Headlines

ರೌಡಿಶೀಟರ್: ವಿಲ್ಸನ್ ಗಾರ್ಡನ್ ನಾಗನ ಬಿಲ್ಡಪ್‌ಗಾಗಿ Instagram ಖಾತೆ ತೆರೆದವರ ಮೇಲೆ‌ FIR!

ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಬಿಲ್ಡಪ್‌ಗೆಂದೆ ಕೆಲವರು Instagram ಖಾತೆ ತೆರೆದು ಬಿಲ್ಡಪ್​ ಫೋಟೋಗಳು ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿದ್ರು. ಇದಕ್ಕೆ ಸಂಬಂಧಿಸಿದಂತೆ ಇದೀಗ Instagram ಖಾತೆಗಳನ್ನು ತೆರೆದು, ಅವನ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಒಟ್ಟು ಏಳು ಇನ್ಸ್ಟಾಗ್ರಾಂ ಖಾತೆಗಳನ್ನು ಗುರುತಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಲ್ಸನ್​ ಗಾರ್ಡನ್​​ ನಾಗನ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದು ರೌಡಿಶೀಟರ್ ನಾಗನಿಗೆ ಸಂಭಂಧಿಸಿದ ವಿಡಿಯೋ, ಫೋಟೋಗಳನ್ನು ಅಪ್ಲೋಡ್​ ಮಾಡಲಾಗ್ತಿತ್ತು. ಈ ಖಾತೆಗಳ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ, ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಮತ್ತು ಯುವಕರನ್ನು ಪ್ರಚೋದಿಸುವ ಸಂದೇಶಗಳನ್ನು ಹರಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಜಾಗೃತರಾಗಿದ್ದರು.

ರೌಡಿಶೀಟರ್​​ ನಾಗನ ಸಹಚರರಿಂದ ಇನ್ಸ್ಟಾ ಖಾತೆ ತೆರೆದು ವಿಡಿಯೋ, ಫೋಟೋ ಅಪ್ಲೋಡ್​ ಮಾಡ್ತಿದ್ದ ಬಗ್ಗೆ ಸಿದ್ದಾಪುರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರೌಡಿಶೀಟರ್ ನಾಗನನ್ನು ಕೇಂದ್ರೀಕರಿಸಿ ಕೆಲವರು ಅವನ ಚಟುವಟಿಕೆಗಳನ್ನು ಗುಣಗಾನ ಮಾಡುವ ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳಲ್ಲಿ ಆಯುಧಗಳನ್ನು ತೋರಿಸುವುದು, ದಾದಗಿರಿಯನ್ನು ಗೌರವಿಸುವ ಸಂದೇಶಗಳನ್ನು ಒಳಗೊಂಡಿದ್ದು, ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ವಿಷಯಗಳಿವೆ ಎಂದು ಪೊಲೀಸರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಇಂತಹ ಕೃತ್ಯಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಲ್ಲದೆ ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿ ದೆ.ಸಿದ್ದಾಪುರ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) (ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಸುಳ್ಳು ಮಾಹಿತಿಯ ಹರಡುವಿಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಗಳನ್ನು ದಾಖಲಿಸಿಕೊಳ್ಳಲಾಗಿದೆ.ರೌಡಿಶೀಟರ್ ನಾಗನನ್ನು ಬಿಂಬಿಸುವಂತಹ ಖಾತೆಗಳನ್ನು ನಿರ್ವಹಿಸುತ್ತಿರುವವರ ಐಪಿ ವಿಳಾಸಗಳನ್ನು ಗುರುತಿಸಲು ಪೊಲೀಸ್ ತಂಡವು ತಾಂತ್ರಿಕ ತನಿಖೆಯನ್ನು ಆರಂಭಿಸಿದೆ.

“ಸಾಮಾಜಿಕ ಜಾಲತಾಣಗಳ ಮೂಲಕ ರೌಡಿಗಳನ್ನು ಗೌರವಿಸುವ ಮತ್ತು ಅವರ ಚಟುವಟಿಕೆಗಳನ್ನು ಉತ್ತೇಜಿಸುವ ವಿಡಿಯೋಗಳು ಯುವಕರ ಸಮೂಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದು ಕಾನೂನು ಸುವ್ಯವಸ್ಥೆಗೆ ಗಂಭೀರ ಸವಾಲಾಗಿದೆ,” ಎಂದು ಸಿದ್ದಾಪುರ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.
“ಇಂತಹ ಖಾತೆಗಳನ್ನು ತಕ್ಷಣವೇ ತೆಗೆದುಹಾಕಬೇಕು. ಇದು ಸಾರ್ವಜನಿಕ ಭದ್ರತೆಯನ್ನು ಸಂಬಂಧಿಸಿದೆ,” ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ. ಈ ಘಟನೆಯ ತನಿಖೆ ತೀವ್ರಗೊಂಡಿದ್ದು, ಆರೋಪಿಗಳನ್ನು ಶೀಘ್ರದಲ್ಲಿ ಗುರುತಿಸಿ ಕಾನೂನಿನಡಿಯಲ್ಲಿ ಕಠಿಣ ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!