
ಶಿವಮೊಗ್ಗ : ಬೊಮ್ಮನಕಟ್ಟೆ ಹೆಣ್ಣಿಗಾಗಿ ರೌಡಿಶೀಟರ್ ಅವಿನಾಶ್ ಹತ್ಯೆ.!ಐವರ ಬಂಧನ , ಜೋತೆಗಿದ್ದವರೆ ಚಟ್ಟಕಟ್ಟಿದ್ದರು.!!

news.ashwasurya.in

ಅಶ್ವಸೂರ್ಯ/ಶಿವಮೊಗ್ಗ : ಕಳೆದ ನಾಲ್ಕು ದಿನದ ಹಿಂದೆ ವಿನೋಬಾ ನಗರ ಪೊಲೀಸ್ ಠಾಣೆಯ ಸರಹದ್ದಿನ ಬೊಮ್ಮನಕಟ್ಟೆಯ ಕೆರೆ ಏರಿ ಮೇಲೆ ರೌಡಿಶೀಟರ್ ಅವಿನಾಶ್ ಮೇಲೆ ಐವರು ಹಂತಕರ ಗ್ಯಾಂಗ್ ಲಾಂಗ್ ಮಚ್ಚುಗಳನ್ನು ಮನಬಂದಂತೆ ಬಿಸಿ ಬರ್ಬರವಾಗಿ ಹತ್ಯೆ ಮಾಡಿದ್ದರು.!
ಅಂದು ಶಿವಮೊಗ್ಗ ನಗರದಲ್ಲಿ ತಡ ರಾತ್ರಿ ಮತ್ತೆ ಲಾಂಗ್ ಮಚ್ಚುಗಳು ಜಳಪಿಸಿದ್ದವು.!

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜೆಯಾಗಿ ಜೈಲು ಸೇರಿದ್ದ ಅವಿನಾಶ್ ಕಳೆದ ಒಂದುವರೆ ವರ್ಷದ ಹಿಂದೆ ಜೈಲಿನಿಂದ ಹೊರಬಂದಿದ್ದನಂತೆ.

ಜೈಲು ಶಿಕ್ಷೆ ಅನುಭವಿಸಿ ಬಂದವನು ಬದಲಾಗಿ ಬದುಕ ಬಹುದಾಗಿತ್ತು.ಆದರೆ ಬದಲಾಗದ ರೌಡಿಶೀಟರ್ ಅವಿನಾಶ್ ಮದುವೆಯಾದ ಯುವತಿಯೊಬ್ಬಳ ಬೆನ್ನಿಗೆ ಬಿದ್ದಿದ್ದನಂತೆ.!

ಚಾಟಿಂಗ್ ಟಾಕಿಂಗ್ ಅಂತ ಮದುವೆಯಾದ ಹೆಣ್ಣಿನ ಹಿಂದೆ ಬಿದ್ದಿದ್ದ.ಇತನ ನೀಚತನ ಗೋತ್ತಾಗಿ ಆಕೆಯ ಗಂಡ ಕಳೆದ ಒಂದು ತಿಂಗಳ ಹಿಂದೆ ಅವಿನಾಶ್ ನನ್ನು ಕರೆದು ವಾರ್ನಿಂಗ್ ಮಾಡಿದ್ದನಂತೆ.ಆದರೆ ಯಾವುದಕ್ಕೂ ಹೆದರದ ಆತ ಮತ್ತೆ ಆಕೆಯ ಹಿಂದೆ ಬಿದ್ದಿದ್ದಾನೆ.! ಅಮಾಯಕನೊಬ್ಬನನ್ನು ಹತ್ಯೆಮಾಡಿ ಜೈಲು ಸೇರಿದ್ದ ಅವಿನಾಶ್ ತಾನೊಬ್ಬ ಫಂಟರ್ ಎನ್ನುವ ಲೇವಲ್ಗೆ ಬೊಮ್ಮನಕಟ್ಟೆಯಲ್ಲಿ ಸದ್ದು ಮಾಡುತಿದ್ದನಂತೆ.!

ರೌಡಿಶೀಟರ್ ಅವಿನಾಶ್ನ ಆಯಸ್ಸು ಮುಗಿದಿರಬೇಕು.? ಈ ಕಾರಣದಿಂದಲೆ ಅ ಅಮಾಯಕ ಹೆಣ್ಣಿನ ಹಿಂದೆ ಬಿದ್ದಿದ್ದಾನೆ.? ಬುದ್ಧಿ ಹೇಳಿದರು ಬದಲಾಗದ ಈ ನೀಚನ ನಡುವಳಿಕೆಯಿಂದ ಬೇಸತ್ತ ಆಕೆಯ ಗಂಡ ಮೊಹರ್ತ ಫಿಕ್ಸ್ ಮಾಡಿದ್ದಾನೆ.! ತನ್ನ ಗೆಳೆಯರಿಗೂ ವಿಷಯ ತಿಳಿಸಿ ಸಾಥ್ ಕೊಡಲು ಕೇಳಿದ್ದಾನೆ.

ಅವರು ಕೈಮಿಲಾಯಿಸಿದ್ದಾರೆ.ಅದರಲ್ಲೂ ಅವಿನಾಶನ ಹತ್ಯೆಗೆ ಆತನ ಸಹೋದರರೆ (ಸಹೋದರ ಸಂಬಂಧಿಗಳು ) ಹೆಗಲುಕೊಟ್ಟಿದ್ದಾರೆ.ಕಳೆದ ಜೂನ್ 21 ತಡರಾತ್ರಿ ಅವಿನಾಶ್ನನ್ನು ಎಣ್ಣೆ ಹೊಡಿಯಲು ಕರೆದಿದ್ದಾರೆ.ಅತ ಕೂಡ ಎಣ್ಣೆ ಪಾರ್ಟಿಗೆ ರೆಡಿಯಾಗಿ ಬಿಟ್ಟಿದ್ದಾನೆ .! ಕಾರಣ ಕರೆದವರು ಬೇರೆಯಾರೊ ಆಗಿರಲಿಲ್ಲ. ನಿತ್ಯ ತನ್ನ ಜೋತೆಗಿರುವ ಜೀವದ ಗೆಳೆಯರಾಗಿದ್ದರು.ಅವರು ಕರೆದ ಸ್ಥಳಕ್ಕೆ ರಾತ್ರಿ ಹೋಗಿದ್ದಾನೆ. ಅವಿನಾಶ್ ಅವರ ಜೋತೆಯಲ್ಲಿ ಕಂಠ ಪೂರ್ತಿ ಎಣ್ಣೆ ಹಿರಿದ್ದಾನೆ. ಅವಿನಾಶ್ ಸಂಪೂರ್ಣ ನಶೆಯ ಮತ್ತಿನಲ್ಲಿದ್ದಾನೆ ಎನ್ನುವುದು ಗೊತ್ತಾಗುತ್ತಿದ್ದಂತೆ ಮೊದಲೆ ಸ್ಕೆಚ್ ಹಾಕಿದ್ದ ಹಂತಕರು ತಂದಿಟ್ಟಿದ್ದ ಲಾಂಗು ಮಚ್ಚುಗಳನ್ನು ಹೊರ ತೆಗೆದು ಆತನ ಮೇಲೆ ಮನಬಂದಂತೆ ಬಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.

ಎಲ್ಲೆಂದರಲ್ಲಿ ಬಿದ್ದ ಲಾಂಗಿನೇಟಿಗೆ ರೌಡಿಶೀಟರ್ ಅವಿನಾಶ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಉಸಿರು ಚಲ್ಲಿದ್ದಾನೆ. ಬೇಡ ಬೇಡ ಎಂದರು ಹೆಣ್ಣಿನ ಹಿಂದೆ ಬಿದ್ದು ಹೆಣವಾಗಿ ಹೋಗಿದ್ದಾನೆ.ತನ್ನ ಸಾವು ತನ್ನ ಗೆಳೆಯರಿಂದಲೆ ಎನ್ನುವುದನ್ನು ಆತ ನಿರೀಕ್ಷಿಯೆ ಮಾಡಿರಲಿಲ್ಲವೇನೊ. ಆತನ ಜೋತೆಗಿದ್ದ ಜೀವದ ಗೆಳೆಯರು ರಕ್ತ ಸಂಭಂಧಿಗಳೆ ಆತನಿಗೆ ಚಟ್ಟಕಟ್ಟಿಬಿಟ್ಟಿದ್ದಾರೆ.!! ಸ್ವಲ್ಪ ದಿನದ ಮಟ್ಟಿಗೆ ಸೈಲೆಂಟಾಗಿದ್ದ ಶಿವಮೊಗ್ಗದಲ್ಲಿ ರೌಡಿಶೀಟರ್ ಅವಿನಾಶ್ ಹತ್ಯೆಯಾಗಿ ಪಾತಕಲೋಕ ಒಮ್ಮೆ ಕಂಪಿಸಿದೆ.!! ಹೆಣ್ಣಿನ ಬೆನ್ನಿಗೆ ಬಿದ್ದು ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾನೆ. ಅವಿನಾಶ್. ಹತ್ಯೆಮಾಡಿ ಎಸ್ಕೇಪ್ ಆಗಿದ್ದ ಐವರು ಆರೋಪಿಗಳನ್ನು ವಿನೋಬಾ ನಗರ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ….




