Headlines

ಹೈದರಾಬಾದ್ : ಚಿಕಿತ್ಸೆಗೆ ಬಂದಿದ್ದ ಮಾನಸಿಕ ಅಸ್ವಸ್ಥನನ್ನೆ ಪ್ರೀತಿಸಿ ಮದುವೆಯಾದ ಮನೋವೈದ್ಯೆ..! ಪತಿ ಹಾಗೂ ಆತನ ಕುಟುಂಬಸ್ಥರ ಕಿರುಕುಳ ಬೇಸತ್ತು ಆತ್ಮಹತ್ಯೆ ಶರಣು.!

ಅಶ್ವಸೂರ್ಯ/ಹೈದರಾಬಾದ್ : ಇದೆಂತಹ ಹುಚ್ಚು ಪ್ರೀತಿ.ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತು ಕೂಡ ಸತ್ಯವೇ ಹೌದು.!ಒಬ್ಬ ಮಾನಸಿಕ ರೋಗಿಯ ಕಾಯಿಲೆಯನ್ನು ವಾಸಿ ಮೇಡಬೇಕಾದ ಮನೋವೈದ್ಯೆಯೇ ಮಾನಸಿಕ ರೋಗಿಯೊಂದಿಗೆ ಪ್ರೀತಿಯಲ್ಲಿ ಬಿದ್ದು, ತನ್ನ ಬದುಕನ್ನೇ ಅಂತ್ಯ ಮಾಡಿಕೊಂಡಿರುವ ದಾರುಣ ಘಟನೆಯೊಂದು ಹೈದರಾಬಾದ್ ನಲ್ಲಿ ಘಟಿಸಿ ಹೋಗಿದೆ.!?

ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ಮಾನಸಿಕ ಅಸ್ವಸ್ಥನನ್ನೆ ಪ್ರೀತಿಸಿ ವಿವಾಹವಾಗಿದ್ದ ಮನೋವೈದ್ಯೆ ಪತಿ ಹಾಗೂ ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. 33 ವಷದ ಎ.ರಜಿತಾ ಸಾವಿಗೆ ಶರಣಾಗಿರುವ ಮನೋವೈದ್ಯೆ ಎಂದು ತಿಳಿದುಬಂದಿದೆ.! ಹೈದರಾಬಾದ್ ನ ಸನತ್ ನಗರದ ಜೆಕ್ ಕಾಲೋನಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ವೈದ್ಯೆ ರಜಿತಾ ಪತಿ ರೋಹಿತ್ ಹಾಗೂ ಆತನ ಕುಟುಂಬದವರು ದಿನನಿತ್ಯ ನೀಡುತ್ತಿದ್ದ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ,ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯ ತಂದೆ ಸಬ್ ಇನ್ಸ್ ಪೆಕ್ಟರ್ ನರಸಿಂಹ ಗೌಡ ನೀಡಿದ ದೂರಿನ ಮೇರೆಗೆ ಸಂಜೀವ್ ರೆಡ್ಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಬ್ ಇನ್ಸ್‌ಪೆಕ್ಟರ್ ನರಸಿಂಹ ಗೌಡ ಪುತ್ರಿ ರಜಿತಾ ಮನೋವಿಜ್ಞಾನದಲ್ಲಿ ಪದವಿ ಪಡೆಯುತ್ತಿದ್ದಾಗ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ನನ್ನು ಭೇಟಿಯಾಗಿದ್ದರು. ರಜಿತಾ ಬಂಜಾರಾ ಹಿಲ್ಸ್ ಆಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದರು. ಮನೋರೋಗದಿಂದ ಬಳಲುತ್ತಿದ್ದ ರೋಹಿತ್ ರೋಗಿಯಾಗಿದ್ದ. ವೈದ್ಯೆ ರಜಿತಾ ಕೌನ್ಸೆಲಿಂಗ್ ಬಳಿಕ ರೋಹಿತ್ ಮಾನಸಿಕ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳಾಗಿವೆ.ಅ ನಂತರ ಸಾಕಷ್ಟು ಚೇತರಿಸಿಕೊಂಡು ಮೊದಲಿನಂತೆ ಆಗಿದ್ದಾನೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ವೈದ್ಯೆ ರಜಿತಾ ಹತ್ತಿರ ತನ್ನ ಪ್ರೇಮ ನಿವೇದನೆ ಮಾಡಿದ್ದನಂತೆ.! ಹೀಗೆ ಮನೋವೈದ್ಯೆ ರಜಿತಾ, ರೋಹಿತ್ ನ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ರೋಹಿತ್ ಮತ್ತೆ ಬದಲಾಗಿದ್ದ. ತನ್ನ ಕೆಲಸ ಬಿಟ್ಟು ಪತ್ನಿ ಸಂಬಳದ ಮೇಲೆ ಅವಲಂಭಿತನಾಗಿದ್ದೂ ಅಲ್ಲದೇ ಆಕೆಗೆ ತೊಂದರೆ ಕೊಟ್ಟು ಆಕೆಯ ಹಣವನ್ನು ಪಾರ್ಟಿ ಹಾಗೂ ವೈಯಕ್ತಿಕ ಖರ್ಚಿಗೆ ಬಳಸುತ್ತಿದ್ದ. ಸಾಲದ್ದಕ್ಕೆ ಆತನ ತಂದೆ-ತಾಯಿಯೂ ವಿಚಿತ್ರ ವರಸೆ ಆರಂಭಿಸಿದ್ದರಂತೆ. ಆದರೂ ವೈದ್ಯೆಯಾಗಿದ್ದ ರಜಿತಾ ಪತಿ ರೋಹಿತ್ ಗೆ ನಿನ್ನ ನಡವಳಿಕೆಯನ್ನು ಬದಲಿಸಿಕೊ ಎಂದು ಹೇಳುತ್ತಿದ್ದರಂತೆ, ಆತನನ್ನು ತಿದ್ದಲು ಸಾಕಷ್ಟು ಪ್ರಯತ್ನಿಸಿದ್ದು ನಾಯಿಬಾಲ ಡೊಂಕು ಎನ್ನುವ ಗಾದೆಮಾತಿನಂತೆ ರೋಹಿತ್ ಬದಲಾಗಲಿಲ್ಲ.
ರೋಹಿತ್ ಹಾಗೂ ಆತನ ತಂದೆ ಕಿಷ್ಟಯ್ಯ, ತಾಯಿ ಸುರೇಖಾ, ಸಹೋದರ ಮೋಹಿತ್, ರಜಿತಾಗೆ ನಿರಂತರವಾಗಿ ಕಿರುಕುಳ ಕೊಟ್ಟು ಹಿಂಸೆ ನೀಡುತ್ತಿದ್ದರಂತೆ. ಅಂತಿಮವಾಗಿ ರಜಿತಾ ಹಣ ನೀಡಲು ನಿರಾಕರಿಸುತ್ತಿದ್ದಂತೆ ರೋಹಿತ್ ರಜಿತಾ ಮೇಲೆ ಹಲ್ಲೆ ನಡೆಸಿದ್ದಾನಂತೆ.? ಇದರಿಂದ ಬೇಸತ್ತ ರಜಿತಾ ಜುಲೈ16ರಂದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದ ರಜಿತಾಳನ್ನು ಪೋಷಕರು ಜೆಕ್ ಕಾಲೋನಿಯ ಮನೆಗೆ ಕರೆತಂದಿದ್ದರು. ಜುಲೈ 28ರಂದು ತಮ್ಮ ಮನೆಯ ಸ್ನಾನದ ಗೃಹದ ಕಿಡಕಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು.
ತಲೆಯ ಭಾಗಕ್ಕೆ ಗಂಭೀರವಾದ ಪೆಟ್ಟು ಬಿದ್ದಿದ್ದು, ಅವರನ್ನು ಅಮೀರ್ ಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದ ವೈದ್ಯರು ರಜಿತಾಳ ಮೆಡುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. ಇದೀಗ ರಜಿತಾ ಕೊನೆಯುಸಿರೆಳೆದಿದ್ದಾರೆ. ಮನೋರೋಗಿಯ ಪ್ರೀತಿಯಲ್ಲಿ ಬಿದ್ದ ಮೈನೋವೈದ್ಯೆಯೇ ಪತಿಯ ಹುಚ್ಚಾಟಕ್ಕೆ ದುರಂತ ಅಂತ್ಯ ಕಂಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ರಜಿತಾರ ತಂದೆ ಸಬ್-ಇನ್ಸ್‌ಪೆಕ್ಟರ್ ನರಸಿಂಹ ಗೌಡ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಸಂಜೀವ ರೆಡ್ಡಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಂದೆಯ ದೂರಿನ ಆಧಾರದ ಮೇಲೆ ರಜಿತಾರ ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ಸಂಜೀವ ರೆಡ್ಡಿ ನಗರ ಪೊಲೀಸ್ ಅಧಿಕಾರಿ ದೃಢಪಡಿಸಿದ್ದಾರೆ. “ತನಿಖೆ ಮುಂದುವರೆದಿದ್ದು, ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!