ಶಿವಮೊಗ್ಗ ಮತ್ತೆ ಜಳಪಿಸಿದ ಲಾಂಗು.! ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನ ಭೀಕರ ಹತ್ಯೆ.!
news.ashwasurya.in

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದಲ್ಲಿ ತಡ ರಾತ್ರಿ ಮತ್ತೆ ಲಾಂಗು ಮಚ್ಚುಗಳು ಜಳಪಿಸಿದೆ.! ಮಾರಕಾಸ್ತ್ರಗಳಿಂದ ಕೊಚ್ಚಿ ಜೈಲಿನಿಂದ ಹೊರಬಂದ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆಮಾಡಲಾಗಿದೆ.
ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾದ ಘಟನೆ ನಗರದ ಬೊಮ್ಮನಕಟ್ಟೆ ಕೆರೆ ಏರಿ ಬಳಿ ತಡರಾತ್ರಿ ಶನಿವಾರ ನಡೆದಿದೆ.

ಹತ್ಯೆಯಾದ ರೌಡಿಶೀಟರ್ ಅವಿನಾಶ್ (32) ಎಂದು ತಿಳಿದುಬಂದಿದ್ದು. ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿದ್ದ ಅವಿನಾಶ್, ಐದು ವರ್ಷಗಳ ಕಾಲ ಜೈಲಿನಲ್ಲಿದ್ದ. ಆನಂತರ ಮೇಲಿನ ಕೋರ್ಟ್‌ನಿಂದ ಜಾಮೀನು ಪಡೆದು ಹೊರಗಿದ್ದ ಎಂದು ತಿಳಿದು ಬಂದಿದೆ.
ಈ ನಡುವೆ ಪಾರ್ಟಿ ಮಾಡವ ನೆಪವೊಡ್ಡಿ ರೌಡಿಶೀಟರ್ ಅವಿನಾಶ್‌ನನ್ನು ಕರೆಯಿಸಿಕೊಂಡು ಬೊಮ್ಮನಕಟ್ಟೆಯಲ್ಲಿ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಾಹಿತಿ ತಿಳಿದ ಕೂಡಲೇ ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಂತಕರ ಬಂಧನಕ್ಕಾಗಿ ಭಲೇ ಬಿಸಲಾಗಿದೆ.

