Headlines

ಶಿವಮೊಗ್ಗ : ಹಾಸನದ ಸೊಸೆ ಅಯನೂರಿನ ತವರು ಮನೆಯಲ್ಲಿ ಹೃದಯಾಘಾತಕ್ಕೆ ಬಲಿ.!

ಶಿವಮೊಗ್ಗ : ಹಾಸನದ ಸೊಸೆ ಅಯನೂರಿನ ತವರು ಮನೆಯಲ್ಲಿ ಹೃದಯಾಘಾತಕ್ಕೆ ಬಲಿ.!

ಅಶ್ವಸೂರ್ಯ/ ಶಿವಮೊಗ್ಗ : ಬಾಣಂತನಕ್ಕೆಂದು ತವರಿಗೆ ಬಂದಿದ್ದ ಒಂದೂವರೆ ತಿಂಗಳ ಬಾಣಂತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಅಯನೂರಿನಲ್ಲಿ ನಡೆದಿದೆ.ಹರ್ಷಿತ(22) ಹೃದಯಾಘಾತಕ್ಕೆ ಬಲಿಯಾದ ಬಾಣಂತಿ. ಶಿವಮೊಗ್ಗ ಜಿಲ್ಲೆಯ ಅಯನೂರಿನ ಹರ್ಷಿತ ಅವರನ್ನು ಹಾಸನ ಜಿಲ್ಲೆಯ ಕೊಮೇನಹಳ್ಳಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.
ಬಾಣಂತನಕ್ಕಾಗಿ ತವರಿಗೆ ಬಂದಿದ್ದ ಹರ್ಷಿತಾಗೆ ನಿನ್ನೆ ಎದೆನೋವು ಕಾಣಿಸಿಕೊಂಡಿದೆ. ಆತಂಕ ಗೊಂಡ ಕುಟುಂಬಸ್ಥರು ಕೂಡಲೇ ಹಾಸನದಿಂದ ಪತಿಯನ್ನು ಕರೆಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಾಗ ಆ್ಯಂಬುಲೆನ್ಸ್‌ನಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬಾಣಂತನಕ್ಕೆಂದು ತವರು ಸೇರಿದ್ದ ಹರ್ಷಿತಾ ಮರಳಿ ಗಂಡನ ಮನೆಗೆ ಬಾರದಂತಾಗಿದೆ ಎಂದು ಕುಟುಂಬ ಸದಸ್ಯರು ಕಣ್ಣೀರಿಟ್ಟಿದ್ದಾರೆ.ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಹಾಸನದಲ್ಲಿ ಸಾವಿನ ಸರಣಿ ಮುಂದುವರೆದಿದೆ. ಅದರಲ್ಲೂ ಮಧ್ಯ ವಯಸ್ಸಿನವರಲ್ಲೇ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!