Headlines

ಶಿವಮೊಗ್ಗ : ತೋಟದ ಮನೆಯಲ್ಲಿ ಭರ್ಜರಿ ಎಣ್ಣೆ ಪಾರ್ಟಿ,ಎಣ್ಣೆ ನಶೆಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ಸಾವು.ಇದು ಆಕಸ್ಮಿಕವೊ ಆಥವಾ…?

ಶಿವಮೊಗ್ಗ : ತೋಟದ ಮನೆಯಲ್ಲಿ ಭರ್ಜರಿ ಎಣ್ಣೆ ಪಾರ್ಟಿ,ಎಣ್ಣೆ ನಶೆಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ಸಾವು.ಇದು ಆಕಸ್ಮಿಕವೊ ಆಥವಾ…?

ಅಶ್ವಸೂರ್ಯ/ಶಿವಮೊಗ್ಗ: ತೋಟದ ಮನೆಯಲ್ಲಿ ಮದ್ಯದ ಪಾರ್ಟಿ ಫುಲ್ ಟೈಟ್ ಅದ ಯುವಕರು ತಮಗೆ ಅರಿವಿಲ್ಲದೆ ನಶೆಯ‌ ಮತ್ತಿನಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕುಂಸಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದಿದೆ. ಮೃತರನ್ನು ಗೌತಮ್ ನಾಯಕ್(22) ಹಾಗೂ ಸಂಜೀವ್(22) ಎಂದು ಗುರುತಿಸಲಾಗಿದೆ. ಸುಮಾರು 10 ಮಂದಿ ಸ್ನೇಹಿತರ ತಂಡ ಎಡವಾಲ ಗ್ರಾಮದಲ್ಲಿರುವ ತೋಟದ ಮನೆಗೆ ಪಾರ್ಟಿ ಮಾಡಲೆಂದು ತೆರಳಿದ್ದರು.

ಅಲ್ಲಿ ರಾತ್ರಿ ಭರ್ಜರಿಯಾಗಿ ಎಣ್ಣೆ ಪಾರ್ಟಿ ನೆಡೆದಿದೆ.
ತಡರಾತ್ರಿ ಮದ್ಯದ ನಶೆಯಲ್ಲಿ ಒಬ್ಬ ಯುವಕ ಕೃಷಿ ಹೊಂಡದ ಬಳಿ ಹೋಗಿ ನೀರಿಗೆ ಬಿದಿದ್ದಾನೆ. ಇದನ್ನು ಕಂಡು ಮತ್ತೊಬ್ಬ ಆತನನ್ನು ರಕ್ಷಿಸಲು ನೀರಿಗಿಳಿದು ಆತನೂ ಸಹ ಮುಳುಗಿ ಸಾವನ್ನಪ್ಪಿದ್ದಾನೆ. ಹೊಂಡದಲ್ಲಿ ಬಿದ್ದವರು ಏನಾದರು ಎಂದು ನೋಡುವಷ್ಟರಲ್ಲಿ ಇಬ್ಬರು ತಮ ಬದುಕಿಗೆ ತಮ್ಮ ಕೈಯಾರೆ ವಿಧಾಯ ಹೇಳಿದ್ದಾರೆ.
ಆತಂಕಗೊಂಡ ಇತರ ಸ್ನೇಹಿತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ದಾವಿಸಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.

ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆದಿದೆ.ಇದೇನು ಆಕಸ್ಮಿಕವೊ ಅಥವಾ ರಾತ್ರಿ ಏನಾದರೂ ಎಣ್ಣೆ ನಶೆಯಲ್ಲಿ ಯುವಕರ ನಡುವೆ ಗಲಾಟೆ ಆಗಿರಬಹುದಾ.?ಎನ್ನುವುದರ ಬಗ್ಗೆ ಪೋಲಿಸರ ತನಿಖೆಯಿಂದ ಬಯಲಾಗಬೇಕಿದೆ….

Leave a Reply

Your email address will not be published. Required fields are marked *

Optimized by Optimole
error: Content is protected !!