ಅಹಮದಾಬಾದ್ ವಿಮಾನ ದುರಂತ : ಲಂಡನ್‌ನಲ್ಲಿ ಪತ್ನಿ ಸಾವು,ಪತ್ನಿಯ ಕೊನೆ ಆಸೆಯಂತೆ ಅಸ್ಥಿ ವಿಸರ್ಜನೆಗೆ ಭಾರತಕ್ಕೆ ಬಂದ ಪತಿಯೂ ವಿಮಾನ ದುರಂತಕ್ಕೆ ಬಲಿ.!ಇಬ್ಬರ ಸಾವಿನ ದಿನದ ಅಂತರ 7 ದಿನ.!
ASHWASURYA/SHIVAMOGGA

news.ashwasurya.in
ಅಶ್ವಸೂರ್ಯ/ಅಹಮದಾಬಾದ್:
ವಿಮಾನ ದುರಂತದಲ್ಲಿ ಅರ್ಜುನ್ ಸಾವು
ಅವರು ತಮ್ಮ ಪತ್ನಿಯನ್ನು ಕಳೆದುಕೊಂಡು ಏಳು ದಿನವಾಗಿತ್ತು.!ಪತ್ನಿಯ ಕೊನೆ ಆಸೆಯಂತೆ ಆಕೆಯ ಚಿತಾಭಸ್ಮವನ್ನು ವಿಸರ್ಜಿಸಲು ಭಾರತಕ್ಕೆ ಬಂದಿದ್ದರು. ಚಿತಾಭಸ್ಮವನ್ನು ವಿಸರ್ಜನೆಯ ಕಾರ್ಯ ಮುಗಿಸಿ ಲಂಡನ್‌ಗೆ ಹಿಂತಿರುಗಲು ಅವರು ಅಹಮದಾಬಾದ್ ನಿಂದ ವಿಮಾನದವೇರಿದ್ದರು. ಆದರೀಗ ವಿಮಾನ ದುರಂತದಲ್ಲಿ 241 ಜನರು ಮರಣ ಹೊಂದಿದ್ದರು ಇದರಲ್ಲಿ ಅರ್ಜುನ್ ಕೂಡ ಒಬ್ಬರಾಗಿದ್ದರೆ. ಹೀಗಿರುವಾಗ ಅವರ ಅಂತ್ಯಕ್ರಿಯೆಗಳನ್ನುಯಾರು ಮಾಡುತ್ತಾರೆ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಯಾಕೆಂದರೆ ಅವರ ಇಬ್ಬರೂ ಮಕ್ಕಳು ಚಿಕ್ಕವರು, ಮತ್ತು ಅವರು ಲಂಡನ್‌ನಲ್ಲಿದ್ದಾರೆ.
ಮಾಹಿತಿಯ ಪ್ರಕಾರ, ಅಮ್ರೇಲಿಯ ವಾಡಿಯಾ ನಿವಾಸಿ ಅರ್ಜುನ್‌ಭಾಯ್ ಮನುಭಾಯ್ ಪಟೋಲಿಯಾ ಅವರ ಪತ್ನಿ ಭಾರತಿಬೆನ್ ಏಳು ದಿನಗಳ ಹಿಂದೆ ಲಂಡನ್‌ನಲ್ಲಿ ನಿಧನರಾದರು. ತನ್ನ ಚಿತಾಭಸ್ಮವನ್ನು ಅಮ್ರೇಲಿ ಜಿಲ್ಲೆಯ ತನ್ನ ಪೂರ್ವಜರ ಗ್ರಾಮದ ಕೊಳ ಮತ್ತು ನದಿಯಲ್ಲಿ ವಿಸರ್ಜಿಸಬೇಕೆಂದು ಪತ್ನಿಯ ಆಸೆಯಾಗಿತ್ತು. ಹೀಗಾಗಿ ಅರ್ಜುನ್ ತನ್ನ ಪತ್ನಿಯ ಆಸೆಯಂತೆ ಅವರು ಚಿತಾಭಸ್ಮವನ್ನು ವಿಸರ್ಜಿಸಲು ಗುಜರಾತ್‌ಗೆ ಬಂದಿದ್ದರು.

ಇದರ ನಂತರ, ಅವರು ಅಮ್ರೇಲಿಯಲ್ಲಿರುವ ಗ್ರಾಮದಲ್ಲಿ ತಮ್ಮ ಸಂಬಂಧಿಕರೊಂದಿಗೆ ಚಿತಾಭಸ್ಮ ವಿಸರ್ಜನೆಗೆ ಸಂಬಂಧಿಸಿದ ಪೂಜಾ ಕಾರ್ಯವನ್ನು ಮುಗಿಸಿ ವಿಸರ್ಜನೆಯನ್ನು ಪೂರ್ಣಗೊಳಿಸಿದರು. ಬಳಿಕ ಅವರು ಏರ್ ಇಂಡಿಯಾ ವಿಮಾನದಲ್ಲಿ ಲಂಡನ್‌ಗೆ ಹಿಂತಿರುಗುತ್ತಿದ್ದರು. ಆದರೆ ವಿಧಿಯಾಟವೆ ಬೇರೆಯಾಗಿತ್ತು ದುರದೃಷ್ಟವಶಾತ್ ಹಿಂತಿರುಗಲು ಸಾಧ್ಯವಾಗಿಲ್ಲ, ಕಾರಣ ವಿಮಾನ ಅಪಘಾತಕ್ಕೀಡಾಗಿ ಭಸ್ಮಗೊಂಡರೆ ಅರ್ಜುನ್ ಕನಸುಗಳು ಛಿದ್ರಗೊಂಡಿದೆ.

ಪುಟ್ಟ ಹೆಣ್ಣುಮಕ್ಕಳು ಲಂಡನ್‌ನಲ್ಲಿ ತಮ್ಮ ತಂದೆಯ ಬರುವಿಕೆಗಾಗಿ ಕಾಯುತ್ತಿದ್ದಾರೆ.
ವಿಮಾನ ಅಪಘಾತದ ಸುದ್ದಿ ಕೇಳಿ ಅಮ್ರೇಲಿಯಲ್ಲಿರುವ ಅರ್ಜುನ್‌ಭಾಯ್ ಅವರ ಸಂಬಂಧಿಕರು ಮತ್ತು ಪರಿಚಯಸ್ಥರ ಮನೆಗಳಲ್ಲಿ ಶೋಕ ಮಡುಗಟ್ಟಿತ್ತು. ಅರ್ಜುನ್‌ಭಾಯ್‌ಗೆ ಇಬ್ಬರು ಮಕ್ಕಳಿದ್ದು, ಅವರು ಪ್ರಸ್ತುತ ಲಂಡನ್‌ನಲ್ಲಿದ್ದಾರೆ. ಮಕ್ಕಳನ್ನು ಲಂಡನ್‌ನಲ್ಲಿ ಬಿಟ್ಟು ಅವರು ಗುಜರಾತ್‌ಗೆ ಬಂದಿದ್ದರು. ಅವರಿಗೆ 8 ಮತ್ತು 4 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಹುಡುಗಿಯರು ತಮ್ಮ ತಾಯಿ ಮತ್ತು ತಂದೆಯನ್ನು ಕಳೆದುಕೊಂಡಿದ್ದಾರೆ. ಅರ್ಜುನ್‌ಭಾಯ್ ಅವರ ತಂದೆ ಈಗಾಗಲೇ ನಿಧನರಾಗಿದ್ದಾರೆ. ಅವರ ತಾಯಿ ಸೂರತ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.


