ಧರ್ಮಸ್ಥಳ: Youtubers ಮೇಲೆ ಸ್ಥಳೀಯರಿಂದ ಹಲ್ಲೆ.! ಸೌಜನ್ಯಳಿಗಾಗಿ ನ್ಯಾಯ ಕೇಳಿದರೆ ಇವರಿಗ್ಯಾಕೆ ಕೋಪ.? ನಟ ಪ್ರಕಾಶ್ ರಾಜ್.
news.ashwasurya.in
ಅಶ್ವಸೂರ್ಯ/ಧರ್ಮಸ್ಥಳ : ಸ್ಥಳೀಯ ಗೂಂಡಾಗಳಿಂದಲೇ ಧರ್ಮಸ್ಥಳಕ್ಕೆ ಕಳಂಕ ಬಂದಿದೆ. ದಾರುಣವಾಗಿ ಹತ್ಯೆಯಾದ ಸೌಜನ್ಯಳಿಗಾಗಿ ನ್ಯಾಯ ಕೇಳಿದರೆ, ಇವರಿಗೆ ಯಾಕೆ ಕೋಪ. ಈ ಗೂಂಡಾಗಳನ್ನು ಬಂಧಿಸಿ, ಕ್ರಮ ಕೈಗೊಳ್ಳಿ, ಸತ್ಯ ಹೊರತನ್ನಿ ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಹೊರತೆಗೆಯುವ ಕಾರ್ಯಾಚರಣೆಯನ್ನು ವರದಿ ಮಾಡಲು ಹೋಗಿದ್ದ ಯೂಟ್ಯೂಬರ್‌ಗಳ ಮೇಲೆ ನಡೆದಿರುವ ಹಲ್ಲೆ ಘಟನೆಯನ್ನು ನಟ ಪ್ರಕಾಶ್ ರಾಜ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ಗೂಂಡಾಗಳಿಂದಲೇ ಧರ್ಮಸ್ಥಳಕ್ಕೆ ಕಳಂಕ ಬಂದಿದೆ. ದಾರುಣವಾಗಿ ಹತ್ಯೆಯಾದ ಸೌಜನ್ಯಳಿಗಾಗಿ ನ್ಯಾಯ ಕೇಳಿದರೆ, ಇವರಿಗ್ಯಾಕೆ ಕೋಪ.! ಈ ಗೂಂಡಾಗಳನ್ನು ಬಂಧಿಸಿ, ಕ್ರಮ ಕೈಗೊಳ್ಳಿ, ಸತ್ಯ ಹೊರತನ್ನಿ ಎಂದು ಆಗ್ರಹಿಸಿದ್ದಾರೆ.

ಧರ್ಮಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಮಿತ್ರರ ಮೇಲಿನ ಹಲ್ಲೆ ಖಂಡನಾರ್ಹ.. ಇಂತಹ ಗೂಂಡಾಗಳಿಂದಲೇ ಭಕ್ತಾದಿಗಳು ನಂಬುವ ಧರ್ಮಸ್ಥಳಕ್ಕೆ ಕಳಂಕ ಬಂದಿರುವುದು. ಸೌಜನ್ಯಾಳ ದಾರುಣ ಹತ್ಯೆಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ.. ದಯವಿಟ್ಟು ಬಂಧಿಸಿ ಸತ್ಯ ಹೊರತನ್ನಿ ಎಂದು ಒತ್ತಾಯಿಸಿದ್ದಾರೆ.
ಈ ಗೂಂಡಾಗಳ ಹಿಂದೆ ಯಾರಿದ್ದಾರೆ.? ಯಾರು ಅವರನ್ನು ಕಳಿಸಿ, ಹೊಡೆಸುತ್ತಿದ್ದಾರೆ.? ಅನುಮಾನ ಹೆಚ್ಚುತ್ತಿದೆ.! ದಯವಿಟ್ಟು ಪೊಲೀಸರು ಗೂಂಡಾಗಳನ್ನು ಬಂಧಿಸಬೇಕು. ಸತ್ಯಾಸತ್ಯೆಯನ್ನು ತಿಳಿದುಕೊಳ್ಳಬೇಕು. ಕ್ರಮ ಕೈಗೊಳ್ಳಬೇಕು. ನ್ಯಾಯ ಕೇಳುವುದು ನಮ್ಮ ಹಕ್ಕು-ಕರ್ತವ್ಯ ಎಂದು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ
ಮಾಧ್ಯಮ ಮಿತ್ರರ ಮೇಲಿನ ಹಲ್ಲೆ ಖಂಡನಾರ್ಹ.. ಇಂತಹ ಗೂಂಡಾಗಳಿದಲೇ ಭಕ್ತಾದಿಗಳು ನಂಬುವ ಧರ್ಮಸ್ಥಳಕ್ಕೆ ಕಳಂಕ ಬಂದಿರುವುದು.. ಸೌಜನ್ಯಾಳ ದಾರುಣ ಹತ್ಯೆಗೆ ನ್ಯಾಯ ಕೇಳಿದರೆ ಇವರಿಗೇಕೆ ಕೋಪ.. ದಯವಿಟ್ಟು ಬಂಧಿಸಿ ಸತ್ಯ ಹೊರತನ್ನಿ
https://pic.twitter.com/LwOxL3UZkG
— Prakash Raj (@prakashraaj) August 6, 2025



