CRIME NEWS
ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದಾಗ ಘಟನೆ
ಉತ್ತರ ಪ್ರದೇಶದ ಹಂಸವಾರ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ಹಿ ಐದಿಲ್‌ಪುರದ ನಿವಾಸಿ 17 ವರ್ಷ ನೈನ್ಸಿ ಪಟೇಲ್ ಮೃತ ದುರ್ದೈವಿ ಹೀರಾಪುರ ಬಜಾರ್‌ನ ರಾಮರಾಜಿ ಕಾಲೇಜಿನಲ್ಲಿ 12ನೇ ತರಗತಿ ಓದುತ್ತಿದ್ದಳು. ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಳು. ಈ ವೇಳೆ ಕೆಲ ಪುಂಡರ ಗ್ಯಾಂಗ್ ಯುವತಿಯನ್ನು ಬೈಕ್ ನಲ್ಲಿ ಹಿಂಬಾಲಿಸಿದ್ದಾರೆ. ಬಾಲಕಿಯನ್ನು ಚುಡಾಯಿಸಿ ಕಿರುಕುಳ ನೀಡಿದ್ದಾರೆ. ಹೀರಾಪುರ ಮಾರುಕಟ್ಟೆ ಬಳಿ ಬಂದಾಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ವೇಗವಾಗಿ ಯುವತಿಯ ದುಪ್ಪಟ ಎಳೆದಿದ್ದಾರೆ.
ಬೈಕ್ ಹಿಂಬದಿ ಕುಳಿತಿದ್ದವನಿಂದ ಕೃತ್ಯ
ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಪುಂಡ ವಿಧ್ಯಾರ್ಥಿನಿಯ ದುಪ್ಪಟವನ್ನ ಎಳೆದಿದ್ದಾನೆ. ಇದರಿಂದ ಸೈಕಲ್ನಲ್ಲಿದ್ದ ಹುಡುಗಿ ಸಮತೋಲನ ತಪ್ಪಿ ರಸ್ತೆಗೆ ಬಿದ್ದಿದ್ದಾಳೆ. ಇದೆ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸಿಸಿ ಟಿವಿಯ ಒಂದರಲ್ಲಿ ದಾಖಲಾದ ಘಟನೆಯ ವಿಡಿಯೋ ತುಣುಕೊಂದು ವೈರಲ್ ಆಗಿದೆ. ಬೈಕ್ ಹಿಂಬದಿ ಕುಳಿತ ವ್ಯಕ್ತಿ ವಿದ್ಯಾರ್ಥಿನಿಯ ದುಪ್ಪಟ ಎಳೆದಿರುವುದು ಸಿಸಿಟಿವಿಯಲ್ಲಿ ಬಹಿರಂಗವಾಗಿದೆ.
ಘಟನೆಯ ಕುರಿತು
ಮಾತನಾಡಿದ ವಿದ್ಯಾರ್ಥಿಯ ತಂದೆ, ಅಪಘಾತದಲ್ಲಿ ತಮ್ಮ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಹುತಾಹುತಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ. ಶಹಬಾಜ್, ಅರ್ಬಾಜ್ ಮತ್ತು ಫೈಜಲ್ ಎಂಬ ಮೂವರು ಪುಂಡ ಪೋಕರಿಗಳು ಎರಡು ಮೂರು ದಿನಗಳಿಂದ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆಯ ತಂದೆ ಅಳಲು ತೋಡಿಕೊಂಡಿದ್ದಾರೆ.
ನನ್ನ ಮಗಳನ್ನು ಹಿಂಬಾಲಿಸಿಕೊಂಡು ಬಂದ ದುಷ್ಟರಲ್ಲಿ ಒಬ್ಬ ದುಪಟ್ಟಾ ಎಳೆದಿದ್ದರಿಂದ ಆಕೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಹಬಾಜ್, ಅರ್ಬಾಜ್ ಮತ್ತು ಫೈಝಲ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.ವರದಿಗಳ ಪ್ರಕಾರ ಮೂವರು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣಕ್ಕೆ ಆರೋಪಿಗಳ ಕಾಲಿಗೆ ಪೋಲಿಸರು ಗುಂಡು ಹೊಡೆದಿದ್ದಾರೆ.
ಸೈಕಲಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಯ ವೇಲ್ ಎಳೆದು, ಬೀಳಿಸಿ ಬೈಕ್ ಹತ್ತಿಸಿ ಕೊಲೆ! ವಿಡಿಯೋ ವೈರಲ್
ಕಾಲೇಜಿನಿಂದ ಮನೆಗೆ ಸೈಕಲ್‌ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಮೂವರು ಯುವಕರು ನಡು ರಸ್ತೆಯಲ್ಲಿ ಪೀಡಿಸಿ ಆಕೆಯ ಕುತ್ತಿಗೆಯಲ್ಲಿದ್ದ ವೇಲ್ ಏಳೆದು ಕೆಳಗೆ ಬಿಳಿಸಿ ಹಿಂದಿನಿಂದ ಬಂದಂತ ಬೈಕ್ ಸವಾರ ಬಿದ್ದಂತಹ ಯುವತಿಯ ಮೇಲೆ ಬೈಕ್ ಹತ್ತಿಸಿ ಅಪಘಾತ ವೆಂಬಂತೆ ಬಿಂಬಿಸಿ ಕೊಲೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಂಬೇಡ್ಕರ್ ನಗರದ (ಉ.ಪ್ರ): ಕಾಲೇಜಿನಿಂದ ಮನೆಗೆ ತನ್ನ ಸೈಕಲ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಮೂವರು ಯುವಕರು ಪೀಡಿಸಿ ರಸ್ತೆ ಅಪಘಾತದಲ್ಲಿ ಕೊಲೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಅಪಘಾತದ ಬೆನ್ನಿಗೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಆರೋಪಿಗಳ ಬಂಧನಕ್ಕೆ ಮುಂದಾದಾಗ ಆರೋಪಿತರು ತಪ್ಪಿಸಿಕೊಳ್ಳಲು ಪೋಲಿಸರ ಮೇಲೆ ಹಲ್ಲೆಗೆ ಮುಂದಾದಾಗ ತಕ್ಷಣವೇ ಪೋಲಿಸರು ತಮ್ಮ ರಿವಲ್ವಾರ್ ಕೆಲಸ ಕೊಟ್ಟಿದ್ದಾರೆ ಹಂತಕರ ಕಾಲಿಗೆ ಗುಂಡಿಕ್ಕಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ್ಯಾನ್ಸಿ ಎಂಬ ಕಾಲೇಜಿನ ವಿದ್ಯಾರ್ಥಿನಿ ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬೈಕಿನಲ್ಲಿ ಬಂದಂತಹ ಇಬ್ಬರು ಯುವಕರು ಸೈಕಲ್ ನಲ್ಲಿ ಹೋಗುತ್ತಿದ್ದ ವಿಧ್ಯಾರ್ಥಿನಿಯ ಕುತ್ತಿಗೆಯಲ್ಲಿದ್ದ ವೇಲ್ ಅನ್ನು ಬಲವಂತವಾಗಿ ಎಳೆಯಲು ಯತ್ನಿಸಿದ್ದರು. ಈ ವೇಳೆ ಆಕೆ ಆಯತಪ್ಪಿ ಸೈಕಲ್‌ನಿಂದ ನಡುರಸ್ತೆಗೆ ಕೆಳಗೆ ಬಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬೈಕ್ ಸವಾರ ಏಕಾಏಕಿ ವಿದ್ಯಾರ್ಥಿನಿಯ ಮೇಲೆ ಬೈಕ್ ಹತ್ತಿಸಿದ್ದಾನೆ. ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ದುಪ್ಪಟ್ಟ ಎಳೆದ ಶಹವಾಜ್ ಹಾಗೂ ಅರವಾಜ್ ಮತ್ತು ಬೈಕ್ ಹತ್ತಿಸಿದ ಫೈಸಲ್ ಪರಿಚಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಧೀರ್ ವಿಧಾತ, ಶಿವಮೊಗ್ಗ