Headlines

ಆಂದ್ರಪ್ರದೇಶ : ಮೊದಲರಾತ್ರಿಯೇ ಮಸಣ ಸೇರಿದ ವಧು.!? ಸಾವಿಗೆ ಕಾರಣವೇನು.?

ಅಶ್ವಸೂರ್ಯ/ಆಂಧ್ರಪ್ರದೇಶ : ಮದುವೆಯಾಗಿ ಗಂಡನ ಜೋತೆಗೆ ಮೊದಲ ರಾತ್ರಿ ಕಳೆಯ ಬೇಕಾದ ವಧು ಮೊದಲ ರಾತ್ರಿಯ ದಿನದಂದೆ ಆತಹತ್ಯೆ ಮಾಡಿಕೊಂಡು ಮಸಣ ಸೇರಿದ್ದಾಳೆ.!? ಈ ದುರಂತ ಘಟನೆ ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯಲ್ಲಿ ನೆಡೆದಿದೆ.! ಪೆನುಕೊಂಡದ ಸೋಮಂಡೆಪಲ್ಲಿಯಲ್ಲಿ ಈ ಘಟನೆ ನಡೆದಿದ್ದು ಹರ್ಷಿತಾ ಎಂಬ 22 ವರ್ಷದ ವಧು ತನ್ನ ಮದುವೆಯ ಮೊದಲ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹರ್ಷಿತಾ ಕರ್ನಾಟಕ ಮೂಲದ ನಾಗೇಂದ್ರ ಎಂಬುವವರನ್ನು ಮದುವೆಯಾಗಿದ್ದರು. ದಂಪತಿ ವಧುವಿನ ಮನೆಯಲ್ಲಿದ್ದರು.ಮೊದಲ ರಾತ್ರಿಗೆ ಎಲ್ಲಾ ಸಿದ್ಧತೆಗಳು ಶಾಸ್ತ್ರೋಕ್ತವಾಗಿ ನಡೆದಿತ್ತು.ವರ ನಾಗೇಂದ್ರ ಸಿಹಿತಿಂಡಿಗಳನ್ನು ತರಲು ಹೊರಗೆ ಹೋಗಿದ್ದರು.ಅವರು ಹಿಂದಿರುಗಿದಾಗ ಮೊದಲ ರಾತ್ರಿಗೆ ಅಲಂಕಾರವಾಗಿ ವಧು ಹರ್ಷಿತಾರಿದ್ದ ಕೋಣೆ ಲಾಕ್‌ ಆಗಿತ್ತು.! ವರ ನಾಗೇಂದ್ರ ಅವರು ಬಾಗಿಲು ತಟ್ಟಿದರು ಹರ್ಷಿತಾ ತೆಗೆಯಲಿಲ್ಲ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಕೂಡ ಬರಲಿಲ್ಲ ಗಾಬರಿಗೊಂಡ ವರ ನಾಗೇಂದ್ರ ಪದೇ ಪದೆ ಬಾಗಿಲು ಬಡಿದರೂ ಯಾರೂ ಉತ್ತರಿಸಲಿಲ್ಲ,ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಬಾಗಿಲು ಒಡೆದು ನೋಡಿದಾಗ ಒಮ್ಮೆಲೆ ಗಾಬರಿಯಾಗಿದ್ದಾರೆ.!? ವಧು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದು ಕಂಡುಬಂದಿದೆ.

ಮನೆಯವರು ತಕ್ಷಣವೇ ಆಕೆಯನ್ನು ಪೆನುಕೊಂಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಈ ಹಠಾತ್‌ ಮತ್ತು ಆಘಾತಕಾರಿ ಸಾವು ಎರಡೂ ಕುಟುಂಬಗಳಿಗೆ ತೀವ್ರ ದುಃಖ ತರಿಸಿದೆ.
ವಧುವಿನ ಹರ್ಷಿತಾ ಮದುವೆಯಾಗಿ ಮೊದಲ ರಾತ್ರಿಯ ದಿನದಂದೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ಮದುವೆಯ ಕಾರ್ಯಕ್ರಮದಲ್ಲೂ ವಧುವಿನ ಫೋಟೊದಲ್ಲಿ ಯಾವ ನೋವೂ ಇದ್ದಂತೆ ಕಾಣಿಸುತ್ತಿರಲಿಲ್ಲವಂತೆ ಖುಷಿಯಿಂದಲೆ ಹರ್ಷಿತಾ ಇದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.!ಹಾಗಾದರೆ ಆಕೆ ಆತ್ಮಹತ್ಯೆಗೆ ಶರಣಾಗಲು ಅಂತಹ ಕಾರಣವೇನು.? ಎಲ್ಲವೂ ನಿಗೂಢವಾಗಿದೆ.!? ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಧು ಹರ್ಷಿತಾರು ಆತ್ಮಹತ್ಯೆಗೆ ಶರಣಾಗಲು ಕಾರಣವೇನು.? ಎನ್ನುವುದನ್ನು ಕಲೆಹಾಕಲು ಪೊಲೀಸರು ತನಿಖೆ ಮುಂದ್ದಾಗಿರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ದುರಂತಕ್ಕೆ ಕಾರಣವೇನಾಗಿರಬಹುದು ಎಂಬುದು ಯಕ್ಷ ಪಶ್ನೆಯಾಗಿದ್ದು ಇದನ್ನು ತಿಳಿಯಲು ಪೊಲೀಸರು ಎರಡೂ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಶವಪರೀಕ್ಷೆಯ ವರದಿ ಕೂಡ ಇಲ್ಲಿ ಸಾವಿನ ಸತ್ಯವನ್ನು ಬಯಲುಮಾಡುವ ಸಾಧ್ಯತೆ ಇದೆ.? ಹತ್ತು ಹಲವು ಕನಸು ಕಡಿದ್ದ ವರ ಈ ಘಟನೆಯಿಂದ ಸಾಕಷ್ಟು ನೊಂದಿದ್ದಾರೆ, ನಾಗೇಂದ್ರ ಅವರ ಸ್ಥಿತಿ ಯಾರಿಗೂ ಬಾರದಿರಲಿ…

Leave a Reply

Your email address will not be published. Required fields are marked *

Optimized by Optimole
error: Content is protected !!