Headlines

ಹಿಮಾಚಲ ಪ್ರದೇಶ: ಪ್ರವಾಹಕ್ಕೆ ಕೊಚ್ಚಿ ಹೋದ ಇಡೀ ಕುಟುಂಬ.! ಪವಾಡಸದೃಶವಾಗಿ ಬದುಕುಳಿದ 11 ತಿಂಗಳ ಮಗು..!!, ವೀಡಿಯೋ ವೈರಲ್.

ಹಿಮಾಚಲ ಪ್ರದೇಶ: ಪ್ರವಾಹಕ್ಕೆ ಕೊಚ್ಚಿ ಹೋದ ಇಡೀ ಕುಟುಂಬ.! ಪವಾಡಸದೃಶವಾಗಿ ಬದುಕುಳಿದ 11 ತಿಂಗಳ ಮಗು..!!, ವೀಡಿಯೋ ವೈರಲ್.

news.ashwasurya.in

ಅಶ್ವಸೂರ್ಯ/ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದಲ್ಲಿ ರಣಮಳೆ ಸುರಿಯುತ್ತಿದ್ದು ನಿರಂತರ ಮಳೆಗೆ ಭೂಕುಸಿತದಿಂದಾಗಿ ಬಾರಿ ಪ್ರವಾಹಕ್ಕೆ ಒಂದು ಕುಟುಂಬದವರೆಲ್ಲರೂ ದುರಂತದಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ.ಆದರೆ ಈ ದುರಂತದಲ್ಲಿ ಅದೇ ಕುಟುಂಬದ 11 ತಿಂಗಳ ಮಗುವೊಂದು ಪವಾಡಸದೃಶವಾಗಿ ಬದುಕುಳಿದಿದೆ.
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಹಾಗೂ ಮೇಘಸ್ಪೋಟದಿಂದಾಗಿ ಉಂಟಾದ ಪ್ರವಾಹದಿಂದ ಅನೇಕರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಗಿ ಛಿದ್ರವಾಗಿದೆ. ಅನೇಕರು ಈ ಪ್ರಕೃತಿ ವೈಪರೀತ್ಯದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ತಮ್ಮ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಅನಾಹುತದಲ್ಲಿ 11 ತಿಂಗಳ ಹೆಣ್ಣು ಮಗುವೊಂದರ ಕುಟುಂಬದ ಸದಸ್ಯರೆಲ್ಲರೂ ಪ್ರವಾಹದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದು ಹನ್ನೊಂದು ತಿಂಗಳ ಮಗುವೊಂದು ಮಾತ್ರ ಬದುಕುಳಿದು ರಕ್ಷಣಾ ಪಡೆಯವರ ಕೈಸೇರಿದೆ.

ತನ್ನ ಹೆತ್ತವರು ಕುಟುಂಬದವರನ್ನು ಕಳೆದುಕೊಂಡ ಅರಿವಿಲ್ಲದ 11 ತಿಂಗಳ ಮುದ್ದು ಮುದ್ದಾದ ಪುಟ್ಟ ಮಗು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಮಗುವನ್ನು ಎತ್ತಿಕೊಂಡಾಗ ಹೆತ್ತವರನ್ನು ಕಳೆದುಕೊಂಡ ಅರಿವಿಲ್ಲದ ಮುದ್ದಾದ ಮಗು ಖುಷಿಯಿಂದ ಆಟವಾಡುತ್ತಿದ್ದು, ಈ ವೀಡಿಯೋ ಈಗ ನೋಡುಗರನ್ನು ಭಾವುಕರನ್ನಾಗಿಸಿದೆ. 11 ವರ್ಷದ ನಿಕಿತಾ ಈ ಪ್ರವಾಹ ದುರಂತದಲ್ಲಿ ಪವಾಡ ಸದೃಶವಾಗಿ ಬದುಕುಳಿದ ಮಗು. ಜೂನ್ 30ರಂದು ರಾತ್ರಿ ಸುರಿದ ಮಳೆಗೆ ಈ ಮಗುವಿನ ಅಪ್ಪ ಅಮ್ಮ, ಅಜ್ಜಿ ಎಲ್ಲರೂ ಪ್ರಾಣ ಬಿಟ್ಟಿದ್ದು, ಮಗು ಮಾತ್ರ ಬದುಕುಳಿದಿದೆ. ಹಿಮಾಚಲ ಪ್ರದೇಶದ ಸಿರಾಜ್ ವಿಧಾನಸಭಾ ಕ್ಷೇತ್ರದಲ್ಲಿ ಘಟನೆ ನಡೆದಿದೆ.
ಆದರೆ ಈ ಪ್ರವಾಹ ದುರಂತದಲ್ಲಿ ತನ್ನವರೆಲ್ಲರೂ ಹೊರಟು ಹೋಗಿದ್ದಾರೆ ಎಂಬುದರ ಅರಿವು ಮಗುವಿಗಿರಲಿಲ್ಲ. ಅಧಿಕಾರಿಗಳ ಪ್ರಕಾರ, ಮಗು ನಿಖಿತಾಳ ತಂದೆ ರಮೇಶ್ ಹಾಗೂ ತಾಯಿ ರಾಧೆ ಹಾಗೂ ಅಜ್ಜಿ ಪುರ್ನುದೇವಿ ಅವರು ಜೋರಾಗಿ ಸುರಿಯುವ ಮಳೆಯ ನಡುವೆ ತಮ್ಮ ಮನೆಯ ಹಿಂದೆ ಉಕ್ಕಿ ಹರಿಯುತ್ತಿದ್ದ ನೀರನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಕ್ಕೆ ಮುಂದಾಗಿದ್ದರು ನೀರಿನ ಪ್ರಮಾಣ ಒಮ್ಮಿಂದೊಮ್ಮೆಲೆ ಹೆಚ್ಚಾಗಿದ್ದು, ಮೂವರು ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ಆದರೆ ಮನೆಯೊಳಗೆ ಮಲಗಿದ್ದ 11 ತಿಂಗಳ ಮಗು ನಿಖಿತಾ ಸುರಕ್ಷಿತವಾಗಿ ಬದುಕುಳಿದಿದ್ದಾಳೆ. ಹಾಗೂ ಮಗುವಿದ್ದ ಮನೆಯೂ ಪ್ರವಾಹಕ್ಕೆ ಸಿಕ್ಕರೂ ಯಾವುದೇ ತೊಂದರೆಗೊಳಗಾಗದೇ ಗಟ್ಟಿಯಾಗಿ ನಿಂತಿದೆ. ಪ್ರವಾಹದಲ್ಲಿ ಕೊಚ್ಚಿ ಹೋದ ನಿಕಿತಾ ತಂದೆ ರಮೇಶ್ ಶವ ಸಿಕ್ಕಿದ್ದು, ಆದರೆ ನಿಕಿತಾ ತಾಯಿ ರಾಧಾ ಹಾಗೂ ಅಜ್ಜಿ ಪುರ್ಣು ದೇವಿ
ಶವ ಇನ್ನೂ ಸಿಕ್ಕಿಲ್ಲ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಇತ್ತ ದುರಂತದಲ್ಲಿ ಎಲ್ಲರನ್ನು ಕಳೆದುಕೊಂಡು ತಬ್ಬಲಿಯಾದ ಮಗುವಿನ ಸ್ಥಿತಿಗೆ ಅನೇಕರು ಭಾವುಕರಾಗಿದ್ದು, ಅನೇಕರು ಮಗುವನ್ನು ತಾವು ದತ್ತು ಪಡೆದು ಸಾಕುವುದಾಗಿ ಹೇಳಿಕೊಂಡು ಸ್ಥಳೀಯಾಡಳಿತದ ಮುಂದೆ ಬಂದಿದ್ದಾರೆ. ಆದರೆ ಮಗು ನಿಖಿತಾ ಪ್ರಸ್ತುತ ತನ್ನ ಅತ್ತೆ ಎಂದರೆ ಆಕೆಯ ತಂದೆಯ ಸೋದರಿಯ ಆರೈಕೆಯಲ್ಲಿದೆ.

ನಿಖಿತಾಳನ್ನು ತಾವು ದತ್ತು ಪಡೆದುಕೊಳ್ಳುವುದಾಗಿ ಹೇಳಿಕೊಂಡು ನೂರಾರು ಜನ ಮುಂದೆ ಬಂದಿದ್ದು, ಕೆಲವರು ಕರೆ ಮಾಡಿಯೂ ಕೇಳುತ್ತಿದ್ದಾರೆ ಎಂಬ ವಿಷಯವನ್ನು ಗೋಹರ್‌ನ ಎಸ್‌ಡಿಎಂ ಸಮ್ರಿತಿಕಾ ನೇಗಿ ಖಚಿತಪಡಿಸಿದ್ದಾರೆ. ನಿಕಿತಾ ಮುದ್ದಾದ ಮಗು,ನನ್ನ ಭೇಟಿ ಸಮಯದಲ್ಲಿ ನಾನು ಅವಳೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!