

ಬೆಂಗಳೂರು: ಯುವತಿಗೆ ಕಿರುಕುಳ ನೀಡಿದ ಗಾಂಜಾ ಗ್ಯಾಂಗ್‌ನ ಐವರ ಬಂಧನ.

news.ashwasurya.in
ಅಶ್ವಸೂರ್ಯ /ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರದಲ್ಲಿ ಹಾಡಹಗಲೇ ಗಾಂಜಾ ಮತ್ತಿನಲ್ಲಿದ್ದ ಐವರ ಗ್ಯಾಂಗ್ ದಿನಸಿ ಅಂಗಡಿಗೆ ಹೋಗುತ್ತಿದ್ದ ಯುವತಿಯೊಬ್ಬರ ಮೈಕೈ ಮುಟ್ಟಿ ಎಳೆದಾಡಿ ಹೊಡೆದು ಕಿರುಕುಳ ನೀಡಿದ ಪುಂಡರನ್ನು ಕೊನೆಗೂ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಯುವತಿಯ ಮನೆ ಪಕ್ಕದಲ್ಲೇ ವಾಸಿಸುತ್ತಿದ್ದ ಐದರಿಂದ ಆರು ಜನ ಪುಂಡರು ಯವತಿಯು ದಿನಸಿ ಅಂಗಡಿಗೆ ತೆರಳುತ್ತಿದ್ದ ವೇಳೆ ನಡು ರಸ್ತೆಯಲ್ಲಿ ಹಾಡುಹಗಲೆ ಆಕೆಯನ್ನು ಮನಬಂದಂತೆ ನಿಂದಿಸಿ ಮೈಕೈಮುಟ್ಟಿ ಆಕೆಯನ್ನು ಎಳೆದಾಡಿ ಹೊಡೆದು ನಿಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾನ್ ರಿಚರ್ಡ್, ಪುನೀತ್ ಅಲಿಯಾಸ್ ಕಾಡೆ, ಅನುಷ್ ಮದನ್, ಅರುಣ್, ಕಾಣಿಕ್ಯಾ ಸ್ವಾಮಿ ಎಂದು ಗುರುತಿಸಲಾಗಿದೆ.

ಹಾಡಹಗಲೇ ಗಾಂಜಾದ ನಶೆಯಲ್ಲಿ ತೂರಾಡುತ್ತಿದ್ದ ಯುವಕರು ನಡುಬೀದಿಯಲ್ಲಿ ಅಮಾಯಕ ಯುವತಿ ಎದುರು ಅಟ್ಟಹಾಸ ಮೆರೆದಿದ್ದರು. ಅಂಗಡಿಗೆ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಮನಬಂದಂತೆ ನಿಂದಿಸಿದ್ದರು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಈ ಕೃತ್ಯ ನಡೆದಿತ್ತು.ರಾಜ್ಯಾದ್ಯಂತ ಬಾರಿ ಟೀಕೆಗೆ ಒಳಗಾಗಿತ್ತಿ. ಗಾಂಜಾ ಮತ್ತು ಎಣ್ಣೆ ನಶೆಯಲ್ಲಿದ್ದ ಐದರಿಂದ ಆರು ಪುಂಡರ ಗ್ಯಾಂಗ್ ಈ ಕೃತ್ಯ ಎಸಗಿದ್ದು ಪ್ರತಿರೋಧ ವ್ಯಕ್ತಪಡಿಸಿದ ಯುವತಿಯ ಮೇಲೆ ಹಲ್ಲೆ ಮನಬಂದಂತೆ ಬೈದು ಮೈಕೈಮುಟ್ಟಿ ಸಾಕಷ್ಟು ತೊಂದರೆ ಕೊಟ್ಟಿದ್ದರು.

ಇದನ್ನು ಪ್ರತಿಭಟಿಸಿದ ಯುವತಿ ಪುಂಡರಿಗೆ ಕಾಲಿನಿಂದ ಒದ್ದು ಪ್ರತಿರೋಧ ತೋರಿದ್ದರು.
ನಂತರ ಅಲ್ಲಿಯೇ ಇದ್ದ ಸ್ಥಳೀಯರು ಆಕೆಯನ್ನು ಮನೆಗೆ ಕರೆದೊಯ್ದಿದ್ದರು. ಆದರೆ ಗಾಂಜಾ ನಶೆಯಲ್ಲಿದ್ದ ಆ ಪುಂಡರ ಗ್ಯಾಂಗ್ ಮನೆಗೂ ನುಗ್ಗಿ ಮನೆಯವರಿಗೂ ಅವಾಜ್ ಹಾಕಿತ್ತು. ಈ ಕುರಿತು ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರು ಪುಂಡರ ವಿರುದ್ಧ FIR ದಾಖಲಾಗಿತ್ತು.


