Headlines

ಚಿತ್ರದುರ್ಗ:ಪದವಿ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.! ಆರೋಪಿ ಬಂಧನ.

ಅಶ್ವಸೂರ್ಯ/ಚಿತ್ರದುರ್ಗ: ಚಿತ್ರದುರ್ಗ ರಾಷ್ಟ್ರೀಯ ಹೈವೇ ರಸ್ತೆಯಲ್ಲಿ ಪದವಿ ವಿದ್ಯಾರ್ಥಿನಿಯ ಬರ್ಬರ ಹತ್ಯೆ ದುರ್ಗದ ಜನತೆಯನ್ನು ಬೆಚ್ಚಿಬಿಳಿಸಿತ್ತು.!
ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ಪದವಿ ವಿಧ್ಯಾರ್ಥಿನಿ ವರ್ಷಿತಾ (19) ಎಂಬಾಕೆಯನ್ನ ಆಕೆಯ ಪ್ರಿಯಕರನೇ ಬರ್ಬರವಾಗಿ ಹತ್ಯೆಗೈದಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಚೇತನ್ ಎಂಬಾತನನ್ನು ಕೂಡ ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ರಮ ಸಂಬಂಧದ ಆರೋಪ.!
ವಿಚಾರಣೆ ವೇಳೆ ಚೇತನ್​ ಅನೇಕ ವಿಚಾರ ಬಾಯ್ಬಿಟ್ಟಿದ್ದಾನೆ, ಆಕೆ ನಾನು ಗರ್ಭಿಣಿ ಆಗಿದ್ದೇನೆ, ನನ್ನನ್ನು ಮದುವೆಯಾಗು ಎಂದು ಚೇತನ್ ಬಳಿ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಳಂತೆ ಎನ್ನುವುದು ವರದಿಯಾಗಿದೆ. ​ಆಕೆ ಬೇರೋಬ್ಬ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿ ಚೇತನ್​ ಆರೋಪ ಮಾಡಿದ್ದಾನೆ ಎನ್ನಲಾಗ್ತುತ್ತಿದೆ.

ಅಕ್ರಮ ಸಂಬಂಧ ವಿಚಾರಕ್ಕೆ ಸಂಭಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗುತ್ತಿದ್ದು ಅ ಸಮಯದಲ್ಲಿ ವರ್ಷಿತಾ ಮೇಲೆ ಚೇತನ್ ಹಲ್ಲೆ ಮಾಡಿ ಬರ್ಬರವಾಗಿ ಕೊಂದು , ಪೆಟ್ರೋಲ್ ಹಾಕಿ ಸುಟ್ಟುಹಾಕಿದ್ದಾನೆ ಎಂದು ತಿಳಿದುಬಂದಿದೆ.ಈ ಪ್ರಕರಣ ಸಿಪಿಐ ಮುದ್ದುರಾಜ್ ಮತ್ತು ಡಿವೈಎಸ್ಪಿ ದಿನಕರ್ ಅವರ ನೇತೃತ್ವದಲ್ಲಿ ತನಿಖೆಯ ಹಂತದಲ್ಲಿದೆ.
ಪ್ರಿತಿಸಿದವಳನ್ನು ಗರ್ಭಿಣಿ ಮಾಡಿದ್ದನಾ ಈ ಕಾರಣಕ್ಕೆ ಮೋಸ ಮಾಡಲು ಮುಂದಾಗಿದ್ನಾ ಪ್ರಿಯಕರ ಚೇತನ್.?

ವಿದ್ಯಾರ್ಥಿನಿ ವರ್ಷಿತಾ ಗರ್ಭಿಣಿಯಾಗಿದ್ದಳು ಎನ್ನಲಾಗುತ್ತಿದ್ದು ದೈಹಿಕ ಸಂಪರ್ಕ ಬೆಳೆಸಿ ಚೇತನ್ ಆಕೆಗೆ ಮೋಸ ಮಾಡಲು ಮುಂದಾಗಿದ್ದ ಎಂಬ ಆರೋಪ ಕೂಡ ಕೇಳಿ ಬಂದಿದೆ. ಗರ್ಭಿಣಿಯಾಗಿದ್ದೇನೆ, ಮದುವೆ ಆಗು ಎಂದು ಆಕೆ ಪಟ್ಟು ಹಿಡಿದಿದ್ದಳಂತೆ, ಆದರೆ ಚೇತನ್ ಮದುವೆ ಆಗಲು ನಿರಾಕರಿಸಿದ್ದನಂತೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದ್ದು ಅ ಸಂಧರ್ಭದಲ್ಲಿ ಹಲ್ಲೆ ಮಾಡಿದ ಚೇತನ್ ಕೊನೆಗೆ ಆಕೆಯನ್ನ ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾನೆ ಎಂದು ವರದಿ ಆಗಿದೆ.

ಆರೋಪಿ ಚೇತನ್ ಕ್ಯಾನ್ಸರ್ ರೋಗಿ ಎಂಬ ಮಾಹಿತಿ ಬಿಡುಗಡೆಯಾಗಿದೆ. ಈ ಪ್ರಕರಣದಲ್ಲಿ ವಿದ್ಯಾರ್ಥಿನಿ ಒಂದೇ ಸಿಮ್ ಕಾರ್ಡ್ ಗೆ 16 ಮೊಬೈಲ್ ಬಳಕೆ ಮಾಡಿದ್ದಾಳೆ ಎಂಬ ವಿಚಾರ ಕೂಡ ಬೆಳಕಿಗೆ ಬಂದಿದ್ದು ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!