ಗುಜರಾತ್ : ಪ್ರೀತಿಸಿದವನು ಸಿಗಲಿಲ್ಲವೆಂದು ರಿವೆಂಜಿಗೆ ಬಿದ್ದ ಯುವತಿ.! ಕೊನೆಗೆ ಹೋಗಿದ್ದು ಮಾತ್ರ ಜೈಲಿಗೆ.!

12 ರಾಜ್ಯಗಳಲ್ಲಿ ಯುವತಿಯೊಬ್ಬರು ಬಾಂಬ್ ಬೆದರಿಕೆ ಇಮೇಲ್ಗಳನ್ನು ಕಳುಹಿಸಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಮತ್ತು 12 ರಾಜ್ಯಗಳಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇಮೇಲ್ಗಳ ತನಿಖೆಯಲ್ಲಿ ಪ್ರೀತಿಯನ್ನು ಒಪ್ಪದ ಯುವಕನ ಮೇಲೆ ಸೇಡಿಗೆ ಬಿದ್ದ ಯುವತಿಯ ಕಥೆ ಬೆಳಕಿಗೆ ಬಂದಿದೆ. ಚೆನ್ನೈನ ಬಹುರಾಷ್ಟ್ರೀಯ ಕಂಪನಿಯ ಮಹಿಳಾ ಉದ್ಯೋಗಿರುವ ಯುವತಿ ಯುವಕನೊಬ್ಬನ ಮೇಲೆ ಸೇಡಿಗೆ ಬಿದ್ದು ಸೇರೆಮನೆ ಸೇರಿದ್ದಾಳೆ…
news.ashwasurya.in
ಅಶ್ವಸೂರ್ಯ/ಗುಜರಾತ್ : ತಾನು ಪ್ರೀತಿಸಿದ ಹುಡುಗ ನನಗೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಆತನ ವಿರುದ್ಧ ರಿವೆಂಜ್ಗೆ ಬಿದ್ದ ಯುವತಿ ಹುಡುಗನನ್ನು ಬಾಂಬ್ ಬೆದರಿಕೆ ಪ್ರಕರಣದಲ್ಲಿ ಸಿಲುಕಿಸಲು ತಾನೇ ನಕಲಿ ಮೇಲ್ ಐಡಿಗಳ ಮುಖಾಂತರ 21 ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದ ಯುವತಿ ಈಗ ಅಹಮದಾಬಾದ್ ಪೊಲೀಸರ ಅತಿಥಿಯಾಗಿದ್ದಾಳೆ.! ತನ್ನ ಪ್ರೀತಿಯನ್ನು ಯುವಕನೊಬ್ಬ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದು ರಿವೆಂಜಿಗೆ ಬಿದ್ದ ಚೆನ್ನೈನ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯುವತಿಯೊಬ್ಬಳು ದೊಡ್ಡದೊಂದು ಪ್ಲಾನ್ ಮಾಡಿದ್ದಳು.?ತನ್ನ ಪ್ರೀತಿ ನಿರಾಕರಿಸಿದ್ದ ಯುವಕನನ್ನು ಬಾಂಬ್ ಬೆದರಿಕೆ ಪ್ರಕರಣಲ್ಲಿ ಸಿಲುಕಿಸಲು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣ ಹಾಗೂ ಗುಜರಾತ್ ನ 12 ವಿವಿಧ ಸ್ಥಳಗಳಿಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಇದರ ಬೆನ್ನಿಗೇ ಆಕೆಯನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.
ಆರೋಪಿ ಯುವತಿಯನ್ನು ರೆನೆ ಜೋಶಿಲ್ಡಾ ಎಂದು ಗುರುತಿಸಲಾಗಿದ್ದು, ತನ್ನ ಬಾಳ ಸಂಗಾತಿಯನ್ನಾಗಿಸಿಕೊಳ್ಳಬೇಕೆಂದು ಆಕೆ ಕನಸು ಕಂಡಿದ್ದಳು ಯುವಕನು, ತನ್ನ ಪ್ರೀತಿಯನ್ನು ನಿರಾಕರಿಸಿ,(onelove love) ಬೇರೊಬ್ಬ ಯುವತಿಯನ್ನು ವರಿಸಿದ್ದರಿಂದ, ಸೇಡು ತೀರಿಸಿಕೊಳ್ಳಲು ಆರೋಪಿ ಯುವತಿ ಮುಂದಾಗಿದ್ದಳು ಎಂದು ತಿಳಿದುಬಂದಿದೆ.

ಹೀಗಾಗಿ, ಆತನ ಜೀವನದಲ್ಲಿ ಸರಿಯಾದ ತೊಂದರೆ ಕೊಟ್ಟು ಆತನನ್ನು ಜೈಲಿಗೆ ಕಳುಹಿಸಬೇಕೆನ್ನುವ ಸಂಚು ರೂಪಿಸಿದ್ದಳು.? ಇದಕ್ಕಾಗಿ ಯುವತಿ ಆತನ ಸೋಗಿನಲ್ಲಿ ಬಾಂಬ್ ಬೆದರಿಕೆ ಕರೆ ಮಾಡಿದ್ದಳು ಎಂದು ಆರೋಪಿಸಲಾಗಿದೆ. ಆಕೆ ತನ್ನ ಗುರುತು ಹಾಗೂ ಸ್ಥಳವನ್ನು ಮರೆ ಮಾಚಲು ನಕಲಿ ಇಮೇಲ್ ವಿಳಾಸಗಳು, ವರ್ಚುಯಲ್ ಪ್ರೈವೇಟ್ ನೆಟ್ ವರ್ಕ್ಸ್ ಹಾಗೂ ಡಾರ್ಕ್ ವೆಬ್ ಅನ್ನು ಬಳಸಿದ್ದಳು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಡಿಜಿಟಲ್ ಜಾಡು ಸೇರಿದಂತೆ ವ್ಯಾಪಕ ಪ್ರಮಾಣದ ತಾಂತ್ರಿಕ ನಿಗಾವಣೆ ಇರಿಸಿದ ನಂತರ, ಶನಿವಾರ ಆಕೆಯನ್ನು ಚೆನ್ನೈನಲ್ಲಿನ ಆಕೆಯ ನಿವಾಸದಿಂದ ಅಹಮದಾಬಾದ್ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಶರದ್ ಸಿಂಘಾಲ್, ಜೊಶಿಲ್ಡಾ, ನಕಲಿ ಇಮೇಲ್ ಖಾತೆಗಳನ್ನು ಸೃಷ್ಟಿಸಿದ್ದಳು. ಈ ಪೈಕಿ ಆಕೆ ವಿವಾಹವಾಗಲು ಬಯಸಿದ್ದ ದಿವಿಜ್ ಪ್ರಭಾಕರ್ ಎಂಬ ಯುವಕನ ಹೆಸರಿನಲ್ಲಿ ಸೃಷ್ಟಿಸಲಾಗಿದ್ದ ಖಾತೆಯೂ ಸೇರಿತ್ತು ಎಂದು ಹೇಳಿದ್ದಾರೆ.
ರೊಬೊಟಿಕ್ಸ್ ಇಂಜಿನಿಯರಿಂಗ್ ನಲ್ಲಿ ತರಬೇತಿ ಪಡೆದಿರುವ ಜೊಶಿಲ್ಡಾ, 2022ರಿಂದ ಚೆನ್ನೈನಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಸಮಾಲೋಚಕಿಯಾಗಿ ಒಳ್ಳೆಯ ಕೆಲಸವನ್ನೆ ನಿರ್ವಹಿಸುತ್ತಿದ್ದಳು.
ತನ್ನ ಮೇಲೆ ಇಷ್ಟವಿಲ್ಲದ ಯುವಕನ ಬೆನ್ನಿಗೇ ಬಿದ್ದ ಯುವತಿ ಕ್ರಿಮಿನಲ್ ಬುದ್ಧಿಯನ್ನು ನೆತ್ತಿಗೆರಿಸಿಕೊಂಡು ಲವ್ ರಿಜೇಕ್ಟ್ ಮಾಡಿದ ಯುವಕನನ್ನು ಜೈಲಿಗೆ ಕಳುಹಿಸಲು ಹೋಗಿ ತಾನೆ ಜೈಲುಪಾಲಗಿದ್ದಾಳೆ.ತನ್ನ ಸುಂದರ ಜೀವನವನ್ನು ತನ್ನ ಕೈಯಾರೆ ಹಾಳುಮಾಡಿಕೊಂಡು ಜೈಲು ಕಂಬಿಗಳ ಹಿಂದೆ ಸರಿದಿದ್ದಾಳೆ


