ಶ್ರೀನಗರ: ಪೆಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಸುಲೇಮಾನ್ ಮೂಸಾ ಮಟಾಶ್.

news.ashwasurya.in
ಅಶ್ವಸೂರ್ಯ/ ಶ್ರೀನಗರ : ಪೆಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಪಾಕಿಸ್ತಾನದ ಪಾರಾ ಕಮಾಂಡೋ ಹಾಸೀಂ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾ ಸೇರಿದಂತೆ ಮೂರು ಮಂದಿ ಉಗ್ರರನ್ನು ಸಿಆರ್ಪಿಎಫ್ ಹಾಗೂ ಕಾಶ್ಮೀರ ಪೊಲೀಸರು ಆಪರೇಶನ್ ಮಹಾದೇವ್ ಹೆಸರಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಉಗ್ರರು ಕಾಡಿನಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿಯ ಅಧಾರದ ಮೇಲೆ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಕೊಲ್ಲಲಾಗಿದೆ.

ಉಗ್ರರ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗದ ಮಂಜುನಾಥ್
ಏಪ್ರಿಲ್ 22ರಂದು ಪೆಹಲ್ಗಾಮ್ನಲ್ಲಿ ನಡೆದ 26 ಪ್ರವಾಸಿಗರ ನರಮೇಧ ನಡೆಸಿದ ಪ್ರಮುಖ ಉಗ್ರ ಹಾಸೀಂ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾ ಶಿವಮೊಗ್ಗದ ಮಂಜುನಾಥ್ ಅವರನ್ನು ಕಳೆದುಕೊಂಡ ನೋವಿನಲ್ಲಿ ಪತ್ನಿ ಕೂಡ ನಮ್ಮನ್ನು ಕೊಲ್ಲು ಎಂದು ಗೋಳಾಡಿದಾಗ.ನಿಮ್ಮನ್ನು ಕೊಂದರೆ ನಿಮ್ಮ ಪ್ರಧಾನಿ ಮೋದಿಗೆ ಹೋಗಿ ಹೇಳೊರು ಯಾರು.?ನೀವು ಹೋಗಿ ಹೇಳಬೇಕು ಎಂದು ಅವಾಜ್ ಹಾಕಿದ್ದ.ಈಗ ಮಂಜುನಾಥ್ ಅವರ ಆತ್ಮಕ್ಕೂ ಚಿರಶಾಂತಿ ದೊರಕಿದೆ ಕಾರಣ ಉಗ್ರ ಸುಲೇಮಾನ್ ಮೂಸ ಭಾರತೀಯ ಸೇನಾ ಪಡೆ ಮತ್ತು ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುಂಡಿನೇಟಿಗೆ ಮಟಾಶ್ ಆಗಿದ್ದಾನೆ.
ಇದೀಗ ಆತನನ್ನು ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಹಾಸೀಂ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದು, ಇತ ವಿಶೇಷ ತರಬೇತಿ ಕೂಡ ಪಡೆದಿದ್ದ. ಪೆಹಲ್ಗಾಮ್ ದಾಳಿಯಲ್ಲಿ ಐಎಸ್ಐ ಪಾತ್ರ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ.ಅಲ್ಲದೆ, ಇತ ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು ಎಂದು ಗೊತ್ತಾಗಿದೆ. ಇದರೊಂದಿಗೆ ಎಸ್ಎಸ್ಜಿ ಕಮಾಂಡೋ ಯುದ್ಧದಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದುಬಂದಿದೆ.
ಅಲ್ಲದೇ ಈ ಮಹಾದೇವ್ ಬೆಟ್ಟದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಈ ಹಿನ್ನಲೆಯಲ್ಲಿ ಜನತೆಯನ್ನು ಮನೆಯಿಂದ ಹೊರಬಾರದಂತೆ ಮನವಿ ಮಾಡಿದ್ದಾರೆ.
ಅಲ್ಲಿರುವ ದಚಿಗಮ್ ಅರಣ್ಯ ಪ್ರದೇಶವನ್ನು ಉಗ್ರರ ಪ್ರಮುಖ ಅಡುಗುತಾಣವೆಂದು ಪರಿಗಣಿಸಲಾಗಿದೆ.ಗಡಿ ಪ್ರದೇಶದ ಬಳಿ ನೆಲಬಾಂಬ್ ಸ್ಪೋಟ ನಡೆದಾಗ ಒಬ್ಬ ಸೈನಿಕ ಹುತಾತ್ಮರಾಗಿ, ಮೂವರು ಗಾಯಗೊಂಡಿದ್ದರು. ಇದರ ಹೊಣೆಯನ್ನು ಟಿಆರ್ಎಫ್ ಹೊತ್ತಿತ್ತು.
ಒಟ್ಟಿನಲ್ಲಿ ಪೆಹಲ್ಗಾಮ್ ದಾಳಿಯ ಪ್ರಮುಖ ರೂವಾರಿ ಸುಲೇಮಾನ್ ಮೂಸ ಮಟಾಶ್ ಆಗಿದ್ದಾನೆ ಎನ್ನುವುದು ಸಂತೋಷದ ವಿಷಯ.



