
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ “ತಿಮ್ಮನ ಮೊಟ್ಟೆಗಳು” ಚಿತ್ರವು ಇದೇ ಜೂನ್ 27ರಂದು ತೆರೆಗೆ.


news.ashwasurya.in

ಅಶ್ವಸೂರ್ಯ/ಶಿವಮೊಗ್ಗ : ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ನ ಅಡಿಯಲ್ಲಿ ಚಿತ್ರಕರಣ ಪೂರೈಸಿರುವ ಚೊಚ್ಚಲ ನಿರ್ಮಾಣದ “ತಿಮ್ಮನ ಮೊಟ್ಟೆಗಳು” ಚಿತ್ರಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹೂಡಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ಬರೆದಿರುವ ‘ಕಾಡಿನ ನೆಂಟರು’ ಕಥಾ ಸಂಕಲನದಿಂದ ಆಯ್ದ ಒಂದು ಕಥೆ ‘ತಿಮ್ಮನ ಮೊಟ್ಟೆಗಳು’ ಈಗ ಸಿನಿಮಾ ರೂಪ ಪಡೆದುಕೊಂಡಿದೆ.
ತೀರ್ಥಹಳ್ಳಿಯ ಕಾನನದ ಗರ್ಭದಲಿ ಸುಂದರ ಪರಿಸರದಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಸೆರೆ ಹಿಡಿಯಲಾಗಿದೆ.
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರವು ಇದೇ ತಿಂಗಳು, ಅಂದರೆ ಜೂನ್ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹೊಸಬರ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ಇದೀಗ, ಈ ಚಿತ್ರದ ಬಗ್ಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ‘ತಿಮ್ಮನ ಮೊಟ್ಟೆಗಳು ಚಿತ್ರವು ಯಶಸ್ಸು ಕಾಣಲಿ ಎಂದು ಹರಸಿ, ಹಾರೈಸಿದ್ದಾರೆ.
ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹಾಕಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ಬರೆದಿರುವ ‘ಕಾಡಿನ ನೆಂಟರು’ ಕಥಾ ಸಂಕಲನದಿಂದ ಆಯ್ದ ಒಂದು ಕಥೆ ‘ತಿಮ್ಮನ ಮೊಟ್ಟೆಗಳು’ ಈಗ ಸಿನಿಮಾ ರೂಪ ಪಡೆದಿದೆ. ಪಶ್ಚಿಮಘಟ್ಟದ ಕಾಡುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಕಾಳಿಂಗ ಸರ್ಪದ ಕುರಿತು ಚಿತ್ರದ ಪ್ರಮುಖ ಕಥೆಯಿದ್ದು, ಮನುಷ್ಯನಲ್ಲಿರುವ ಹಾಗೆ ಪ್ರಾಣಿಗಳಲ್ಲೂ ಬಾಂಧವ್ಯವಿದೆ.
ಚಿತ್ರದ ಟ್ರೈಲರ್
ಈತರಹದ ವಿಚಾರಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ನಿರ್ಮಾಪಕರು ಇತ್ತೀಚೆಗೆ ಅಮೇರಿಕಾದ ಡಾಲಸ್ ನಲ್ಲಿ ಪ್ರಿಮೀಯರ್ ಶೋ ಸಹ ಆಯೋಜಿಸಿದ್ದರು. ಅಲ್ಲಿನ ಜನರು ಚಿತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಪ್ರಸಿದ್ದ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನವಾಗಿರುವ ನಮ್ಮ ಚಿತ್ರ ಜೂನ್ 27 ರಂದು ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದಿದ್ದಾರೆ ‘ತಿಮ್ಮನ ಮೊಟ್ಟೆಗಳು’ ನಿರ್ದೇಶಕರಾದ ರಕ್ಷಿತ್ ತೀರ್ಥಹಳ್ಳಿ. ‘ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮಸಂವೇದನೆಗಳನ್ನೊಳಗೊಂಡಿರುವ ಕಥಾವಸ್ತುವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ.

ನನ್ನ ಪಾತ್ರ ಕೂಡ ಚೆನ್ನಾಗಿದೆ’ ಎಂದು ಹಿರಿಯ ನಟ ಸುಚೇಂದ್ರ ಪ್ರಸಾದ್ ಕೂಡ ತಿಳಿಸಿದ್ದಾರೆ.
ತಿಮ್ಮನ ಪಾತ್ರಧಾರಿ ಕೇಶವ್ ಗುತ್ತಳಿಕೆ, ನಟಿ ಶಿಕಾ ಸೋಮಶೇಖರ್, ಪ್ರಗತಿ ಪ್ರಭು, ರಘು ರಾಮನಕೊಪ್ಪ ಹಾಗೂ ಸಂಗೀತ ನಿರ್ದೇಶಕ ಹೇಮಂತ್ ಜೋಯಿಷ್ ಕೂಡ ಈ ಚಿತ್ರ ಹಾಗೂ ತಮ್ಮತಮ್ಮ ಪಾತ್ರಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾತನ್ನಾಡಿದ್ದಾರೆ. ಅಂದಹಾಗೆ,ಈ ಚಿತ್ರ ಜೂನ್ 27 ರಂದು, ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆ ಆಗಲಿದ್ದು

ಚಿತ್ರರಸಿಕರು ಮತ್ತು ಪರಿಸರ ಪ್ರೇಮಿಗಳು ಈ ಚಿತ್ರವನ್ನು ನೋಡಿ ನಮ್ಮ ಪ್ರಯತ್ನಕ್ಕೆ ಸ್ಫೂರ್ತಿಯಾಗುವಂತೆ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಕೊರಿದ್ದಾರೆ.

ತಿಮ್ಮನ ಮೊಟ್ಟೆಗಳು..ಕಥಾವಸ್ತು
- ಪಶ್ಚಿಮ ಘಟ್ಟದ ನಿವಾಸಿ ತಿಮ್ಮಾ ತನ್ನ ಮಗನ ಶಿಕ್ಷಣ ಮತ್ತು ಹೊಸ ಮನೆಗೆ ಹಣವನ್ನು ಹುಡುಕುತ್ತಾನೆ. ಆಧ್ಯಾತ್ಮಿಕತೆಯ ಮೇಲಿನ ಅವನ ನಂಬಿಕೆಯನ್ನು ಭಂಗಗೊಳಿಸುತ್ತಾ, ಹೊರಗಿನವರ (ಹಾವು ಸಂಶೋಧನಾ ತಂಡ) ಆಜ್ಞೆಯ ಮೇರೆಗೆ ಹಣಕ್ಕಾಗಿ ರಾಜ ನಾಗರಹಾವಿನ ಮೊಟ್ಟೆಗಳನ್ನು (ದೈವಿಕವೆಂದು ಪರಿಗಣಿಸಲಾಗಿದೆ) ಹುಡುಕಲು ಹೋಗುತ್ತಾನೆ.
- ತಿಮ್ಮನ ಮೊಟ್ಟೆಗಳು ಸಾರಾಂಶ: ಅವಶ್ಯಕತೆ ಮತ್ತು ಅನಿವಾರ್ಯತೆಯು ಮನುಷ್ಯನಿಗೆ ಏನೇ ಬಂದರೂ ಅದನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ. ಬದುಕುಳಿಯುವ ಹೋರಾಟದಲ್ಲಿ, ಮನಸ್ಸು ಸರಿ ಅಥವಾ ತಪ್ಪುಗಳ ಬಗ್ಗೆ ಯೋಚಿಸುವುದಿಲ್ಲ – ಅದು ಆ ಕ್ಷಣದ ಅಗತ್ಯಕ್ಕೆ ತಲೆಬಾಗುತ್ತದೆ. ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ವಾಸಿಸುವ ಸರಳ ಹಳ್ಳಿಗ ತಿಮ್ಮ, ತನ್ನ ಮಗನ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಮತ್ತು ತನ್ನ ಶಿಥಿಲಗೊಂಡ ಗುಡಿಸಲನ್ನು ಪುನರ್ನಿರ್ಮಿಸಲು ಹತಾಶನಾಗಿದ್ದಾನೆ. ಸಾಂಪ್ರದಾಯಿಕ ವಿಧಾನಗಳ ಮೂಲಕ ಹಣವನ್ನು ಪಡೆಯಲು ಯಾವುದೇ ಮಾರ್ಗವಿಲ್ಲದೆ, ಅವನು ಇಷ್ಟವಿಲ್ಲದೆ ಅಪಾಯಕಾರಿ ಕೆಲಸವನ್ನು ಸ್ವೀಕರಿಸುತ್ತಾನೆ – ಕಾಳಿಂಗ ಸರ್ಪ ಮತ್ತು ಅದರ ಮೊಟ್ಟೆಗಳನ್ನು ಪತ್ತೆಹಚ್ಚುವುದು. ತಿಮ್ಮ ಕಾಡಿನ ಹೃದಯಕ್ಕೆ ಹೋದಾಗ, ಅವನು ಆಳವಾದ ಸಂಘರ್ಷದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ – ಬದುಕುಳಿಯುವಿಕೆ ಮತ್ತು ನಂಬಿಕೆ, ಮನುಷ್ಯ ಮತ್ತು ಪ್ರಕೃತಿ, ನಂಬಿಕೆ ಮತ್ತು ಹತಾಶೆಯ ನಡುವಿನ ಘರ್ಷಣೆ. ಹೆಚ್ಚುತ್ತಿರುವ ಆತಂಕ ಮತ್ತು ಅನಿಶ್ಚಿತತೆಯೊಂದಿಗೆ, ಅವನ ಪ್ರಯಾಣವು ಅವನ ನಂಬಿಕೆಗಳ ಪರೀಕ್ಷೆಯಾಗಿ ತೆರೆದುಕೊಳ್ಳುತ್ತದೆ, ಅವನನ್ನು ಅನಿರೀಕ್ಷಿತ ಅದೃಷ್ಟದತ್ತ ಕೊಂಡೊಯ್ಯುತ್ತದೆ. ತಿಮ್ಮನ ಮೊಟ್ಟೆಗಳು ಹೋರಾಟ, ನೈತಿಕ ಸಂದಿಗ್ಧತೆಗಳು ಮತ್ತು ನಮ್ಮ ಹಣೆಬರಹವನ್ನು ರೂಪಿಸುವ ಕಾಣದ ಶಕ್ತಿಗಳ ಹಿಡಿತದ ಕಥೆಯಾಗಿದೆ.—
- ಆದರ್ಶ್ ಅಯ್ಯಂಗಾರ್
ನಮ್ಮ ಪತ್ರಿಕಾ ಬಳಗದಿಂದಲೂ ನಮ್ಮೂರ ಯುವ ನಿರ್ದೆಶಕ ರಕ್ಷಿತ್ ತೀರ್ಥಹಳ್ಳಿ ನಿರ್ದೆಶನದ “ತಿಮ್ಮನ ಮೊಟ್ಟೆಗಳು” ಚಿತ್ರವು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣಲಿ ..ಚಿತ್ರ ತಂಡಕ್ಕೆ ಶುಭವಾಗಲಿ.
- – ಸುಧೀರ್ ವಿಧಾತ
ಶಿವಮೊಗ್ಗ ಭೂಗತ ಲೋಕದ ರಿವೆಂಜಿನ ನಂಜಿಗೆ ಬಲಿಯಾದ ಪಾತಕಿಗಳ ಸಂಪೂರ್ಣ ವರದಿ “ತುಂಗಾ ತೀರದ ಹತ್ಯಾಕಾಂಡ”….. ನಿರೀಕ್ಷಿಸಿ ನಿಮ್ಮ news.ashwasurya.in ನಲ್ಲಿ…



