ಸುಪ್ರೀಂ ಕೋರ್ಟ್ ವಕೀಲೆಯನ್ನೆ ಹತ್ಯೆಗೈದ ಪತಿರಾಯ, ಪತ್ನಿಯನ್ನು ಕೊಂದು 24 ಗಂಟೆಗಳ ಕಾಲ ಮನೆಯಲ್ಲೇ ಅವಿತುಕುಳಿತಿದ್ದ ಕೊಲೆಗಾರನ ಬಂಧನ

ಹತ್ಯೆಯಾದ ವಕೀಲೆ ರೇಣು ಸಿನ್ಹಾ

ಸುಪ್ರೀಂ ಕೋರ್ಟ್ ವಕೀಲೆಯನ್ನೆ ಹತ್ಯೆಗೈದ ಪತಿರಾಯ, ಪತ್ನಿಯನ್ನು ಕೊಂದು 24 ಗಂಟೆಗಳ ಕಾಲ ಮನೆಯಲ್ಲೇ ಅವಿತುಕುಳಿತಿದ್ದ ಕೊಲೆಗಾರನ ಬಂಧನ

ನೋಯ್ಡಾ: ಸುಪ್ರೀಂ ಕೋರ್ಟ್ ವಕೀಲ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಮನೆಯ ಸ್ಟೋರ್ ರೂಮಿನಲ್ಲೆ ಇಪ್ಪತ್ನಾಲ್ಕು ಗಂಟೆಗಳ ಕಾಲ ತಲೆಮರೆಸಿಕೊಂಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
62 ವರ್ಷದ ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿಯೊಬ್ಬರು ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ತನ್ನ ಬಂಗಲೆಯಲ್ಲಿ ಸುಪ್ರೀಂ ಕೋರ್ಟ್ ವಕೀಲ ಪತ್ನಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಆರೋಪಿ ನಿತಿನ್ ನಾಥ್ ಸಿನ್ಹಾ ಕಳೆದ ರಾತ್ರಿ ಪತ್ನಿಯನ್ನು ಕೊಂದು ಮನೆಯ ಸ್ಟೋರ್ ರೂಂನಲ್ಲಿ ಅಡಗಿಕೊಂಡಿದ್ದ ಎಂದು ಪೊಲೀಸರು ಆತನ ಬಂಧನದ ನಂತರ ತಿಳಿಸಿದ್ದಾರೆ. 
ಮಾಹಿತಿ ಪ್ರಕಾರ ಪತ್ನಿಯನ್ನು ಕೊಂದ ನಂತರ ನಿತಿನ್ ನಾಥ್ ಅವರು ಒಂದು ದಿನಗಳ ಕಾಲ ಮನೆಯ ಸ್ಟೋರ್ ರೂಂನಲ್ಲಿ ಅಡಗಿಕೊಂಡಿದ್ದನಂತೆ.! ಆರೋಪಿಯ ಪತ್ನಿ 61 ವರ್ಷದ ರೇಣು ಸಿನ್ಹಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದರು. ದಂಪತಿ ನಡುವೆ ನಿರಂತರ ಜಗಳ ನೆಡಯುತ್ತಿತ್ತು ಎನ್ನಲಾಗಿದೆ.
ನೋಯ್ಡಾದ ಸೆಕ್ಟರ್ 30ರ ಮನೆಯೊಂದರಲ್ಲಿ ಸುಪ್ರೀಂ ಕೋರ್ಟಿನ ವಕೀಲೆಯ ಶವ ಭಾನುವಾರ ಪತ್ತೆಯಾಗಿತ್ತು. ಹತ್ಯೆಯಾದ ನಂತರದಲ್ಲಿ ವಕೀಲರು ಎರಡು ದಿನಗಳ ಕಾಲ ಫೋನ್ ತೆಗೆಯದಿದ್ದಾಗ, ಆಕೆಯ ಸಹೋದರ ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಮನೆಯ ಬೀಗವನ್ನು ಒಡೆದು ಪರಿಶೀಲಿಸಿದಾಗ ಸ್ನಾನಗೃಹದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ವೇಳೆ ಪತಿ ತಲೆಮರೆಸಿಕೊಂಡಿದ್ದ ಪತಿಯ ಬೇಟೆಗೆ ಪೋಲಿಸರು ಮುಂದಾಗಿದ್ದರು ದಿನ ಪೂರ್ತಿ ಆತನಿಗಾಗಿ ಹುಡುಕಾಡಿದರು ಸುಳಿವು ಸಿಕ್ಕಿರಲಿಲ್ಲ ಕೊನೆಗೂ ಪೊಲೀಸರು ಮಾಹಿತಿ ಕಲೆಹಾಕಿದ್ದರು.
ಕೊನೆಗೂ ಪತ್ನಿಯನ್ನು ಹತ್ಯೆಮಾಡಿದ ಪತಿರಾಯ ಪತ್ನಿಯನ್ನು ಕೊಲೆ ಮಾಡಿ ಮನೆಯ ಸ್ಟೋರ್ ರೂಮಿನಲ್ಲೆ ಆಡಗಿಕುಳಿತಿದ್ದ ಈತನನ್ನು ಪತ್ತೆ ಬಂಧಿಸಿದ ಪೋಲಿಸರು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಯಾದ ಮಹಿಳೆ ತನ್ನ ಪತಿ ನಿತಿನ್ ನಾಥ್ ಸಿನ್ಹಾ ಅವರೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಅವರ ಮಗ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ, ಆತ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಭಾರತಕ್ಕೆ ಬರುತ್ತಾರೆ.
ಗಂಡ ಹೆಂಡತಿ ನಡುವೆ ನಿರಂತರ ಜಗಳ ನೆಡೆಯುತ್ತಿತ್ತು ಎಂದು
ಅಕ್ಕಪಕ್ಕದ ಜನರಿಂದ ತಿಳಿದು ಬಂದಿದೆ. ಮಾಹಿತಿ ಪ್ರಕಾರ ಪತಿ-ಪತ್ನಿಯ ನಡುವೆ ಮನಸ್ತಾಪ ಮಾತು ಕಥೆ ಇಲ್ಲದೆ ಬದುಕುತ್ತಿದ್ದರಂತೆ. ನಿತ್ಯ ಮಾತು ಎಂದು ಆರಂಭವಾದರೆ ದೊಡ್ಡ ವಾಗ್ವಾದವೆ ನಡೆಯುತ್ತಿತ್ತಂತೆ! ಪತಿ-ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರಂತೆ, ಒಂದೇ ಮನೆಯಲ್ಲಿ ಎರಡು ಭಾಗಮಾಡಿಕೊಂಡು ವಾಸವಾಗಿದ್ದರಂತೆ!!. ಮಗ ಬಂದಾಗಲೆಲ್ಲ ಅಪ್ಪನ ಜೊತೆ ಮಾತಾಡೋದು ಕಡಿಮೆಯಂತೆ. ಸದ್ಯ ಈ ಬಗ್ಗೆಯು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತ್ನಿಯನ್ನು ಕೊಲೆ ಮಾಡಿದ ಪತಿ ಸ್ಟೋರ್ ರೂಂನಲ್ಲಿ ತಲೆಮರೆಸಿಕೊಳ್ಳಲು ಕಾರಣವೇನು ಎನ್ನುವುದು ಮಾತ್ರ ತನಿಖೆಯಿಂದ ಬಯಲಾಗಬೇಕಿದೆ.
ಗಂಡ ಹೆಂಡತಿಯ ಸಂಭಂಧ ಸರಿಯಾಗದ ಮಟ್ಟಕ್ಕೆ ತಲುಪಿದೆ. ಈ ಕಾರಣದಿಂದ ಮನೆ ಮಾರಾಟಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಇದು ಜಗಳಕ್ಕೆ ತಿರಿವು ಪಡೆದುಕೊಂಡು ಹೆಂಡತಿಯನ್ನೆ ಕೊಲೆಮಾಡಿದ್ದಾನೆ ಪತಿ ಇದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ನೋಯ್ಡಾ ಪೊಲೀಸರು ಹೇಳಿದ್ದಾರೆ. ಗಂಡ ಹೆಂಡತಿ ಸಂಬಂದ ಹಳಸಿದ್ದರಿಂದ ಪತಿ ನಿತಿನ್ ನಾಥ್ ಸಿನ್ಹಾ ಬಂಗಲೆಯನ್ನು ಮಾರಾಟ ಮಾಡಲು ಮುಂದಾಗಿದ್ದರಂತೆ ಆದರೆ ಪತ್ನಿ ರೇಣು ಸಿನ್ಹಾ ಅವರಿಗೆ ಇಷ್ಟವಿರಲಿಲ್ಲ. ಮನೆ ಮಾರಾಟಕ್ಕೆ ಇಟ್ಟು ಖರೀದಿದಾರರಿಂದ ಟೋಕನ್ ಹಣವನ್ನೂ ಪಡೆದಿದ್ದರಂತೆ. ಆದರೆ ಪತ್ನಿ ರೇಣು ಮನೆ ಮಾರಲು ಸಿದ್ಧವಿರಲಿಲ್ಲ. ಈ ಬಂಗಲೆ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ಪತ್ನಿಯನ್ನು ಕೊಲೆಮಾಡಿರ ಬಹುದು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಹತ್ಯೆಯ ತನಿಖೆ ಮುಂದುವರೆದಿದ್ದು ಅಸಲಿ ಹೊರಬಿಳ ಬೇಕಿದೆ

ಸುಧೀರ್ ವಿಧಾತ , ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!