ಮೈಸೂರಿನಲ್ಲಿ ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ ಹುಚ್ಚಾಟಕ್ಕೆ ಗಂಭೀರವಾಗಿ ಗಾಯಗೊಂಡ ವೃದ್ಧ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿ ಸೈಯ್ಯದ್ ಐಮಾನ್ನನ್ನು ಬಂಧಿಸಿದ್ದರು. ಈತನ ವಿರುದ್ಧ ಕಳ್ಳತನ ಆರೋಪವೂ ಇದ್ದು, ಇತ್ತೀಚೆಗಷ್ಟೇ ವ್ಹೀಲಿಂಗ್ ಮಾಡಿದ್ದಕ್ಕೆ ಆತನನ್ನು ವಶಕ್ಕೆ ಪಡೆದ ಪೊಲೀಸರು ದಂಡ ವಿಧಿಸಿ ಕಳುಹಿಸಿದ್ದರು.ನಂಜನಗೂಡಿನ ಸಂಚಾರಿ ಠಾಣೆಯ ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ ಹುಚ್ಚಾಟಕ್ಕೆ ಗಂಭೀರವಾಗಿ ಗಾಯಗೊಂಡ ವೃದ್ಧ ಕಳೆದ ಶನಿವಾರ ಕೊನೆಯುಸಿರೆಳೆದಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ವ್ಹೀಲಿಂಗ್ ಮಾಡಿದ್ದ ಸೈಯ್ಯದ್, ಉದಯಗಿರಿ ನಿವಾಸಿ ವೃದ್ಧ ಗುರುಸ್ವಾಮಿ ಅವರಿಗೆ ಡಿಕ್ಕಿ ಹೊಡೆದಿದ್ದನು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗುರುಸ್ವಾಮಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಹಿಡಿದ ಸ್ಥಳೀಯರು ವಿಚಾರಣೆ ನಡೆಸಿದಾಗ ನಾನು ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಯಾಸ್ಮಿನ್ ತಾಜ್ ಅವರ ಪುತ್ರ ಎಂದು ಹೇಳಿದ್ದ….
ಪೊಲೀಸ್ ಇಲಾಖೆ ವಿರುದ್ಧವೇ ಕಿಡಿಕಾರಿದ ಯಾಸ್ಮಿನ್ ತಾಜ್
ತನ್ನನ್ನು ವರ್ಗಾವಣೆ ಮಾಡಿದ ಇಲಾಖೆಯ ವಿರುದ್ಧವೇ ಯಾಸ್ಮಿನ್ ತಾಜ್ ಕಿಡಿಕಾರಿದರು. ʻʻThis is what I get from my lovely deportment hats off” ಎಂದು ವರ್ಗಾವಣೆ ಆದೇಶಕ್ಕೆ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಪೆಟ್ಟು ತಿಂದಿದ್ದಕ್ಕೆ ಕಲ್ಲು ವಿಗ್ರಹವಾಯಿತು. ಆದರೆ ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯಿತು. ನೋವು ಕೊಟ್ಟವರು ಹಾಗೆಯೇ ಉಳಿಯುತ್ತಾರೆ. ನೋವನ್ನು ಉಂಡವರು ಜೀವನದಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಅಪ್ರಾಪ್ತನಿಗೆ ಬೈಕ್ ಕೊಡಿಸಿರುವ ಪೋಷಕರ ಮೇಲೆ ಯಾವುದೇ ಕ್ರಮಕೊಂಡಿಲ್ಲ. ಇದಕ್ಕೆ ಮೇಲಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದರು. ಇದಕ್ಕೆ ಉತ್ತರ ನೀಡಲಾಗದೆ ಡಿವೈಎಸ್‌ಪಿ ಮೌನಕ್ಕೆ ಜಾರಿದರು.
ಪಿಎಸ್‌ಐ ಪುತ್ರನಿಂದ ನಡುರಸ್ತೆಯಲ್ಲೆ ನಿತ್ಯ ಬೈಕ್ ವ್ಹೀಲಿಂಗ್,ಇತನ ಹುಚ್ಚಾಟಕ್ಕೆ ವೃದ್ಧರೊಬ್ಬರ ಹೆಣ ಬಿತ್ತು!!
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸಂಚಾರಿ ಠಾಣೆಯ ಪಿಎಸ್‌ಐ ಆಗಿದ್ದ ಯಾಸ್ಮಿನ್ ತಾಜ್ ಅವರ ಪುತ್ರ ಸಯ್ಯದ್ ಐಮಾನ್ ಹೆದ್ದಾರಿಯಲ್ಲಿ ಬೈಕ್ ನಲ್ಲಿ ವ್ಹೀಲಿಂಗ್ ಮಾಡುತ್ತ ವೃದ್ಧ ಪಾದಚಾರಿ ಒಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧರಿಗೆ ಗಂಭೀರ ಸ್ವರೂಪದ ಗಾಯಗಳಾದ ಕಾರಣಕ್ಕೆ ಒಂದೆರಡು ದಿನ ಆಸ್ಪತ್ರೆಯ ಹಾಸಿಗೆಯ ಮೇಲೆ ನರಳಾಡಿದ ಅವರು ಕೊನೆ ಉಸಿರು ಏಳೆದಿದ್ದಾರೆ. ಅಮಾಯಕರೊಬ್ಬರ ಪ್ರಾಣಕ್ಕೆ ಕುತ್ತು ತಂದ ಕಾರಣಕ್ಕೆ ಸಾರ್ವಜನಿಕರ ಆಗ್ರಹದ ಮೇರೆಗೆ ನಡು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ವೃದ್ಧರೊಬ್ಬರ ಪ್ರಾಣ ತೆಗೆದ ಸಯ್ಯದ್ ಐಮಾನ್ ಅವರ ತಾಯಿ ನಂಜನಗೂಡು ಸಂಚಾರಿ ಠಾಣೆಯ ಪೋಲಿಸ್ ಅಧಿಕಾರಿ ಪಿಎಸ್ಐ ಯಾಸ್ಮಿನ್ ತಾಜ್ ಅವರನ್ನು ಮಗ ಮಾಡಿದ ಅನಾಹುತದ ಹಿನ್ನಲೆಯಲ್ಲಿ ನಂಜನಗೂಡಿನಿಂದ ಎತ್ತಂಗಡಿಮಾಡಿ ಮೈಸೂರಿನ ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಅಮಾಯಕ ಮೃತವ್ಯಕ್ತಿ ದನಗಾಹಿ ರಂಗಸ್ವಾಮಿ ಎಂದು ಗುರುತಿಸಲಾಗಿದೆ. ಶವವನ್ನು ರವಿವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡುವ ವೇಳೆ ಗ್ರಾಮಸ್ಥರು ವೃದ್ಧರೊಬ್ಬರ ಸಾವಿಗೆ ಕಾರಣನಾದ ಐಮಾನ್
ಅದು ಸಂಚಾರಿ ಠಾಣೆಯ ಜವಬ್ದಾರಿಯುತ ಪಿಎಸ್‌ಐ ಯಾಸ್ಮಿನ್ ತಾಜ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ತಾಯಿ ಸಂಚಾರಿ ಠಾಣೆಯ ಪಿಎಸ್ಐ ಎಂಬ ಕಾರಣಕ್ಕೆ ತನಗೆ ಯಾರ ಭಯವಿಲ್ಲದಂತೆ ಮೆರೆಯುತ್ತಿದ್ದ ಅಮ್ಮನ ಕುಮ್ಮಕ್ಕಿನಿಂದಲೆ ಪುತ್ರ ಪದೇ ಪದೆ ವ್ಹೀಲಿಂಗ್ ಮಾಡಿ ಜನರ ಜೀವಕ್ಕೆ ಸಂಚಕಾರವಾಗಿದ್ದಾನೆ. ನಾವು ಯಾವುದೇ ಕಾರಣಕ್ಕೂ ಶವ ತೆಗೆದುಕೊಂಡು ಹೋಗುವುದಿಲ್ಲ. ಪಿಎಸ್‌ಐ ಯಾಸ್ಮಿನ್ ತಾಜ್‌ರನ್ನು ಅಮಾನತು ಮಾಡಿ, ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಡಿವೈಎಸ್ಪಿ ಗೋವಿಂದ ರಾಜು ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು. ನೀವು ಕೊಟ್ಟ ದೂರಿನ ಅನುಸಾರವೇ ಎಫ್ಐಆರ್ ದಾಖಲಿಸಿದ್ದೇವೆ. ಜತೆಗೆ ಆತನ ತಾಯಿ ಯಾಸ್ಮಿನ್ ತಾಜ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.ಬಳಿಕ ಪ್ರತಿಭಟನಕಾರರು ಪ್ರತಿಭಟನೆಯನ್ನು ಹಿಂಪಡೆದರು ನಂತರ ಶವಸಂಸ್ಕಾರಕ್ಕೆ ಮುಂದಾದರು.
ಸುಧೀರ್ ವಿಧಾತ ,ಶಿವಮೊಗ್ಗ