
ಬೆಂಗಳೂರು : ಕಳ್ಳನ ಜೊತೆ ರೋಮಿನಲ್ಲಿ ಪೊಲೀಸಪ್ಪ.! ಕರ್ತವ್ಯ ಲೋಪ – ಪೇದೆ ಸಸ್ಪೆಂಡ್.

news.ashwasurya.in
ಕಳ್ಳನ ಜೋತೆಗೆ ರೂಮಿನಲ್ಲಿದ್ದ ಪೊಲೀಸಪ್ಪ.! ಪೊಲೀಸಪ್ಪನ ಯೂನಿಫಾರ್ಮ್ ಧರಿಸಿದ ಕಳ್ಳ.!! ಪೊಲೀಸ್ ಯೂನಿಫಾರ್ಮ್ ಧರಿಸಿ ಗತ್ತಿನಲ್ಲಿ ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಕಳ್ಳ…!
ಅಶ್ವಸೂರ್ಯ/ಬೆಂಗಳೂರು : ಕೈತುಂಬಾ ಸಂಬಳ ಇದ್ರೂ ಮಾನಗೇಡಿ ಪೊಲೀಸಪ್ಪನೊಬ್ಬ ಕಳ್ಳನ ಜೊತೆ ರೂಮ್ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿದ ಘಟನೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಗೋವಿಂದಪುರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಹೆಚ್.ಆರ್ ಸೋನಾರ್ ತನ್ನ ಜವಾಬ್ದಾರಿ ಮರೆತು ಕುಖ್ಯಾತ ಕಳ್ಳ ಸಲೀಂ ಅಲಿಯಾಸ್ ಬಾಂಬೆ ಸಲೀಂನ ಜೊತೆ ರೂಂ ಶೇರ್ ಮಾಡಿದ್ದ. ಖದೀಮ ಬಾಂಬೆ ಸಲೀಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಪೇದೆಯ ಕಳ್ಳಾಟ ಬಯಲಾಗಿದೆ.

ಸಲೀಂ ಮೊಬೈಲ್ನಲ್ಲಿ ಸೋನಾರ್ನ ಪೊಲೀಸ್ ಯೂನಿಫಾರ್ಮ್ ಧರಿಸಿದ್ದ ಫೋಟೊಗಳು ಪತ್ತೆಯಾಗಿವೆ.ಪೊಲೀಸ್ ಇಲಾಖೆಯ ಪವಿತ್ರ ಖಾಕಿಯ( ಪೇದೆ ಸೋನಾರ್ ಸಮವಸ್ತ್ರ )
ಸಮವಸ್ತ್ರವನ್ನು ಹಾಕೊಂಡು ಪತ್ನಿಗೆ ಖದೀಮ ಸಲೀಂ ವಿಡಿಯೋ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ.
ವಿಚಾರಣೆಯ ವೇಳೆ ಕುಖ್ಯಾತ ಕಳ್ಳ ಸಲೀಂ, ಪೊಲೀಸ್ ಕಾನ್ಸ್ಟೇಬಲ್ ಸೋನಾರ್ನ ಮನೆಯಲ್ಲಿ ವಾಸವಿದ್ದ ವಿಚಾರ ಬಯಲಾಗಿದೆ. ಕಳ್ಳನ ಜೊತೆ ರೂಂ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸೋನಾರ್ನನ್ನು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಕೆಲಸದಿಂದ ಅಮಾನತು ಮಾಡಿದ್ದಾರೆ.
ಇದೀಗ ಪೊಲೀಸರು ಸಲೀಂನ ಜೊತೆ ಪೊಲೀಸ್ ಪೇದೆ ಬರೀ ಸ್ನೇಹ ಮಾತ್ರ ಇಟ್ಟುಕೊಂಡಿದ್ದನ ಅಥವಾ ಬೇರೆ ಬೇರೆ ಲಿಂಕ್ಗಳು ಇರಬಹುದಾ ಎನ್ನುವ ದಿಕ್ಕಿನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.



