ಹಿಂದೂ ಪ್ರಚಾರಕಿ ಚೈತ್ರಾ ಕುಂದಾಪುರ
ಹಿಂದೂ ಸಂಘಟನೆಯ ಪ್ರಚಾರಕಿ, ಪ್ರಚೋದನಕಾರಿ ಭಾಷಣಕ್ಕೆ ಹೆಸರುವಾಸಿಯಾಗಿದ್ದ ಚೈತ್ರಾ ಕುಂದಾಪುರರನ್ನು ಸಿಸಿಬಿ ಬೆಂಗಳೂರು ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಂದೂರಿನ ಸಮಾಜ ಸೇವಕರಾದ ಗೋವಿಂದ್ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ಐದು ಕೋಟಿ ರೂಪಾಯಿ ವಂಚಿಸಿರುವ ಆರೋಪದ ಮೇರೆಗೆ ಮಂಗಳವಾರ ರಾತ್ರಿ ಸಿಸಿಬಿ ಪೋಲಿಸರು ಸಿನಿಮಾ ಶೈಲಿಯಲ್ಲಿ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ನಾಯಕ್ ಪೆಲತ್ತೂರು ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನದ ವೇಳೆ ಚೈತ್ರಾ ಕುಂದಾಪುರ ಹೈಡ್ರಾಮಾ ಮಾಡಿದ್ದಾಳೆ. ಕೈಬಳೆ ಒಡೆದುಕೊಂಡು, ಉಂಗುರ ನುಂಗಲು ಯತ್ನಿಸಿದ್ದಾರೆ.
ಚೈತ್ರಾ ಕುಂದಾಪುರ ಈಕೆಯ ಹೆಸರನ್ನೂ ಅನೇಕ ಬಾರಿ ನೀವುಗಳು ಕೇಳಿರುತ್ತೀರಾ.. ತಾನೊಬ್ಬಳು ಹಿಂದೂಪರ ಕಾರ್ಯಕರ್ತೆ, ಹಿಂದೂ ಪ್ರಚಾರಕಿ ಎಂದು ಗುರುತಿಸಿಕೊಂಡು ನೂರಾರು ವೇದಿಕೆಗಳಲ್ಲಿ ಭಾಷಣ ಬಿಗಿದಿದ್ದಾಳೆ. ಹಿಂದೂ ಹಿಂದೂ ಎಂದು ಹಿಂದೂ ಉದ್ಯಮಿಗೆ ಕೋಟ್ಯಾಂತರ ರೂಪಾಯಿ ಉಂಡೆನಾಮ ತಿಕ್ಕಿ ಈಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾಳೆ.
ಅದೇನೊ ಅಂತಾರಲ್ಲ ಮಾಡೋದು ಅನಾಚಾರ ಮನೆ ಮುಂದೆ ವೃಂದಾವನ ಎಂಬತಿದೆ ಈಕೆಯ ವಂಚನೆ.! ಹಿಂದೂ ಕಾರ್ಯಕರ್ತೆ ಎಂಬ ಮುಖವಾಡ ಧರಿಸಿ ಖಡಕ್ ಆರ್ ಎಸ್ ಎಸ್ ಮತ್ತು ಬಿಜೆಪಿಯ ಪಕ್ಷಕ್ಕೆ ಮೊಸ ಮಾಡಿರುವ ಈಕೆ ಕಳೆದ ವಿಧಾನಸಭಾ ಚುನಾವಣೆಯನ್ನೇ ತನ್ನ ವಂಚನೆಗೆ ಅಸ್ತ್ರ ಮಾಡಿಕೊಂಡು ಕಳೆದ ವಿಧಾನಸಭಾ ಚುನಾವಣೆಯ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಯೊಬ್ಬರೊಗೆ ಐದು ಕೋಟಿ ಉಂಡೇನಾಮ ಹಾಕಿದ್ದಾಳೆ ಎನ್ನುವ ಮಾತು ಕೇಳಿಬರುತ್ತಿದೆ.ವಂಚಿತ ಉದ್ಯಮಿ ಗೋವಿಂದ ಬಾಬು ಪೂಜಾರಿ, ಬಂಡೇಪಾಳ್ಯ ಪೊಲೀಸ್ ಠಾಣೆ ದೂರು ನೀಡಿದ್ದು,ಸ್ವಯಂ ಘೋಷಿತ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅಂಡ್ ಟೀಂ ವಿರುದ್ಧ ಎಫ್ಐಆರ್ ದಾಖಲಾಗಿತ್ತು! ಚೆಫ್ ಲಾಕ್ ಸಂಸ್ಥೆ ಮುಖ್ಯಸ್ಥರಾಗಿರುವ ಗೋವಿಂದ ಬಾಬು ಪೂಜಾರಿ ಬೈಂದೂರು ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಬಗ್ಗೆ ಸ್ನೇಹಿತರ ಬಳಿ ಚರ್ಚೆ ನಡೆಸುತ್ತಿದ್ದರು. ಆ ಸಮಯಕ್ಕೆ ಸರಿಯಾಗಿ ಎಂಟ್ರಿ ಕೊಟ್ಟ ಹಿಂದೂ ಪ್ರಚಾರಕಿ ಚೈತ್ರಾ ಕುಂದಾಪುರ, ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದಾಳೆ.
ಟಿಕೆಟ್ ಆಕಾಂಕ್ಷಿ ಗೋವಿಂದ ಪೂಜಾರಿಯನ್ನು ನಂಬಿಸಿ ಯಾಮಾರಿಸಲು ಚೈತ್ರಾ ಅಂಡ್ ಗ್ಯಾಂಗ್ ರೂಪಿಸಿದ್ದ ಗೆಮ್ ಪ್ಲಾನ್ ಒಂದೆರಡಲ್ಲ. ಯಾರೊ ಒಬ್ಬನನ್ನು ಟಿಪ್ ಟಾಪ್ ಆಗಿ ರೆಡಿಮಾಡಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಎಂದು ನಂಬುವಂತೆ ಮಾಡಿ ತೋರಿಸಿದ್ದರು. ಚಿಕ್ಕಮಗಳೂರಿನ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಆರ್ ಎಸ್ ಎಸ್ ಪ್ರಚಾರಕನಂತೆ ಬಿಂಬಿಸಿ ತೋರಿಸಲಾಗಿತ್ತು. ಚಿಕ್ಕಮಗಳೂರು ಆರ್ ಎಸ್ಎಸ್ ಮುಖ್ಯಸ್ಥ ವಿಶ್ವನಾಥ್ ಜೀ ಹೆಸರಲ್ಲಿ ನಕಲಿ ವ್ಯಕ್ತಿಯನ್ನು ರೆಡಿ ಮಾಡಲಾಗಿತ್ತು. ನಾಯ್ಕ್ ಹೆಸರಿನ ಬಿಜೆಪಿ ಪ್ರಚಾರ ಸಮಿತಿ ಸದಸ್ಯ ಎಂದು ಕಬಾಬ್ ಮಾರುವವನಿಗೆ ವೇಷ ಹಾಕಿಸಿದ್ದರು.ಆರ್ ಎಸ್ ಎಸ್ ಪ್ರಚಾರಕ ಅಂತಾ ಧನರಾಜ್ ಎಂಬುವವನಿಗೂ ಗೇಟಪ್ ಹಾಕಿಸಿ ನೇಮಿಸಿದ್ರು. ಅಷ್ಟೇ ಅಲ್ಲದೇ ಅಭಿನವ ಹಾಲಶ್ರೀ ಸ್ವಾಮೀಜಿ ಎಂಬುವವರಿಗೆ 1.5 ಕೋಟಿ ಹಣ ಕೊಡಿಸಿದ್ದರು.
ಇಲ್ಲಿ ಕಾಣಿ ಸ್ವಾಮೀಜಿ ಹೇಳಿದ್ರೆ ಸಾಕು ಮರಾಯ್ರೆ ಟಿಕೆಟ್ ಪಕ್ಕಾ ಎಂದು ನಂಬುವಂತೆ ಮಾಡಿ ವಿಜಯನಗರದಲ್ಲಿ ಹಣ ಕೊಡುವಂತೆ ಮಾಡಿದ್ದರು. ಹೀಗೆ ಸ್ವಾಮೀಜಿ, ಪ್ರಚಾರಕ ಸದಸ್ಯ ಎಂದು ನಂಬುವಂತೆ ಮಾಡಿ ಬರೋಬ್ಬರಿ ಐದು ಕೋಟಿ ನುಂಗಿದ್ದ ಚೈತ್ರಾಗೆ ಗಗನ್ ಕಡೂರು, ಪ್ರಸಾದ್, ಅಭಿನವ್ ,ಅಭಿನವ ಹಾಲಶ್ರಿ ಸ್ವಾಮಿ, ರಮೇಶ್, ನಾಯ್ಕ್ ಸಾಥ್ ನೀಡುವುದರ ಜೋತೆಗೆ ಭರ್ಜರಿಯಾಗಿ ನಟಿಸಿ ನಂಬುವಂತೆ ಮಾಡುವಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಇಷ್ಟೆಲ್ಲಾ ನಾಟಕವಾಡಿಸಿದ ಅಭಿನಯ ಚತುರೆ ಚೈತ್ರಾ ಕುಂದಾಪುರ ಟಿಕೆಟ್ ಕೊಡಿಸದೇ ದಿನ ದೂಡಿ ಕೊನೆಗೆ ನಕಲಿ ಆರ್ ಎಸ್ ಎಸ್ ಪ್ರಚಾರಕ ವಿಶ್ವನಾಥ್ ಜೀ ಮೃತಪಟ್ಟಿದ್ದಾರೆಂದು ಕಥೆ ಕಟ್ಟಿದ್ದಾಳೆ!! ಇತ್ತ ಟಿಕೆಟ್ ಇಲ್ಲ, ಅತ್ತ ಕೊಟ್ಟ ಕೋಟ್ಯಾಂತರ ರೂಪಾಯಿ ಹಣವೂ ಇಲ್ಲವೆಂದಾಗ ಸ್ವತಃ ತಾನೇ ತನಿಖೆ ನಡೆಸಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ, ಎಲ್ಲವನ್ನೂ ಸೂಕ್ಷ್ಮವಾಗಿ ವಿಚಾರಿಸಿ ನೋಡಿದಾಗ ನಾನು ಹಿಂದೂ ಪ್ರಚಾರಕಿಯ ವೇಷಭೂಷಣಕ್ಕೆ ಆಕೆಯ ಮಾತಿಗೆ ನಂಬುವಂತೆ ಮಾಡಿದ ಪಾತ್ರಧಾರಿಗಳ ನಾಟಕಕ್ಕೆ ನಾನು ಮೋಸ ಹೋಗಿದ್ದೇನೆ ಎನ್ನುವುದು ಗೊತ್ತಾಗಿದೆ ಗೋವಿಂದ ಬಾಬು ಅವರಿಗೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ ದಾಖಲಾದ ಕೇಸ್ ಬಂಡೆಪಾಳ್ಯದಿಂದ ಸಿಸಿಬಿಗೆ ವರ್ಗಾವಣೆಯಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೋಲಿಸರ ತಂಡ ತನಿಖೆ ಕೈಗೊಂಡು ಆರೋಪಿ ಚೈತ್ರಾ ಕುಂದಾಪುರ,ಪ್ರಸಾದ್, ಗಗನ್ ಮತ್ತು ಪ್ರಜ್ವಲ್ ಶೆಟ್ಟಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಸುಧೀರ್ ವಿಧಾತ , ಶಿವಮೊಗ್ಗ