ಧರ್ಮಸ್ಥಳ: ಆರನೇ ದಿನದ ಕಾರ್ಯಾಚರಣೆಯಲ್ಲಿ ಕಳೇಬರ ಪತ್ತೆಯಾಗಿರುವ ಶಂಕೆ.!?
news.ashwasurya.in
ಅಶ್ವಸೂರ್ಯ/ಧರ್ಮಸ್ಥಳ : ಆರನೇ ದಿನದ ಕಾರ್ಯಚರಣೆಯ ವೇಳೆ 11ನೇ ಜಾಗದಿಂದ ಎಸ್‌ಐಟಿ ತಂಡವನ್ನು ಕಾಡಿನ ಪ್ರದೇಶಕ್ಕೆ ಕರೆದೊಯ್ದಿದ್ದ ದೂರುದಾರ ಕಾರ್ಯಾಚರಣೆ ವೇಳೆ ಕಳೇಬರ ಪತ್ತೆಯಾಗಿರುವ ಶಂಕೆ.!
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯುತ್ತಿರುವ ಮೃತದೇಹಗಳಿಗಾಗಿ ಹುಟುಕಾಟದ ಕಾರ್ಯದಲ್ಲಿ ಹೊಸ ಬೆಳವಣಿಗೆ ನಡೆದಿದ್ದು, ಸಾಕ್ಷಿ ದೂರುದಾರ ಇಂದು ಹೊಸ ಸ್ಥಳಕ್ಕೆ ಎಸ್‌ಐಟಿ ತಂಡವನ್ನು ಕರೆದೊಯ್ದಿದ್ದಾರೆ. ಅಲ್ಲಿ ಕಳೇಬರವೊಂದು ಪತ್ತೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ.

ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಲು ಅಧಿಕಾರಿಗಳು ಮುಂದಾಗಿಲ್ಲ. ಆತ ಈ ಹಿಂದೆ ಗುರುತಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸದೆ, ಹೊಸ ಸ್ಥಳದಲ್ಲಿ ಹುಡುಕಾಟ ನಡೆಸುವ ವೇಳೆ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೊರಬರುತ್ತಿದೆ. ಆದರೆ ಅರಣ್ಯದ ಒಳಗೆ ಹೋದ ತಂಡ ಅರಣ್ಯದಿಂದ ಇನ್ನೂ ಹೊರಬಂದಿಲ್ಲ.
ಅರಣ್ಯದ ಒಳಭಾಗಕ್ಕೆ ನಾಲ್ವರು ಸಶಸ್ತ್ರ ತಂಡದ ಸದಸ್ಯರು ತೆರಳಿದ್ದಾರೆ. ಇದು ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಎರಡು ಮೂಟೆ ಉಪ್ಪನ್ನು ಕೊಂಡೊಯ್ದಿದ್ದಾರೆ.ಉಪ್ಪು ಒಯ್ಯಲು ಕಾರಣ ಸಾಕಷ್ಟು ಮಳೆ ಸುರಿಯುತ್ತಿರುವುದರಿಂದ ಕಾಡಿನಲ್ಲಿ ಸಾಕಷ್ಟು ಜಿಗಣೆಗಳು ಇರುತ್ತವೆ ಇದು ಕಾರ್ಯಚರಣೆಗೆ ಅಡ್ಡಿಯಾಗುವ ಕಾರಣಕ್ಕೆ ಅ ಸ್ಥಳದಲ್ಲಿ ಉಪ್ಪನ್ನು ಸುತ್ತಾ ಮುತ್ತ ಸುರಿದು ಕಾರ್ಯಚರಣೆ ಮಾಡಬಹು ಉಪ್ಪು ಜಿಗಣೆಗಳನ್ನು ನಾಶ ಮಾಡುತ್ತದೆ ಈ ಕಾರಣಕ್ಕೆ ಉಪ್ಪನ್ನು ಕಾಡಿನೋಳಕ್ಕೆ ಒಯ್ದಿರುವ ಸಾಧ್ಯತೆ ಇದೆ…!



