ನಮ್ಮೆಲ್ಲರ ನೆಚ್ಚಿನ ಅಕ್ಕ ಮಂಜುಳಾ ದೇವಿ ಅವರಿಗೆ ಆದೇವರು ಚಿರಶಾಂತಿಯನ್ನು ಕರುಣಿಸಲಿ
ಶಿವಮೊಗ್ಗ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾವಾದಿ, ಜನಪರ ಹೋರಾಟಗಾರ್ತಿಯಾದ ಮಂಜುಳದೇವಿ (69) ಇವತ್ತು ನಮ್ಮನ್ನು ಅಗಲಿದ್ದಾರೆ,1976 ರಲ್ಲಿ ವಕೀಲ ವೃತ್ತಿ ಆರಂಭಿಸಿದ ಇವರು ಖ್ಯಾತ ಮನೋ ತಜ್ಞ ವೈದ್ಯ ದಿವಂಗತ ಡಾ.ಅಶೋಕ್ ಪೈ ತಂದೆ ವಕೀಲರಾದ ಕಟಿಲ್ ಅಪ್ಪು ಫೈ ರವರ ಜೂನಿಯರ್ ಆಗಿ ವೃತ್ತಿ ಆರಂಬಿಸಿದ್ದರು, ಇವರು ಸಮಾಜಮುಖಿ ಚಿಂತನೆ ಹೊಂದಿದವರು, ಪುರುಷ ಪ್ರದಾನ ಸಮಾಜದಲ್ಲಿ ಒಬ್ಬಳು ಮಹಿಳೆ ಪುರುಷರಿಗೆ ಸರಿಸಮಾನವಾಗಿ ಬೆಳೆಯುವುದು ಸುಲುಭದ ಮಾತಲ್ಲಾ, ವೃತ್ತಿಯಲ್ಲು ಸಕ್ರಿಯವಾಗಿದ್ದ ಇವರು ಸಮಾಜಿಕ ಚಟುವಟಿಕೆಗಳಲ್ಲು ಸದಾ ಮುಂದೆ ಇರುತ್ತಿದ್ದರು,
ಜಿಲ್ಕಾ ಪಂಚಾಯತ್ ಮತ್ತು ಹಲವು ಬ್ಯಾಂಕ್ ಹಾಗೂ ವಿಮಾ ಕಂಪನಿಗಳಿಗೆ ಕೆಲವು ಕಾಲ ಕಾನೂನು ಸಲಹೆಗಾರರಾಗಿದ್ದರು, ಮಾಜಿ ಮುಖ್ಯ ಮಂತ್ರಿ ಜೆ.ಹೆಚ್ ಪಟೇಲ್ ರವರ ಸಂಬಂಧಿಯಾದ ಮಂಜುಳಾದೇವಿಯವರು ರಾಜಕೀಯವಾಗಿ ಪ್ರಭಾವ ಹೊಂದಿದವರಾದರು ತನಗಾಗಿ ಏನನ್ನು ಮಾಡಿಕೊಂಡವರಲ್ಲ ಅಸಾಯಕರು ಮತ್ತು ದುರ್ಬಲರ ಬಗ್ಗೆ ಕಾಳಜಿ ಹೊಂದಿದ್ದ ಮಂಜುಳಾದೇವಿಯವರು ಕೊಡುಗೈ ದಾನಿ,
ಗಾಂದಿವಾದಿ ಮತ್ತು ವಿನೋಭಾಭಾವೆ ಸಂಪರ್ಕದಲ್ಲಿದ್ದ ಸ್ವತಂತ್ರ ಹೋರಾಟಗಾರ್ತಿ ಪೊನ್ನಮಾಳರವರ ಅಪ್ಪಟ ಶಿಷ್ಯೆಯಾಗಿದ್ದ ಮಂಜುಳ ಮೇಡಂ, ತುಂಗಾಮೂಲ ಸೇರಿದಂತೆ ಹಲವು ಪರಿಸರ ಹೋರಾಟಗಳಲ್ಲಿ ಮತ್ತು ಕೋಮು ಸೌರ್ಹಾದದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು, ಶಾಲಾ ಗೇಣಿ ಜಮೀನು ಭೂ ಹೋರಾಟದಲ್ಲಿಯು ಮುಂಚೂಣಿಯಲ್ಲಿದ್ದವರು
ದೇಶದ ಇತಿಹಾಸದಲ್ಲಿಯೇ ಹತ್ತು ವರ್ಷಕ್ಕು ಹೆಚ್ವುಕಾಲ ಸುದೀರ್ಘವಾಗಿ ನಡೆದ ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ನಮ್ಮಗಳೊಂದಿಗೆ ಸದಾ ಗಟ್ಟಿಯಾಗಿ ನಿಂತವರು , ಆ ಹೋರಾಟದಲ್ಲಿ ಅವರದೊಂದು ಟಾಟಾ ಕಂಪನಿಯ ಉದ್ದನೆಯ ಕಾರು ನಮಗೆ ಏಕೈಕ ವಾಹನ, ಅದರಲ್ಲಿ ಹೋರಾಟಕ್ಕೆ ಬರುವ ಜನರೊಂದಿಗೆ ಹೋರಾಟದ ಸಾಮಾಗ್ರಿಗಳನ್ನು ತುಂಬಿಕೊಂಡು ಹೋಗುತ್ತಿದ್ದೇವು, ಆಂದ್ರ ಮತ್ತು ಕರ್ನಾಟಕ ಎರಡು ರಾಜ್ಯದ ಜೀವನದಿಗಳಾದ ತುಂಗಾ ಮತ್ತು ಭದ್ರಾನದಿ ಉಳಿಸುವ ಹೋರಾಟದ ಮುಖ್ಯ ರುವಾರಿ ಕಲ್ಕುಳಿ ವಿಠಲ್ ಹೆಗ್ಡೆ ಮತ್ತು ಜನಪರ ಸಂಗಟನೆಗಳಾದರೆ ನಂತರ ಈ ಹೋರಾಟಕ್ಕೆ ಕಡಿದಾಳು ಶಾಮಣ್ಣ, ಸುಂದಾರಲಾಲ್ ಬಹುಗುಣ, ಯು.ಆರ್.ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ ಈ ರೀತಿ ಹಲವು ಪ್ರಸಿದ್ದರು ಪಾಲ್ಗೊಂಡರು, ಈ ಹೋರಾಟದಲ್ಲಿ ಮೊದಲಿಂದ ಕೊನೆಯ ವರೆಗೂ ಜೊತೆಗಿದ್ದು ಕಾರ್ಯಕ್ರಮಗಳಿಗೆ ಹಣ ಸಂಗ್ರಹದಿಂದ ಹಿಡಿದು ಎಲ್ಲಾ ಕಾರ್ಯಕ್ಕು ಜೊತೆಗೆ ಬರುತ್ತಿದ್ದ ಮಂಜುಳಾದೇವಿಯವರು ನಮಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಕೊಡಿಸುತ್ತಿದ್ದವರು, ಮಹಿಳಾ ಜಾಗೃತಿಯ ಹೆಣ್ಣುಮಕ್ಕಳಿಗೆ ಮಂಜುಳಾದೇವಿ ಆಶ್ರಯದಾತೆಯಂತೆ ನಡೆದುಕೊಂಡವರು , ಸದಾ ಮಹಿಳೆಯರು ಮಕ್ಕಳ ಬಗ್ಗೆ ಅಪಾರ ಕಾಳಜಿಹೊಂದಿದ್ದ ಮಂಜುಳಾದೇವಿಯವರು ನಿಸ್ವಾರ್ಥ ಸೇವೆಯನ್ನು ಕೊನೆಯವರೆಗೂ ಮಾಡಿಕೊಂಡು ಬಂದರು, ಹೊರಾಟಗಾರ ಈಸೂರು ಲೋಕೇಶ್ ರವರಿಗೆ ಜೂನಿಯರ್ ಆಗಿ ಸೇರಿಸಿ ಕೊಂಡು ಕೊಟ್ ಸಹ ಹೊಲೆಸಿಕೊಟ್ಟು ಎನ್ ರೊಲ್ ಮಾಡಿಸಲು ಹಣವನ್ನು ಸಹ ನೀಡಿದ್ದರು.
ಹೋರಾಟದ ಕಾರ್ಯಕ್ರಮಗಳ ದೇಣಿಗೆ ಸಂಗ್ರಹ ಮಾಡಲು ನಮಗೆ ಮಂಜುಳಾದೇವಿಯವರೆ ಲೀಡರ್ ಅವರ ಮನೆಯಲ್ಲಿ ಅವರಿಗೆ ಕಲೆಕ್ಷನ್ ಕಾಳಮ್ಮ ಎಂದು ತಮಾಷೆ ಮಾಡುತ್ತಿದ್ದರು.
ನೂರಾರು ಹೋರಾಟಗಳಲ್ಲಿ ನಮ್ಮೊಂದಿಗೆ ಭಾಗವಹಿಸಿದ್ದ ಮಂಜುಳಾದೇವಿಯವರು ಎಂದಿಗೂ ಯಾರ ಮೇಲು ಕೋಪ ಗೊಂಡವರಲ್ಲಾ, ಜೊತೆಯಲ್ಲಿದವರಿಗೆ ತಾಯಿಪ್ರೀತಿ ನೀಡಿದವರು, ಆರ್ಥಿಕವಾಗಿ ಅನುಕೂಲವಾಗಿದ್ದ ಇವರು ಹೋರಾಟಕ್ಕಾಗಿ ತನ್ನ ಕೈಯಿಂದಲೇ ಹಣ ಖರ್ಚುಮಾಡಿಕೊಂಡವರು, ಕಷ್ಟ ಎಂದವರಿಗೆ ತನ್ನ ಒಡವೆಯನ್ನೆ ಮಾರಿ ಹಣ ನೀಡಿದ ಮಹಾ ತಾಯಿ.
ರಾಜಕಾರಣದಲ್ಲಿಯು ತೊಡಗಿಸಿಕೊಂಡ ಇವರು ಜನತಾಪಕ್ಷ ಮತ್ತು ಜನತಾದಳ, ಸಂಯುಕ್ತ ಜನತಾದಳದಲ್ಲಿ ಕೆಲಸ ಮಾಡಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯಾರ್ಥಿಯು ಆದವರು. ಕಳೆದೆರಡು ವರ್ಷದಿಂದ ಕಾಡಿದ ಕ್ಯಾನ್ಸರ್ ರೋಗ ಇವರನ್ನು ಮತ್ತೆ ಚೇತರಿಸಿಕೊಳ್ಳಲು ಬಿಡಲೆ ಇಲ್ಲಾ. ಸದಾ ಸಮಾಜಮುಖಿಯಾಗಿ, ಪ್ರಮಾಣಿಕರಾಗಿ ಬದುಕ್ಕಿದ್ದ ಮಂಜುಳ ದೇವಿ ಮೇಡಂ ಹೆಸರು ಸದಾ ಚಿರಾಯವಾಗಲಿ.
ಕೆ.ಪಿ.ಶ್ರೀಪಾಲ್.ವಕೀಲರು