420 ಅಭಿನವ ಹಾಲಶ್ರೀ ಸ್ವಾಮೀಜಿ
ಚೈತ್ರ ಅಂಡ್ ಗ್ಯಾಂಗ್ ನಿಂದ ಉದ್ಯಮಿ ವಂಚನೆ ಪ್ರಕರಣ: ಆರೋಪಿ ಅಭಿನವ ಹಾಲಶ್ರೀ ಬಂಧನದ ಸಂಪೂರ್ಣ ವರದಿ
ಒಡಿಸ್ಸಾದಲ್ಲಿ ಸೆರೆ ಸಿಕ್ಕುವ ಮುನ್ನ ಅಭಿನವ ಹಾಲಶ್ರೀ ಮೈಸೂರಿನಿಂದ ಹೈದಾರಬಾದ್ ಗೆ ಪ್ರಯಾಣ ಬೆಳೆಸಿದವರು ಅಲ್ಲಿ ಶ್ರೀ ಶೈಲಾ ಮಠದಲ್ಲಿ ಆಶ್ರಯ ಪಡೆದಿದ್ದರು
ಸ್ವಾಮೀಜಿ ನಂತರ ಗಂಜಾಂ ಮಾರ್ಗವಾಗಿ ಪೂರಿಗೆ ತಲುಪಿದ ಕುಖ್ಯಾತ ಕಲಾವಿದ ಅಭಿನವ ಹಾಲಶ್ರೀ ತಾನು ಮಾಡಿದ ಪಾಪದ ಕೆಲಸಕ್ಕೆ ಪೂರಿಜಗನ್ನಾಥನ ದರ್ಶನ ಪಡೆದಿದ್ದನಂತೆ ಅಲ್ಲಿಂದ ಕೊನಾರ್ಕ್ ಟೆಂಪಲ್ ಗೆ ತಲುಪಿದ್ದನಂತೆ
ಅಲ್ಲಿ ದೇವರ ದರ್ಶನ ಪಡೆದ ಕಳ್ಳ ಸ್ವಾಮೀಜಿ ಅಭಿನವ ಹಾಲಶ್ರೀ ಶ್ರೀಶೈಲ ಸ್ವಾಮೀಜಿಗೆ ಕರೆ ಮಾಡಿ ಕಾಶಿಯತ್ತ ತೆರಳಿ ತಲೆಮರೆಸಿಕೊಳ್ಳುವ ಪ್ಲಾನ್ ಒಂದನ್ನು ರೆಡಿಮಾಡಿ ಕೊಂಡಿದ್ದನಂತೆ
ಗೋವಿಂದ ಬಾಬು ಪೂಜಾರಿ ಅವರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ & ಗ್ಯಾಂಗಿನ A3 ಆರೋಪಿ ಆಗಿರುವ ಹಾಲಾಶ್ರೀ ಸಿಸಿಬಿ ಪೋಲಿಸರಿಗೆ ಹೆದರಿ ತಲೆಮರೆಸಿಕೊಂಡಿದ್ದ. ಪ್ರಕರಣದ ಮೂರನೇ ಆರೋಪಿಯಾಗಿರುವ ಸ್ವಾಮೀಜಿ ಕೊನೆಗೂ ಅನ್ಯ ರಾಜ್ಯದ ಪೋಲಿಸರ ಕೈಗೆ ಸೆರೆಸಿಕ್ಕಿದ್ದಾನೆ. ಬಂಧನದ ಭೀತಿಗೆ ಹೆದರಿದ ಖದೀಮ ಸ್ವಾಮಿ ಪವಿತ್ರ ಕಾವಿ ತೊಟ್ಟು ದೇವರ ಜಪ ತಪ ಪೂಜೆ ಪುನಸ್ಕಾರಮಾಡಿಕೊಂಡು ಮಠದ ಮಂದಿರದಲ್ಲಿ ಗಂಟೆ ಹೊಡೆದುಕೊಂಡು ಇರಬೇಕಾದ ಸ್ವಾಮಿ ಕಂಡವರ ಗಂಟಿಗೆ ಕೈ ಹಾಕಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಈತ ಕಾವಿ ತೊಟ್ಟು ಓಡಾಡಿದರೆ ಯಾರಾದರೂ ಕಂಡುಹಿಡಿಯ ಬಹುದು ಎನ್ನುವ ಕಾರಣಕ್ಕೆ ಕಾವಿ ತೆಗೆದು ಟೀ ಶರ್ಟ್ ಧರಿಸಿ ಮದುಮಗನಂತೆ ಸಿಂಗಾರಗೊಂಡಿದ್ದ ಅಭಿನವ ಹಾಲಶ್ರೀಯನ್ನು ಒಡಿಸ್ಸಾದ ಕಟಕ್ ನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಸಿಬಿ ಪೋಲಿಸರು ಪ್ರಕರಣ ದಾಖಲಿಸಿ ಕೊಳ್ಳುತ್ತಿದ್ದಂತೆ ತಲೆಮರೆಸಿಕೊಳ್ಳಲು ಮುಂದಾದ ಅಭಿನವ ಹಾಲಶ್ರೀ ಟ್ರಾವೆಲ್ ಹಿಸ್ಟರಿಯು ರೋಚಕವಾಗಿದೆ. ಹಾಲಶ್ರೀ ಬಂಧನದ ಆಪರೇಷನ್ ಹೇಗಿತ್ತು ಅನ್ನೋ ಸಂಪೂರ್ಣ ವರದಿ ಇಲ್ಲಿದೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಐದು ಕೋಟಿ ರೂಪಾಯಿಗೆ ನಾಮತಿಕ್ಕಿದ ವಂಚನೆ ಪ್ರಕರಣದಲ್ಲಿ ಚೈತ್ರ ಕುಂದಾಪುರ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಮೂರನೆ ಆರೋಪಿ ಸ್ವಾಮೀಜಿ ಕೊನೆಗೂ ಅಂದರ್ ಆಗಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅಭಿನವ ಹಾಲಶ್ರೀ ಸೋಮವಾರ ರಾತ್ರಿ ಒಡಿಸ್ಸಾದ ಕಟಕ್ ರೈಲ್ವೇ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
ವಂಚನೆ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಅಭಿನವ ಹಾಲಶ್ರೀ ಡೆಂಜರಸ್ ಕಾವಿ.ಸಿಸಿಬಿ ಪೊಲೀಸರ ಬಂಧನ ಭೀತಿಯಿಂದ ತಾನು ಧರಿಸಿದ್ದ ಕಾವಿಯನ್ನು ತೆಗೆದು ಟೀ ಶರ್ಟ್ ಧರಿಸಿ ಕಾಶಿಯತ್ತ ಪ್ರಯಾಣ ಬೆಳೆಸಲು ಮುಂದಾಗಿದ್ದ ಇದೆ ವೇಳೆ ಸಿಸಿಬಿ ಪೊಲೀಸರು ರಾಷ್ಟ್ರಾದ್ಯಂತ ಪೋಲಿಸ್ ಇಲಾಖೆಗೆ ಮೋಸ್ಟ್ ವಾಂಟೆಡ್ ಎಂದು ಕಳುಹಿಸಿಕೊಟ್ಟಿದ್ದ ಸ್ವಾಮೀಜಿ ಪೋಟೋ ನೋಡಿದ್ದ ಒಡಿಸ್ಸಾ ಪೊಲೀಸರು ಪರಿಶೀಲಿಸುತ್ತಿರುವ ವೇಳೆಗೆ ಹಾಲಶ್ರೀ ಸ್ವಾಮಿ ಪತ್ತೆಯಾಗಿದ್ದಾನೆ ಕೂಡಲೇ ವಶಕ್ಕೆ ತೆಗೆದುಕೊಂಡು ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಹಾಲಶ್ರೀ ಬೆನ್ನು ಬಿದ್ದು ಹಿಂದೆಯೇ ಹೊರಟಿದ್ದ ಸಿಸಿಬಿ ಪೋಲಿಸರ ವಿಶೇಷ ತಂಡವೊಂದು ಹಾಲಶ್ರೀಯನ್ನು ಒಡಿಸ್ಸಾ ಪೋಲಿಸರ ವಶದಿಂದ ತಮ್ಮ ವಶಕ್ಕೆ ಪಡೆದು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ
ಒಡಿಸ್ಸಾದ ಪೋಲಿಸರಿಗೆ ಸೆರೆ ಸಿಕ್ಕುವ ಮುನ್ನ ಅಭಿನವ ಹಾಲಶ್ರೀ ಮೈಸೂರಿನಿಂದ ಹೈದಾರಬಾದ್ ಗೆ ಪ್ರಯಾಣ ಬೆಳೆಸಿ ಶ್ರೀಲೈಲ ಮಠದಲ್ಲಿ ಆಶ್ರಯ ಪಡೆದಿದ್ದಾನೆ. ಬಳಿಕ ಗಂಜಾಂ ಮಾರ್ಗವಾಗಿ ಪೂರಿಗೆ ತಲುಪಿದ್ದ ಅಭಿನವ ಹಾಲಶ್ರೀ ಮಾಡಿದ ಕರ್ಮಕ್ಕೆ ಪೂರಿಜಗನ್ನಾಥನ ದರ್ಶನವನ್ನು ಪಡೆದುಕೊಂಡಿದ್ದಾನೆ ನಂತರ ಕೊನಾರ್ಕ್ ಟೆಂಪಲ್ಲಿಗೆ ತಲುಪಿದ್ದ. ಅಲ್ಲಿ ದೇವರ ದರ್ಶನ ಪಡೆದ ಅಭಿನವ ಹಾಲಶ್ರೀ ಶ್ರೀಶೈಲ ಸ್ವಾಮೀಜಿಗೆ ಕರೆ ಮಾಡಿ ಕಾಶಿಯತ್ತ ತೆರಳಿ ತಲೆಮರೆಸಿಕೊಳ್ಳುವ ತೀರ್ಮಾನ ಮಾಡಿದ್ದ ಆದರೆ ಮಾಡಿದ ಪಾಪಕ್ಕೆ ಕಾಶಿ ವಿಶ್ವನಾಥನೆ ತನ್ನ ದರ್ಶನ ಮಾಡುವ ಮೊದಲೇ ಪೋಲಿಸರ ದರ್ಶನ ಮಾಡಿಸಿ ಬಂಧನ ಆಗುವಂತೆ ನೋಡಿಕೊಂಡಿದ್ದಾನೆ. ಸ್ವಾಮೀಜಿ ಬೆನ್ನು ಬಿದ್ದಿದ್ದ ಸಿಸಿಬಿಗೆ ಸ್ವಾಮೀಜಿ ಖರೀದಿ ಮಾಡಿದ್ದ ರೈಲ್ವೇ ಟಿಕೆಟಿನ ಪಿಎನ್ಆರ್ ನಂಬರ್ ಕ್ಲೂ ನೀಡಿತ್ತು.ಆ ಮಾಹಿತಿ ಆಧಾರದ ಮೇಲೆ ಕಾರ್ಯ ಪ್ರವೃತ್ತರಾದ ಸಿಸಿಬಿ ಟೀಂ ರೈಲ್ವೆ ಸ್ಟೇಷನ್ ಬಳಿ ಹೊತ್ತಿದ್ದಹಾಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಹಾಲಶ್ರೀ ಟಿಕೆಟ್ ಪಡೆದ ಸ್ಟೇಷನ್ ಬಿಟ್ಟು ಮುಂದಿನ ರೈಲ್ವೇ ಸ್ಟೇಷನ್ ನಲ್ಲಿ ರೈಲು ಹತ್ತಿದ್ದ ಆದರೆ ಕೊನೆಗೆ ಮುಂದಿನ ಕಟಕ್ ರೈಲ್ವೇ ನಿಲ್ದಾಣದಲ್ಲಿ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಸದ್ಯ ಬಂಧನಕ್ಕೊಳಗಾಗಿರೋ ಹಾಲಶ್ರೀಯನ್ನ ಬೆಂಗಳೂರಿಗೆ ಕರೆತಂದಿದ್ದಾರೆ.ಸಿಸಿಬಿ ಪೋಲಿಸರು ಸ್ವಾಮೀಜಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ಪಡೆಯಲಿದ್ದಾರೆ. ಇವೆಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನಾಳೆ ಚೈತ್ರ ಹಾಗೂ ಹಾಲಶ್ರೀ ಮುಖಾಮುಖಿ ವಿಚಾರಣೆ ನಡೆಸಲಿದ್ದು,ಸ್ಪೋಟಕ ಮಾಹಿತಿ ಹೊರ ಬೀಳಲಿದೆ. ಆ ರೀತಿ ಹೊರಬೀಳುವ ಮಾಹಿತಿಯಿಂದ ಐದು ಕೋಟಿ ವಂಚನೆ ಪ್ರಕರಣ ಮತ್ಯಾವ ದಿಕ್ಕಿಗೆ ತಿರುವು ಪಡೆದುಕೊಳ್ಳಲಿದೆಯೊ ಕಾದು ನೋಡಬೇಕು.
ಸುಧೀರ್ ವಿಧಾತ ,ಶಿವಮೊಗ್ಗ