ಹಿಂದೂ ಮಹಾಸಭಾ ಗಣಪತಿ
ಸಾವರ್ಕರ್ ಪರ ಘೋಷಣೆಯೊಂದಿಗೆ ಶಿವಮೊಗ್ಗದ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ
ಶಿವಮೊಗ್ಗ ನಗರದ ಹಿಂದೂ ಮಹಾಸಭಾ ವತಿಯಿಂದ ಶಿವಮೊಗ್ಗದ ಕೋಟೆ ರಸ್ತೆಯ ಪುರಾತನ ಪ್ರಸಿದ್ಧ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು 79ನೇ ವರ್ಷದ ಗಣಪತಿ ಮೂರ್ತಿಯನ್ನು ಸೋಮವಾರ ( 18/09/2023 ) ದಂದು ಪ್ರತಿಷ್ಠಾಪಿಸಲಾಯಿತು. ಸಾಂಪ್ರದಾಯಿಕವಾಗಿ ಮೆರವಣಿಗೆ ಮೂಲಕ ಗಣಪತಿ ಮೂರ್ತಿಯನ್ನು ತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಮತ್ತು ಭಕ್ತರು
ಪ್ರತಿ ವರ್ಷದಂತೆ ಕುಂಬಾರ ಬೀದಿಯ ಕಲಾವಿದ ಗಣೇಶ್ ಅವರ ಮನೆಯಲ್ಲಿ ತಯಾರಿಸಲಾದ ಹಿಂದೂ ಮಹಾಸಭಾ ಗಣಪತಿ ಮೂರ್ತಿಯನ್ನು ಗಣೇಶ್ ಅವರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕೋಟೆ ಭೀಮೇಶ್ವರ ದೇವಸ್ಥಾನಕ್ಕೆ ತರಲಾಯಿತು. ಕಲಾತಂಡಗಳು, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ವಿಶೇಷ ಪೂಜೆಯೊಂದಿಗೆ ಗಣೇಶನ ಪ್ರತಿಷ್ಠಾಪನೆ
ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮೂರ್ತಿಯನ್ನು ಹೊತ್ತು ದೇವಸ್ಥಾನದಲ್ಲಿ ಪ್ರದಕ್ಷಿಣೆ ನೆರವೇರಿಸಲಾಯಿತು. ಬಳಿಕ ದೇಗುಲದ ಆವರಣದಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.ಜೋತೆಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಂತಹ ಬಿಜೆಪಿಯ ಪ್ರಬಲ ನಾಯಕ ಹಿಂದೂ ಮಹಾಮಂಡಳಿಯ ಸಕ್ರಿಯ ಕಾರ್ಯಕರ್ತ ಸ್ಥಳೀಯ ಶಾಸಕರಾದ ಚನ್ನಿ ( ಚನ್ನಬಸಪ್ಪ ) ಅವರು ಬೆಳಿಗ್ಗೆಯಿಂದಲೆ ಭೇಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಹಿಂದೂ ಸಂಘಟನೆಯ ಸಾಮಾನ್ಯ ಕಾರ್ಯಕರ್ತನಂತೆ ಅಲ್ಲೆ ಇದ್ದು ಗಣೇಶನನ್ನು ಕುಂಬಾರ ಬೀದಿಯ ಗಣೇಶ್ ಅವರ ಮನೆಯಿಂದ ತರುವುದರಿಂದ ಹಿಡಿದು ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡುವ ತನಕ ಶಾಸಕರಾದ ಚನ್ನಿ ಅವರು ಅಲ್ಲೆ ಇದ್ದು ಸಾಮಾನ್ಯ ಕಾರ್ಯಕರ್ತನಂತೆ ಅಲ್ಲಿಯ ಕೆಲಸವನ್ನು ಮಾಡಿ ಜವಬ್ದಾರಿಯುತವಾಗಿ
79ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ಮೂರ್ತಿಯನ್ನು ಹಿಂದೂ ಮಹಾಸಭಾ ಕಾರ್ಯಕರ್ತರು ಜೋಗಗೂಡಿ ಪ್ರತಿಷ್ಠಾಪನೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂಗಳು ಒಗ್ಗೂಡಬೇಕು ಎಂದು ವೀರ್ ಸಾವರ್ಕರ್ ಅವರ ಮಾರ್ಗದರ್ಶನದಂತೆ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಚೌತಿಯಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ಮತ್ತೆ ಅನಂತ ಚತುರ್ದಶಿಯ ದಿನದಂದು ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದರು
ಸುಧೀರ್ ವಿಧಾತ ,ಶಿವಮೊಗ್ಗ