ಬೆಂಗಳೂರು || ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕು ಹಾಗೂ ಸೊರಬ ತಾಲೂಕಿನ ವಿವಿಧ ನೀರಾವರಿ ಅಭಿವೃದ್ಧಿ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ : ಸಚಿವ ಮಧು ಬಂಗಾರಪ್ಪ.

news ashwasuryain
ಅಶ್ವಸೂರ್ಯ/ಬೆಂಗಳೂರು : ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಮಧು ಬಂಗಾರಪ್ಪನವರು ಇಂದು ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ಸಭಾಂಗಣದಲ್ಲಿ (KNNL) ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಸೊರಬ ತಾಲೂಕಿನ ವಿವಿಧ ನೀರಾವರಿ ಅಭಿವೃದ್ಧಿ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸುದೀರ್ಘವಾಗಿ ಚರ್ಚಿಸಿದರು.

“ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಿದ ವಿಷಯಗಳು”
🔹ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳಲ್ಲಿ ಮಳೆಯಿಂದಾಗಿ ಉಂಟಾಗುವ ಪ್ರವಾಹ ನೀರನ್ನು ಬೇರೆಡೆ ತಿರುಗಿಸಲು ಆಯ್ದ ಪ್ರದೇಶಗಳಲ್ಲಿ ಸೇತುವೆ ಕಮ್ ಬ್ಯಾರೇಜ್ ನಿರ್ಮಾಣ ಮತ್ತು ಪ್ರವಾಹ ರಕ್ಷಣಾ ಕಾರ್ಯ ಕೈಗೊಳ್ಳುವ ಕುರಿತು.

🔹ಶಿವಮೊಗ್ಗ ಜಿಲ್ಲೆಗೆ ಅನುಮೋದನೆಗೊಂಡ ನೂತನ ನೀರಾವರಿ ಕಾಮಗಾರಿಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು.
🔹ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವರದ ಮತ್ತು ದಂಡಾವತಿ ನದಿಯ ಆಯ್ದ ಪ್ರದೇಶಗಳಲ್ಲಿ ಸೇತುವೆ ಮತ್ತು ಬ್ಯಾರೇಜ್ ಗಳನ್ನು ನಿರ್ಮಾಣ ಮಾಡುವ ಕುರಿತು.
🔹ಸೊರಬ ತಾಲ್ಲೂಕಿನ ಯಡಗೊಪ್ಪ, ಗುಡವಿ ಗ್ರಾಮಗಳಲ್ಲಿ ಟ್ಯಾಂಕ್ ತುಂಬಿಸುವ ಯೋಜನೆ.
🔹ಸೊರಬ ತಾಲ್ಲೂಕಿನ ಕೆರೆಹಳ್ಳಿ ಗ್ರಾಮದ ಬಳಿ ವರದಾ ನದಿಯಿಂದ ನೀರನ್ನು ಎತ್ತಿ ಬ್ಯಾರೇಜ್ ನಿರ್ಮಾಣ ಮಾಡುವುದು ಮತ್ತು ಟ್ಯಾಂಕ್ಗಳನ್ನು ತುಂಬಿಸುವುದು.
🔹 ಜಂಗಿನಕೊಪ್ಪ ಗ್ರಾಮದ ಬಳಿ ದಂಡಾವತಿ ನದಿಗೆ ತಿರುವು ಕಾಲುವೆ ನಿರ್ಮಾಣ ಮಾಡುವ ಕುರಿತು.
🔹ಭದ್ರಾ ಎಡದಂಡೆ ನಾಲೆಗೆ ಹೊಸ ಗೇಟ್ ಅಳವಡಿಸುತ್ತಿರುವ ಕಾರ್ಯ ಸೇರಿದಂತೆ ಅನೇಕ ನೀರಾವರಿ ಕಾಮಗಾರಿಗಳ ಕುರಿತು ವಿಸ್ತ್ರತವಾಗಿ ಚರ್ಚಿಸಿ, ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ಶ್ರೀ ರಾಜೇಶ್ ಅಮ್ಮಿನಭಾವಿ ಸೇರಿದಂತೆ ನೀರಾವರಿ ನಿಗಮ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


