Headlines

ಚಾಮರಾಜನಗರ : ಉದ್ಯಮಿಯನ್ನು ವಸತಿ ಗೃಹಕ್ಕೆ ಕರೆಸಿ ದಾಳಿ.!ಆತನಿಂದ 3.70 ಲಕ್ಷ ದೋಚಿ ಎಸ್ಕೇಪ್ ಅದ ಪಿಎಸ್ಐ ತಂಡ.!

ಚಾಮರಾಜನಗರ : ಉದ್ಯಮಿಯನ್ನು ವಸತಿ ಗೃಹಕ್ಕೆ ಕರೆಸಿ ದಾಳಿ.!ಆತನಿಂದ 3.70 ಲಕ್ಷ ದೋಚಿ ಎಸ್ಕೇಪ್ ಅದ ಪಿಎಸ್ಐ ಗ್ಯಾಂಗ್.!

ಅಶ್ವಸೂರ್ಯ/ಚಾಮರಾಜನಗರ: ಚಾಮರಾಜನಗರದ ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಹಾಗೂ ಟೀಂ ಸೇರಿ ಹಣ (Money) ಡಬ್ಬಲ್‌ ಮಾಡುವುದಾಗಿ ತಮಿಳುನಾಡು ಉದ್ಯಮಿಯೊಬ್ಬರಿಗೆ 3.70 ಲಕ್ಷ ರೂ. ವಂಚಿಸಿದ್ದು ಭಯಲಾಗಿ ಬಂಧನ ಭೀತಿಯಿಂದ ಎಸ್ಕೇಪ್ ಆಗಿದ್ದಾರೆ.
ಚಾಮರಾಜನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯನಗೌಡ ಅದೇ ಠಾಣೆಯ ಕಾನ್ಸ್‌ಟೇಬಲ್‌ ಮೋಹನ್, ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಕಾನ್ಸ್‌ಟೇಬಲ್ ಬಸವಣ್ಣರ ಮೇಲೆ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ನಾಲ್ಕು ಮಂದಿ ಆರೋಪಿಗಳು ಈಗ ನಾಪತ್ತೆಯಾಗಿದ್ದಾರೆ. ಈ ಪ್ರಕರಣ ಬಯಲಾಗುತ್ತಿದ್ದಂತೆ ಮಾಹಿತಿ ತಿಳಿದ ಎಸ್‌ಪಿ ಡಾ.ಬಿ.ಟಿ ಕವಿತಾ ಅವರು ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದಾರೆ.

ಕಳೆದ ಜುಲೈ 26 ರಂದು ತಮಿಳುನಾಡು ಮೂಲದ ಉದ್ಯಮಿ ಸಚ್ಚಿದಾನಂದ ಮೂರ್ತಿಗೆ ಕರೆ ಮಾಡಿ, ಸೈಯದ್ ಅನ್ಸಾರಿ ಹಾಗೂ ಇಮ್ರಾನ್ 3 ಲಕ್ಷ ರೂ. ತನ್ನಿ ಆ ಹಣವನ್ನ ಒಂದು ತಿಂಗಳ ಒಳಗಾಗಿ ಡಬಲ್ ಮಾಡಿ ಕೊಡ್ತೀವಿ ಎಂದು ನಂಬಿಸಿದ್ದಾರೆ. ಈ ವಿಚಾರ ನಂಬಿ ಉದ್ಯಮಿ ಚಾಮರಾಜನಗರದ ಹೋಟೆಲ್ ಗೆ ಬಂದಿದ್ದಾರೆ. ಈ ವೇಳೆ ಮೊದಲೇ ಪಕ್ಕಾ ಪ್ಲ್ಯಾನ್ ಮಾಡಿದ ರೀತಿ ಅನ್ಸಾರಿ ಹಾಗೂ ಸೈಯದ್ ಸಿಇಎನ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಯ್ಯನ ಗೌಡಗೆ ವಿಷಯ ತಿಳಿಸುತ್ತಾರೆ. ತಕ್ಷಣವೇ ಅಯ್ಯನಗೌಡ ಮೂರು ಜನ ಕಾನ್ಸ್‌ಟೇಬಲ್ ಜೊತೆ ಸೇರಿ ಹೋಟೆಲ್ ಮೇಲೆ ದಾಳಿ ಮಾಡಿ ಆತನಿಗೆ ಧಮ್ಕಿ ಹಾಕಿ,ಹೆದರಿಸಿ ಕೇಸ್ ರಿಜಿಸ್ಟರ್ ಆಗಬಾರ್ದು ಅಂದ್ರೆ 4 ಲಕ್ಷ ರೂ. ಕೊಡಿ ಎಂದು ಹೆದರಿಸಿದ್ದಾರೆ. ಬಳಿಕ ಉದ್ಯಮಿ ಬಳಿಯಿದ್ದ 3 ಲಕ್ಷ ಹಣ ಕಸಿದುಕೊಂಡು, 70 ಸಾವಿರ ರೂ. ಹಣವನ್ನು ಫೋನ್ ಪೇ ಮೂಲಕ ಅನ್ಸಾರಿ ಎಂಬ ಮತ್ತೊಬ್ಬ ಆರೋಪಿಯ ಖಾತೆಗೆ ಹಾಕಿಸಿ ಕೊಂಡಿದ್ದರು.
ಉದ್ಯಮಿ ಸಚ್ಚಿದಾನಂದ ಸೀದಾ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆರೋಪಿಗಳಾದ ಅನ್ಸಾರಿ ಹಾಗೂ ಸೈಯದ್ ಬಂಧನ ಆಗುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಬಸವಣ್ಣ, ರಮೇಶ್ ಹಾಗೂ ಮೋಹನ್ ಈಗ ತಲೆ ಮರೆಸಿಕೊಂಡಿದ್ದಾರೆ. ಆರೋಪಿ ಪೋಲಿಸರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇಂತಹ ಬೆರಳೆಣಿಕೆಯ ನೀಚ ಪೊಲೀಸರಿಂದ ಕರ್ನಾಟಕದ ಹೆಮ್ಮೆಯ ಪೊಲೀಸ್ ಇಲಾಖೆಯೆ ತಲೆ ತಗ್ಗಿಸುವಂತಾಗಿದೆ…

Leave a Reply

Your email address will not be published. Required fields are marked *

Optimized by Optimole
error: Content is protected !!