ರೌಡಿ ತಲ್ಲತ್ ಫೈಜಲ್
ಕರಾವಳಿ ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ ಬೆದರಿಕೆ, ಹಪ್ತಾ ವಸೂಲಿ ಹೀಗೆ ಹತ್ತಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಪಡೀಲ್ ಫೈಸಲ್ ನಗರ ನಿವಾಸಿಯಾಗಿದ್ದರೂ ಗೋವಾ, ಮುಂಬೈನಲ್ಲಿದ್ದುಕೊಂಡೇ ಅಂಡರ್ ವರ್ಲ್ಡ್ ಅನ್ನು ನಿಯಂತ್ರಿಸುತ್ತಿದ್ದ ತಲ್ಲತ್ ಗ್ಯಾಂಗಿನ ನಾಯಕ ತಲತ್’ (39) ಬಂಧಿತ ವ್ಯಕ್ತಿ. ಈತನ ಹಿನ್ನಲೆಯೆ ವಿಚಿತ್ರ ಸುಮಾರು 19 ವರ್ಷಕ್ಕೆ ಪಾತಕಲೋಕಕ್ಕೆ ಪಾದಾರ್ಪಣೆ ಮಾಡಿದ ಚಿಗುರು ಮಿಸೆಯ ಹುಡುಗ ತಲ್ಲಕ್. ನೆತ್ತರ ಕಲೆ ಅಂಟಿಸಿಕೊಂಡವನು ತಿರುಗಿ ನೋಡಲಿಲ್ಲ.ಕ್ರೈಮ್ ಜಗತ್ತಿನಲ್ಲಿ ಕಳೆದುಹೋದ! ಕಳೆದ ಇಪ್ಪತ್ತು ವರ್ಷಗಳಿಂದ ತಲ್ಲತ್ ಮಂಗಳೂರಿನಲ್ಲಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ಇತ್ತೀಚೆಗೆ ತಲ್ಲತ್ ಮುಂಬೈನಿಂದ ತವರೂರು ಮಂಗಳೂರಿಗೆ ಆಗಮಿಸಿದ್ದ. ತಲ್ಲತ್ ಬಂದಿದ್ದ ಮಾಹಿತಿ ತಿಳಿದ ಸಿಸಿಬಿ ಪೊಲೀಸರ ತಂಡ ಕೊಟ್ಟಾರದಲ್ಲಿದ್ದಾಗ ಬಂಧಿಸಿದ್ದಾರೆ. ಬಳಿಕ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ, 2004ರಲ್ಲಿ ಮೊದಲ ಬಾರಿಗೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಲ್ಲತ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಹರಾಜ, ಬರ್ಚಿ, ಮುಂಬೈ ಮುಂತಾದ ಕಡೆಗಳಲ್ಲಿ ಹತ್ಯೆ, ಜೀವ ಬೆದರಿಕೆ, ಹಪ್ತಾ ವಸೂಲಿ, ದರೋಡೆ, ಕೊಲೆಯತ್ನ, ಕೊಲೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಅಪಹರಣ ಹೀಗೆ ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಈತ ಮುಂಬಯಿ ಮತ್ತು ಗೋವಾದಲ್ಲಿದ್ದುಕೊಂಡೆ ಮಂಗಳೂರು ಭೂಗತ ಜಗತ್ತಿನ ಮೇಲೆ ಹಿಡಿತ ಸಾಧಿಸಿದ್ದ ಎನ್ನುವ ಮಾತು ಕೇಳಿ ಬರುತ್ತಿದೆ. ತನಗೆ ಬರಬೇಕಾದ ಹಫ್ತಾ ವಸೂಲಿಯ ಹಣವನ್ನು ಮುಂಬಯಿ ಮತ್ತು ಗೋವಾದಲ್ಲಿದ್ದುಕೊಂಡೆ ಪಡೆಯುತ್ತಿದ್ದ ಅ ಮಟ್ಟದ ಹವಾ ಮೈಂಟೆನ್ ಮಾಡುತ್ತಿದ್ದನಂತೆ.
ಇಂತಹ ಮೋಸ್ಟ್ ವಾಂಟೆಯ ಕ್ರಿಮಿನಲ್ ನನ್ನು ಕೊನೆಗೂ ಬಂಧಿಸುವಲ್ಲಿ ಮಂಗಳೂರು ಸಿಸಿಬಿ ತಂಡ ಯಶಸ್ವಿಯಾಗಿದೆ.
ಸುಧೀರ್ ವಿಧಾತ ,ಶಿವಮೊಗ್ಗ