Headlines

ಮೈಸೂರು : ನಂಜನಗೂಡು ಬಿಡೋತ್ತಾ ಹುಲಿ.!? ಕರ್ನಾಟಕದ ಹುಲಿ “ರಮ್‌”ಗೆ ಸಂಕಷ್ಟ.!

ಅಶ್ವಸೂರ್ಯ/ಶಿವಮೊಗ್ಗ : ಸರ್ಕಾರದ ನೀತಿಗಳಿಂದ ಕರ್ನಾಟಕದ ನಂಜನಗೂಡು ಮೂಲದ ‘ಹುಲಿ’ರಮ್‌‌ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ.ದೊಡ್ಡ ದೊಡ್ಡ ಕಂಪನಿಗಳಿಗೆ ಮಣೆ ಹಾಕುವ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎನ್ನುವ ಆರೋಪ ದೊಡ್ಡಮಟ್ಟದಲ್ಲಿ ಕೇಳಿ ಬರುತ್ತಿದೆ.

‘”ಹುಲಿ”’ರಮ್‌ ಸಂಕಷ್ಟಕ್ಕೆ ಕಾರಣ.?

ಸರ್ಕಾರದ ನೀತಿ ನಿಯಮಗಳಿಂದ ಕರ್ನಾಟಕದ ‘ಹುಲಿ’ರಮ್‌ ಉದ್ಯಮಕ್ಕೆ ಸಂಕಷ್ಟ ಎದುರಾಗಿದೆ. ದೇಸಿ ರಮ್‌ ಅನ್ಯ ರಾಜ್ಯಗಳ ಪಾಲಾಗುವುದನ್ನ ತಪ್ಪಿಸಲೇಬೇಕು ಎನ್ನುವ ಕೂಗು ಇದೆ ಇದಕ್ಕೆ ಕಾರಣ ಸರ್ಕಾರದ ನಿರ್ಧಾರವಾಗಿದೆ.

ಮೊದಲು ನವೀಕರಣ ಶುಲ್ಕವನ್ನು ಇಳಿಸಿ.

ಡಿಸ್ಟಿಲರಿ ನವೀಕರಣ ಶುಲ್ಕ ಶೇ.50ರಷ್ಟು ಏರಿಕೆಯಿಂದ ಹುಲಿ ರಮ್​ ಉದ್ಯಮಕ್ಕೆ ಸಂಕಷ್ಟ ಶುರುಮಾಗಿದೆ. ಗೋವಾ ಅಥವಾ ಮಹಾರಾಷ್ಟ್ರಕ್ಕೆ ಶಿಫ್ಟ್‌ ಆಗಲು ಕಂಪನಿ ಸಿದ್ಧತೆ ಮಾಡಿಕೊಂಡಿದೆ. ಈ ಕಂಪನಿಯಲ್ಲಿ ಮೈಸೂರಿನ ಸುತ್ತ-ಮುತ್ತಲಿನ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನವೀಕರಣ ಶುಲ್ಕ ಇಳಿಸದೆ ಹೋದರೆ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ರಾಜ್ಯದ ದೇಸಿ ರಮ್‌‌‌ “ಹುಲಿ” ರಮ್

ರಾಜ್ಯದ ದೇಸಿ ರಮ್‌‌‌ ಹುಲಿ ಬ್ರ್ಯಾಂಡ್ ಅನ್ನು ಮೈಸೂರು ಜಿಲ್ಲೆಯ ನಂಜನಗೂಡಲ್ಲಿ ತಯಾರಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಜಿಲ್ಲೆಯ ಹೆಮ್ಮೆಯ ದೇಸಿ ಬ್ರ್ಯಾಂಡ್‌ ಅನ್ನು ಕನ್ನಡಿಗರೇ ಸ್ಥಾಪಿಸಿದ್ದಾರೆ. ಸ್ಥಳೀಯ ಉದ್ಯಮ ಉಳಿಸಬೇಕಾದ ಸರ್ಕಾರವೇ ದೊಡ್ಡ ಬರೆ ಎಳೆದಿದ್ದು ಇದರಿಂದ ಕರ್ನಾಟಕದಲ್ಲಿ (ನಮ್ಮ ನೆಲದಲ್ಲಿ) ನಮಗೆ ಉಳಿಗಾಲವಿಲ್ಲ ಎನ್ನುತ್ತಾ ಫ್ಯಾಕ್ಟರಿಯನ್ನೆ ಬೇರೆ ರಾಜ್ಯಕ್ಕೆ ಶಿಫ್ಟ್ ಮಾಡಲು ಸಂಸ್ಥೆ ಮುಂದಾಗಿದೆ.

ರಾಜ್ಯದ ‘ಹುಲಿ ರಮ್‌’ ಉಳಿಸಿ

ಕನ್ನಡ ಹೆಸರಿನ ಅಂತಾರಾಷ್ಟ್ರೀಯ ಬೆಲ್ಲದ ರಮ್ “ಹುಲಿ” ಉತ್ಪಾದನ ಕೇಂದ್ರ ನಂಜನಗೂಡಿನ ಅಡಕನಹಳ್ಳಿಯಲ್ಲಿದೆ. ಇಲ್ಲಿ ಸಾವಿರಾರು ಸ್ಥಳೀಯ ಯುವಕರು ಕೆಲಸ ಮಾಡ್ತಿದ್ದಾರೆ. ನಿರೋದ್ಯೋಗಿಗಳಿಗೆ ಈ ಸಂಸ್ಥೆ ಕೆಲಸ ಕೊಟ್ಟಿದೆ. ಕಪಿಲ ನದಿ ನೀರಲ್ಲಿ ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸಿ, 8 ವರ್ಷ ಸಂಸ್ಕರಿಸಿ ನಂತರ ಹುಲಿ ರಮ್‌‌ ತಯಾರಿಕೆ ಮಾಡಲಾಗುತ್ತಿದೆ.

“ಹುಲಿ” ರಮ್ ಕಂಪನಿ ಶಿಫ್ಟ್‌ ಅಗಲಿದೆ ಗೋವಾ ಮಹಾರಾಷ್ಟ್ರಕ್ಕೆ.!

ಹುಲಿ ರಮ್​ 2024ರ ಆಗಸ್ಟ್ 15 ರಂದು ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. 750ML ಹುಲಿ ರಮ್‌ನಲ್ಲಿ 42.8% ಆಲ್ಕೋಹಾಲ್‌ ಇದೆ. ಬಾಟೆಲ್‌ ಬೆಲೆ ಕರ್ನಾಟಕದಲ್ಲಿ 2,800 ರೂಪಾಯಿ ಇದೆ. ಡಿಸ್ಟಿಲರಿ ನವೀಕರಣ ಶುಲ್ಕ 50% ಏರಿಕೆಯಿಂದ ಈ ಸಂಸ್ಥೆ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಗೋವಾ, ಮಹಾರಾಷ್ಟ್ರಕ್ಕೆ ಕಂಪನಿ ಶಿಫ್ಟ್‌ ಆಗುವ ಆತಂಕ ಹೆಚ್ಚಿದೆ.
ರಾಜ್ಯ ಸರ್ಕಾರವು ಅಕ್ಷರಶಃ ನಮ್ಮ ರಾಜ್ಯದ ಹುಲಿಯನ್ನು ನಂಜನಗೂಡಿನಿಂದ ಓಡಿಸಲು ಮುಂದಾಗಿದೆ. ಗೋವಾ ಅಥವಾ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸುವ ಸ್ಥಿತಿ ಎದುರಾಗಿದೆ.ಕಾರಣ ವಾರ್ಷಿಕ ಡಿಸ್ಟಿಲರಿ ಪರವಾನಗಿ ಶುಲ್ಕವನ್ನು 50% ಹೆಚ್ಚಿಸಲಾಗಿದೆ! ಇದು ವ್ಯವಹಾರವನ್ನು ಮತ್ತು ಮಾರ್ಕೆಟಿಂಗ್ ಮಾಡಲು ಅಸಾಧ್ಯವಾಗಿದೆ.

ಆಂಧ್ರದಿಂದ “ಹುಲಿ” ರಮ್‌ಗೆ ಆಹ್ವಾನ

ಜಗತ್ತನ್ನೇ ಸುತ್ತಿ ಉದ್ಯಮಿಗಳನ್ನ ಸ್ವಾಗತ ಮಾಡುವ ನಮ್ಮ ಸರ್ಕಾರ ಕನ್ನಡಿಗ ಉದ್ಯಮಿಗಳನ್ನು ಕಡೆಗಣಿಸುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. “ಹುಲಿ” ರಮ್​ ಸಂಸ್ಥಾಪಕ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿದ ಆಂಧ್ರ ಮುಖ್ಯಮಂತ್ರಿಗಳು ನಮ್ಮಲ್ಲಿಗೆ ಬನ್ನಿ ಅಂದಿದ್ದಾರಂತೆ.!

Leave a Reply

Your email address will not be published. Required fields are marked *

Optimized by Optimole
error: Content is protected !!