Headlines

ದಾವಣಗೆರೆ: ಮಗಳಿಗೆ ಮದುವೆ ಆದ ಎರಡೇ ತಿಂಗಳಿಗೆ ಅಳಿಯನ ಜೋತೆಗೆ ಅತ್ತೆ ಎಸ್ಕೇಪ್.!! ಕಣ್ಣೀರಿಟ್ಟ ಮಗಳು.!

ದಾವಣಗೆರೆ: ಮಗಳಿಗೆ ಮದುವೆ ಆದ ಎರಡೇ ತಿಂಗಳಿಗೆ ಅಳಿಯನ ಜೋತೆಗೆ ಅತ್ತೆ ಎಸ್ಕೇಪ್.!! ಕಣ್ಣೀರಿಟ್ಟ ಮಗಳು.!

ಅಶ್ವಸೂರ್ಯ/ದಾವಣಗೆರೆ : ದಾವಣಗೆರೆಯಲ್ಲಿ ವಿಚಿತ್ರ ಘಟನೆಯೊಂದು ನೆಡೆದು ಹೋಗಿದೆ.! 56 ವರ್ಷದ ಅತ್ತೆ ತನ್ನ ಮಗಳ ಗಂಡ 25 ವರ್ಷದ ಅಳಿಯನ ಓಡಿ ಹೋಗಿದ್ದಾಳೆ.! ಮದುವೆಯಾದ ಎರಡೆ ತಿಂಗಳಿಗೆ ಅಳಿಯ ಅತ್ತೆಯೊಂದಿಗೆ ಓಡಿಹೋಗಿರುವ ಘಟನೆಯೊಂದು ನೆಡೆದಿದೆ.!! ಮದುವೆಯಾಗಿ ಕೇವಲ ಎರಡು ತಿಂಗಳಿಗೆ ಈ ಘಟನೆ ನಡೆದಿದ್ದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಇಂತ ಪ್ರಕರಣಗಳು ದಿನ ನಿತ್ಯ ನೆಡೆಯುತ್ತಿದೆ.ಅತ್ತೆ ಜೋತೆಗೆ ಅಳಿಯ.ಮಾವನ ಜೋತೆಗೆ ಸೋಸೆ ಓಡಿ ಹೋಗುವುದು ಸಾಮಾನ್ಯವಾಗಿದೆ. ಉತ್ತರ ಭಾರತದಲ್ಲಿ ಇಂತ‌ ಪ್ರಕರಣಗಳು ಕೇಳಿ ಬರುತ್ತಿದ್ದವು. ಆದರೆ ಜಮಾನ ಬದಲಾಗಿದೆ ಕರ್ನಾಟಕದಲ್ಲೂ ಇಂಥ ಪ್ರಕರಣಗಳು ಬಯಲಾಗುತ್ತಿವೆ.? ದಾವಣಗೆರೆಯಲ್ಲಿ 25 ವರ್ಷದ ಅಳಿಯನ ಜೊತೆಗೆ 56 ವರ್ಷದ ಅತ್ತೆ ಓಡಿಹೋಗಿದ್ದು ಹೆತ್ತ ಅಮ್ಮನ ತಾಳಿಕಟ್ಟಿದ ಗಂಡನ ನೀಚತನಕ್ಕೆ ಪತ್ನಿ ಪೊಲೀಸ್‌ ಠಾಣೆಯ ಮೆಟ್ಟಿಲೆರುವಂತಾಗಿದೆ.!ಹೆತ್ತ ತಾಯಿಯ ಮತ್ತು ಗಂಡನಿಂದ ಕಣ್ಣೀರಿಡುವಂತಾಗಿದೆ.
ಅಳಿಯನಿಗೆ ಸರಿ ಸುಮಾರು 25 ವರ್ಷ ಎನ್ನಲಾಗಿದ್ದು, ಅತ್ತೆಗೆ ಅಳಿಯನಿಗಿಂತ 30 ವರ್ಷ ದೊಡ್ಡವಳು.! ಅಂದರೆ 55 ವರ್ಷ ಎಂದು ತಿಳಿದುಬಂದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಗ್ರಾಮಕ್ಕೆ ಗ್ರಾಮವೆ ಬೆಚ್ಚಿ ಬದ್ದಿದೆ.!?

55 ವರ್ಷದ ಶಾಂತಾ ಎಂಬ ಮಹಿಳೆ ಜೊತೆಗೆ ಮಗಳ ಗಂಡ ಅಳಿಯ 25 ವರ್ಷದ ಗಣೇಶ್‌ ಎಸ್ಕೇಪ್‌ ಆಗಿದ್ದಾನೆ. ಗಣೇಶ್‌ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದವನು ಎನ್ನಲಾಗಿದ್ದು. ಮೇ 2 ರಂದು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಪತ್ನಿಯನ್ನು ಬಿಟ್ಟು ಅತ್ತೆಯ ಜೊತೆ ಎಸ್ಕೇಪ್ ಆಗಿದ್ದಾನೆ.
ಇನ್ನು ಶಾಂತಾ ಎನ್ನುವವರು ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವರ ಎರಡನೇ ಪತ್ನಿ.13 ವರ್ಷದ ಹಿಂದೆ ಮುದ್ದೇನಹಳ್ಳಿ ನಾಗರಾಜ್ ಎನ್ನುವವರ 2ನೇ ಪತ್ನಿಯಾಗಿ ಶಾಂತಾ ಮನೆಗೆ ಬಂದಿದ್ದರು. ನಾಗರಾಜ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ. ನಾಗರಾಜ್ ಜೊತೆ ಹಿರಿಯ ಮಗಳು ಹೇಮಾ ವಾಸವಿದ್ದರು.

ಎರಡು ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತಾ, ಮಗಳನ್ನು ಮದುವೆ ಮಾಡಿಕೊಡೋಣ ಮನೆ ಅಳಿಯ ಆಗಿ ಇರ್ತಾನೆ ಎಂದು ನಂಬಿಸಿದ್ದರು. ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶನ ಜೊತೆಗೆ ಹಿರಿಯ ಮಗಳು ಹೇಮಾ ಜೊತೆ ನಾಗರಾಜ್‌ ವಿವಾಹ ಮಾಡಿ ಕೊಟ್ಟಿದ್ದರು.
ಮದುವೆಯಾದ 15 ದಿನಕ್ಕೆ ಗಣೇಶ್ ತನ್ನ ಮಲ ಅತ್ತೆ ಶಾಂತಾ ಜೊತೆ ಅಕ್ರಮ ಸಂಬಂಧ ಹೊಂದಿರೋದು ಬೆಳಕಿಗೆ ಬಂದಿದೆ. ಗಣೇಶ್ ಮೊಬೈಲ್‌ನಲ್ಲಿ ಮಲತಾಯಿ ಶಾಂತಾ ಕಳಿಸಿದ್ದ ಅಶ್ಲೀಲ ಮೆಸೇಜ್‌ಅನ್ನು ಹೇಮಾ ನೋಡಿದ್ದಾರೆ.
ತಕ್ಷಣ ಮೆಸೇಜ್‌ಗಳನ್ನು ತನ್ನ ತಂದೆ ನಾಗರಾಜ್‌ಗೆ ಹೇಮಾ ಫಾರ್ವರ್ಡ್‌ ಮಾಡಿದ್ದಾರೆ. ವಿಚಾರ ಗೊತ್ತಾಗುತ್ತಿದ್ದಂತೆ ಹಣ ಆಭರಣ ಕದ್ದು ಶಾಂತಾ ಅಳಿಯನ ಜೊತೆ ಎಸ್ಕೇಪ್ ಆಗಿದ್ದಾಳೆ. ಪತ್ನಿ ಹೇಮಾಳನ್ನ ಬಸ್ ಸ್ಟಾಪ್‌ನಲ್ಲಿಯೇ ಬಿಟ್ಟು ಗಣೇಶ್‌ ಎಸ್ಕೇಪ್‌ ಆಗಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಸ್ಕೇಪ್ ಆಗಿರುವ 55 ಅಂಟಿ 25 ರ ಅಳಿಯನ ಬಂಧನಕ್ಕಾಗಿ ಪೊಲೀಸರು ಭಲೇ ಬಿಸಿದ್ದಾರೆ..

Leave a Reply

Your email address will not be published. Required fields are marked *

Optimized by Optimole
error: Content is protected !!