆ ಹೋಗುವ ಸಂಬಂಧ ಹಾಸ್ಟೆಲ್ ವಾರ್ಡನ್ ಗೆ ರಜೆ ಕೋರಿ ಲಿವ್ ಲೆಟರ್ ನೀಡಿ ಹೋಗಿದ್ದ ವರ್ಷಿತಾ ಗೋನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಬೆಂಕಿಯಿಂದ ಅರೆಬೆಂದ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಗಂಡು ಮಕ್ಕಳಿಲ್ಲದ ಕಾರಣ ಮಗಳು ವರ್ಷಿತಾ ಉತ್ತಮ ವ್ಯಾಸಾಂಗ ಮಾಡಲಿ ಎಂದು ನಗರಕ್ಕೆ ಕಳಿಸಿದ್ದೆವು. ಆದರೆ ಇಂತಹ ಘಟನೆ ನಡೆದಿದೆ. ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಮೃತ ವರ್ಷಿತಾ ತಾಯಿ ಜ್ಯೋತಿ ತಿಪ್ಪೇಸ್ವಾಮಿ ಪೊಲೀಸರ ಮುಂದೆ ಅಳಲು ತೋಡಿ ಕೊಂಡಿದ್ದಾರೆ.
ನನ್ನ ಮಗಳ ಪರಿಸ್ಥಿತಿ ಯಾವ ಮಕ್ಕಳಿಗೂ ಬರುವುದು ಬೇಡ. ನನ್ನ ಮಗಳಂತೂ ಹೋದಳು, ಇರುವ ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಹಾಸ್ಟೆಲ್, ಕಾಲೇಜು ಸಿಬ್ಬಂದಿ ಮಕ್ಕಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.

ಕಳೆದ ಆಗಸ್ಟ್ 14 ರಂದು ಊರಿಗೆ ಹೋಗುವ ಸಂಬಂಧ ಹಾಸ್ಟೆಲ್ ವಾರ್ಡನ್ ಗೆ ರಜೆ ಕೋರಿ ಲಿವ್ ಲೆಟರ್ ನೀಡಿ ಹೋಗಿದ್ದ ವರ್ಷಿತಾ, ನಾಲ್ಕು ದಿನಗಳಿಂದ ಚಿತ್ರದುರ್ಗದ ಹಾಸ್ಟೆಲ್ ನಲ್ಲಿ ಇರಲಿಲ್ಲ. ಅತ್ತ ಕೋವೇರಹಟ್ಟಿಯ ಮನೆಗೂ ವರ್ಷಿತಾ ಬಂದಿರಲಿಲ್ಲ. ಆದರೆ ಇಂದು ಗೋನೂರು ಗ್ರಾಮದ ರಾ ಹೆ 48ರ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಇಂಥ ಮಳೆಗಾಲದಲ್ಲೂ ವಿದ್ಯಾರ್ಥಿನಿಯ ದೇಹ ಸುಟ್ಟು ಹಾಕಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎಂದೆನಿಸುತ್ತದೆ. ಪೊಲೀಸರು ಪ್ರಕರಣ ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕು, ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಮೃತ ವರ್ಷಿತಾ ಸಂಬಂಧಿ ಪ್ರವೀಣ್ ಒತ್ತಾಯಿಸಿದ್ದಾರೆ.
ವಿದ್ಯಾಭ್ಯಾಸಕ್ಕೆಂದು ಪೋಷಕರು ನಗರ ಪ್ರದೇಶಕ್ಕೆ ಮಕ್ಕಳನ್ನು ಕಳಿಸುತ್ತಾರೆ ಆದರೆ ಇಂತಹ ಘಟನೆಗಳು ನಡೆಯುತ್ತವೆಂದರೆ ಬಹಳಷ್ಟು ಆತಂಕವನ್ನು ತರುತ್ತದೆ. ಈ ರೀತಿಯ ಪ್ರಕರಣಗಳು ಉತ್ತರ ಭಾರತದಲ್ಲಿ ನೆಡೆಯುವುದನ್ನು ಕೇಳಿದ್ದೆವು, ಆದರೆ ಇಂದು ಈ ಭಾಗದಲ್ಲಿ ಇಂತಹ ಘಟನೆಗಳು ನಡೆದಿರುವುದು ಪೊಷಕರಲ್ಲಿ ಆತಂಕವನ್ನು ಸೃಷ್ಠಿಸಿದೆ. ಆದ್ದರಿಂದ ಪೊಲೀಸರು ಕಠಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಭಂಡಾರು, ಡಿವೈಎಸ್ಪಿ ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!