ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತ್ಗಳ ಎದುರು ಬಿಜೆಪಿಯಿಂದ ಪ್ರತಿಭಟನೆ.!
news.ashwasurya.in
ಅಶ್ವಸೂರ್ಯ/ಕುಂದಾಪುರ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳ ಮುಂದೆ ಬಿಜೆಪಿಯಿಂದ ಜೂ.23 ಸೋಮವಾರ ಪ್ರತಿಭಟನೆ ನಡೆದಿದ್ದು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಗ್ರಾಮ ಪಂಚಾಯತಿಯ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ.

ಕುಂದಾಪುರ ವಿಧಾನಸಭಾ ಸದಸ್ಯ ಕಿರಣ್ ಕುಮಾರ್ ಕೊಡ್ಗಿ
ಅಮಾಸೆಬೈಲು ಗ್ರಾ.ಪಂ ಎದುರು ಪ್ರತಿಭಟನೆ ನೆಡೆಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಸರಕಾರದ ಕೆಲವು ಧೋರಣೆ, ನಿಯಮಗಳನ್ನು ವಿರೋಧಿಸಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಪಂಚಾಯತ್, ಪುರಸಭೆ, ಪಟ್ಟಣಪಂಚಾಯತ್ನಲ್ಲಿ ಪ್ರತಿಭಟನೆ ಮಾಡಲಾಗಿದೆ. ದ.ಕ.-ಉಡುಪಿ ಜಿಲ್ಲೆಯಲ್ಲಿ 9/11 ನಿವೇಶನಗಳ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದು ಎಲ್ಲಾ ಅಧಿವೇಶನದಲ್ಲಿ ಧ್ವನಿಯೆತ್ತಿದರೂ ಸರಕಾರ ಗಮನಹರಿಸುತ್ತಿಲ್ಲ. ಮೊದಲು ಗ್ರಾ.ಪಂ.ಗೆ 25 ಸೆಂಟ್ಸ್ ತನಕ, ತಾಲೂಕು ಪಂಚಾಯತಿಗೆ 1 ಎಕರೆಗೆ 9/11 ಮಾಡುವ ಅಧಿಕಾರವಿತ್ತು. ಈಗ ಅದನ್ನು ಪ್ರಾಧೀಕಾರಕ್ಕೆ ನೀಡಿದ್ದು ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ. ಮಡಾಮಕ್ಕಿ, ಬೆಳ್ವೆ ಜನರು ಉಡುಪಿಗೆ ಹೋಗಬೇಕಿದೆ. ಕಳೆದ 1 ವರ್ಷದಿಂದ ಪ್ರಾಧೀಕಾರದಲ್ಲಿ ಸಿಂಗಲ್ ಲೇಔಟ್ ಅನುಮೋದನೆಯಾಗದೆ ಮನೆ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಹಾಗೆಯೇ ಹಿರಿಯ ನಾಗರಿಕರ ಪಿಂಚಣಿ ಸೌಲಭ್ಯ ನಿಲ್ಲಿಸುವ ಹುನ್ನಾರವನ್ನು ಸರಕಾರ ಮಾಡುತ್ತಿದೆ. ಬಸವ ವಸತಿ, ಆಶ್ರಯ ಮನೆಗಳ ಬಿಡುಗಡೆ ಈ ಸರಕಾರದಿಂದ ಆಗಿಲ್ಲ. ಹಿಂದೆ ಮಂಜೂರಾದ ಮನೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಅಕ್ರಮ- ಸಕ್ರಮ ಅರ್ಜಿಗಳನ್ನು ಸಮಿತಿ ಮುಂದೆ ತಾರದೆ ಅಧಿಕಾರಿಗಳೇ ತಿರಸ್ಕರಿಸುತ್ತಿದ್ದು ಅರ್ಜಿಗಳನ್ನು ಸಮಿತಿ ಮುಂದಿಡಬೇಕು. ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯರು ಹೈರಾಣಾಗಿದ್ದಾರೆ. ಅಭಿವೃದ್ಧಿಗೆ ಅನುದಾನಗಳು ಸಿಗುತ್ತಿಲ್ಲ. ಇದೆಲ್ಲಾ ಸಮಸ್ಯೆಗಳನ್ನು ಶೀಘ್ರ ರಾಜ್ಯದ ಸರಕಾರ ಬಗೆಹರಿಸದಿದ್ದಲ್ಲಿ ಅಧಿವೇಶನದಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು.






ಅಮಾಸೆಬೈಲು ಗ್ರಾಮ ಪಂಚಾಯತ್ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ಕುಲಾಲ್, ಉಪಾಧಕ್ಷ ಶಂಕರ ಪೂಜಾರಿ ಸಹಿತ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ 37 ಗ್ರಾಮ ಪಂಚಾಯತಿ 1 ಪುರಸಭೆ, 1 ಪಟ್ಟಣ ಪಂಚಾಯತ್ ಎದುರು ಪ್ರತಿಭಟನೆ ನಡೆದಿದ್ದು ಗೋಪಾಡಿ ಗ್ರಾ.ಪಂ ಎದುರು ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ, ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ನೇತೃತ್ವದಲ್ಲಿ ಧರಣಿ ನಡೆದಿದ್ದು ಉಪಾಧ್ಯಕ್ಷೆ ಶಾಂತಾ ಎಸ್.ಎಂ., ಸದಸ್ಯರಾದ ನಾಗೇಶ್ ಶೆಟ್ಟಿಗಾರ್, ಸರೋಜಾ, ನೇತ್ರಾವತಿ, ಸಾವಿತ್ರಿ, ಪ್ರಭಾಕರ್, ಗಿರೀಶ್ ಉಪಾಧ್ಯ, ಜಿ.ಪಂ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಂದ್ರ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

ಬೀಜಾಡಿ ಗ್ರಾ.ಪಂ. ಎದುರಿನ ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಉಪಾಧ್ಯಕ್ಷೆ ರಜಿನಿ ಜ್ಯೂಲಿ, ಸದಸ್ಯರಾದ ವಾದಿರಾಜ ಹೆಬ್ಬಾರ್, ಚಂದ್ರ ಮೊಗವೀರ, ಮಂಜುನಾಥ ಕುಂದರ್, ಸುಮತಿ ನಾಗರಾಜ್, ವಿಶ್ವನಾಥ್ ಮೊಗವೀರ, ಪ್ರಸನ್ನ ದೇವಾಡಿಗ, ಪೂರ್ಣಿಮಾ ಉಪಸ್ಥಿತರಿದ್ದರು.







ಕೋಟೇಶ್ವರ ಗ್ರಾ.ಪಂ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ರಾಗಿಣಿ ದೇವಾಡಿಗ, ಉಪಾಧ್ಯಕ್ಷ ಆಶಾ ವಿ., ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯರಾದ ಉದಯ್ ನಾಯಕ್, ಲೋಕೇಶ್ ಅಂಕದಕಟ್ಟೆ, ಚಂದ್ರಮೋಹನ್ ದೇವಾಡಿಗ, ವಿವೇಕ್ ದೇವಾಡಿಗ, ನಾಗರಾಜ್ ಎಂ. ಕಾಂಚನ್, ರಾಜು ಪೂಜಾರಿ, ರಾಜು ಮರಕಾಲ, ಸುರೇಶ್ ದೇವಾಡಿಗ, ಲತಾ ಶೇಖರ್ ಮೊಗವೀರ, ಆಶಾ ಜಿ. ಕುಂದರ್, ಶೋಭಾ ಶೆಟ್ಟಿ, ಸುಶೀಲಾ ಪೂಜಾರಿ, ಪುಟ್ಟಿ, ವಿಶಲಾಕ್ಷಿ ಶೆಟ್ಟಿಗಾರ್, ಜಯಲಕ್ಷ್ಮೀ ಆಚಾರ್, ಮುಖಂಡರಾದ ರಾಜೇಶ್ ಉಡುಪ, ಶೇಖರ ಮೊಗವೀರ, ಭಾಸ್ಕರ್ ಕುಂಬ್ರಿ ಮೊದಲಾದವರಿದ್ದರು.






ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಷ್ಟು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಒಂದು ನೋಟ :👇














