ಹಾಸನ: ಅನೈತಿಕ ಸಂಬಂಧ: ಖತರ್ನಾಕ್ ಲೇಡಿ ಖತರ್ನಾಕ್ ಪ್ಲಾನ್ ಮಾಡಿದ್ದೇನು ಗೊತ್ತಾ?

ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೇಲೂರು : ತನ್ನ ಅಕ್ರಮ ಸಂಬಂಧಕ್ಕೆ ಗಂಡ, ಮಕ್ಕಳು ಅಡ್ಡಿಯಾಗ್ತಾರೆ ಎಂದು ಭಾವಿಸಿ ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡ ಮತ್ತು ಹೆತ್ತ ಮಕ್ಕಳನ್ನೇ ಕೊಲ್ಲಲು ಈಕೆ ಖತರ್ನಾಕ್ ಪ್ಲಾನ್ಮಾಡಿದ್ಲು
ಎನದು ಖತರ್ನಾಕ್ ಲೇಡಿಯ ಪ್ಲಾನ್.? …
ಇತ್ತೀಚಿನ ದಿನಗಳಲ್ಲಿ ದಾಯಾದಿಗಳ ಕಲಹ, ಪತಿ-ಪತಿ ಕಲಹ, ಹೊಡೆದಾಟ,ರೌಡಿಗಳ ಬಡಿದಾಟ, ವಿಚ್ಚೇದನ, ಕೊಲೆ ಹೀಗೆ ಹತ್ತು ಹಲವು ಪ್ರಕರಣಗಳನ್ನು ಕಣ್ಣೆದುರೆ ನೋಡುತ್ತಿದ್ದೇವೆ, ಇಲ್ಲೊಬ್ಬಳು ಖತರ್ನಾಕ್ ಲೇಡಿ ತನ್ನ ಅಕ್ರಮ ಸಂಬಂಧಕ್ಕೆ ತಾಳಿಕಟ್ಟಿದ ಗಂಡ ತಾನು ಹೆತ್ತ ಮಕ್ಕಳು ಮತ್ತು ಕುಟುಂಬದವರು ಅಡ್ಡಿ ಮಾಡುತ್ತಾರೆ ಎಂದು ತನ್ನ ಅಕ್ರಮ ಸಂಬಂಧದ ಕಾಮದ ತೇವವನ್ನು ನಿರ್ಭಯವಾಗಿ ತೀರಿಸಿಕೊಳ್ಳಲು ಎಲ್ಲರನ್ನು ಸಾಯಿಸಲು ಖತರ್ನಾಕ್ ಪ್ಲಾನ್ ಮಾಡಿದ್ದಾಳೆ.!
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗ್ತಾರೆ ಎಂದು ಇಲ್ಲೊಬ್ಬ ಖತರ್ನಾಕ್ ಲೇಡಿ ತಾಳಿ ಕಟ್ಟಿದ ಗಂಡ, ಮತ್ತು ಹೆತ್ತ ಮಕ್ಕಳನ್ನೇ ಕೊಲ್ಲಲು ಮುಂದಾಗಿದ್ದಾಳೆ. ತಾಳಿ ಕಟ್ಟಿದ್ದ ಗಂಡ, ಹೆತ್ತ ಮಕ್ಕಳು ಮತ್ತು ಅತ್ತೆ, ಮಾವನಿಗೆ ಆಹಾರದಲ್ಲಿ ದಿನ ನಿತ್ಯ ವಿಷದ ಮಾತ್ರೆ ಹಾಕಿ ಅವರನ್ನೆಲ್ಲ ಹಂತ ಹಂತವಾಗಿ ಕೊಲ್ಲಲು ಮುಂದಾಗಿದ್ದಾಳೆ. ದಿನನಿತ್ಯ ವಿಷಮಿಶ್ರಿತ ಮಾತ್ರೆಗಳನ್ನು ಕಾಫಿ,ತಿಂಡಿ ಮತ್ತು ಊಟ ತಿಂಡಿ ಪದಾರ್ಥಗಳಲ್ಲಿ ಹಾಕಿ ಮನೆಯವರೆಲ್ಲರೂ ಅನಾರೋಗ್ಯಕಿಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಮಿಶ್ರಿತ ಆಹಾರದಿಂದ ಪತಿ, ಮಕ್ಕಳು, ಅತ್ತೆ, ಮಾವ ಎಲ್ಲರೂ ಅನಾರೋಗ್ಯಕ್ಕೊಳಗಾಗಿದ್ದರು. ನಂತರ ಆಸ್ಪತ್ರೆಗೆ ಹೋದಾಗ ಆರೋಗ್ಯದಲ್ಲಿ ತೊಂದರೆ, ಹೊಟ್ಟೆನೋವಿಗೆ ಕಾರಣ ವಿಷಾಹಾರ ಸೇವನೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಪತ್ನಿಯೆ ಊಟಕ್ಕೆ ವಿಷ ಹಾಕಿರುವ ಬಗ್ಗೆ ಪತಿ ಗಜೇಂದ್ರ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.

ಖತರ್ನಾಕ್ ಪತ್ನಿ ಚೈತ್ರಾ ವಿರುದ್ಧ ದೂರು ಕೊಟ್ಟ ಪತಿ.!
ಹಾಸನದ ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು 11 ವರ್ಷದ ಹಿಂದೆಯೇ ಚೈತ್ರಾ – ಗಜೇಂದ್ರ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದೀಗ ವಿಷಾಹಾರ ಸೇವಿಸಿ ಅನಾರೋಗ್ಯಕ್ಕೀಡಾದಾಗ ಪತ್ನಿ ಚೈತ್ರಾ ವಿರುದ್ಧ ಪತಿ ಗಜೇಂದ್ರನೇ ಪೊಲೀಸರಿಗೆ ದೂರು ನೀಡಿದ್ದಾ.3 ವರ್ಷಗಳ ಹಿಂದೆ ಪುನೀತ್ ಎನ್ನುಔನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ.!
ಗಂಡ ಗಜೇಂದ್ರನ ಕಣ್ತಪ್ಪಿಸಿ ಈ ಹಿಂದೆಯೇ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳಂತೆ. 3 ವರ್ಷಗಳ ಹಿಂದೆಯೇ ಕೆರಳೂರಿನ ಪುನೀತ್ ಜೊತೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ನಂತರ ಅನೈತಿಕ ಸಂಬಂಧ ಬಯಲಾಗಿ ರಾಜೀ ಸಂಧಾನ ಮಾಡಿ ಹಿರಿಯರು ಪುನೀತ್ ನಿಂದ ಆಕೆಯು ದೂರ ಇರುವಂತೆ ಹೇಳಿದ್ದರು.
ಅ ನಂತರ ಸಿದ್ಧವಾಗಿದ್ದೆ ಮನೆಯವರನ್ನು ಕೊಲ್ಲುವ ಪ್ಲಾನ್.!
ಇಷ್ಟಾದರೂ ಬುದ್ದಿ ಬಾರದ ಪತ್ನಿ ಚೈತ್ರಾ ಒಂದು ವರ್ಷದಿಂದ ಅದೇ ಗ್ರಾಮದ ಶಿವು ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಬಾರಿ ಅನೈತಿಕ ಸಂಬಂಧ ಬಯಲಾಗದಂತೆ ಚೈತ್ರಾ ಎಚ್ಚರ ವಹಿಸಿದ್ದಳು, ನಂತರ ಇದಕ್ಕೆ ಮನೆಯವರು ಅಡ್ಡಿಯಾಗ್ತಾರೆ ಎಂದು ಅವರನ್ನೇ ಕೊಲ್ಲುವ ಪ್ಲಾನ್ ಮಾಡಿದ್ದಾಳೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಲಿದ್ದ ಪತಿ ಗಜೇಂದ್ರ, ಇಬ್ಬರು 8 ಮತ್ತು 10 ವರ್ಷದ ಮಕ್ಕಳು, ಅತ್ತೆ ಮಾವನ ಸಾಯಿಸಲು ಪ್ಲಾನ್ ಮಾಡಿದ್ದಾಳೆ. ಊಟ, ಕಾಫಿ, ಯಲ್ಲಿ ವಿಷದ ಮಾತ್ರೆ ಹಾಕಿ ಎಲ್ಲರನ್ನೂ ಒಂದೇ ಬಾರಿಗೆ ಸಾಯಿಸಲು ಈ ಖತರ್ನಾಕ್ ಲೇಡಿ ಪ್ಲಾನ್ ಮಾಡಿದ್ದಾಳಂತೆ.!
ಮನೆಯವರೆಲ್ಲ ಆಸ್ಪತ್ರೆಗೆ ದಾಖಲಾದಾಗ ಪತ್ನಿಯ ಖತರ್ನಾಕ್ ಪ್ಲಾನ್ ಬಯಲಾಯ್ತು.!
ಪತ್ನಿಯೇ ವಿಷ ನೀಡಿದ್ದಾಳೆಂದು ಶಂಕಿಸಿದ ಪತಿ ಆಕೆಯ ಜೋತೆಗೆ ಜಗಳವಾಡಿದ್ದಾನೆ ಆಗ ಅವಳು ಮನೆಬಿಟ್ಟು ಹೋಗಲು ತಯಾರಾಗುತ್ತಾಳೆ.ಆಗ ಆಕೆಯ ಬಳಿ ಇದ್ದ ಬ್ಯಾಗ್ ಚಕ್ ಮಾಡಿದಾಗ ಕೆಲವು ಮಾತ್ರೆಗಳು ಮತ್ತು ಆಗೆ ಗೆಳೆಯ ಕೊಟ್ಟ ಫೋನ್ ಸಿಕ್ಕಿದೆ ತಡ ಮಾಡದೆ ಗಂಡ ಪತ್ನಿಯ ವಿರುದ್ಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಕೊಡಲೆ ಪೊಲೀಸರು ಪತಿ ಗಜೇಂದ್ರನ ದೂರಿನನ್ವಯ ಆಕೆಯನ್ನು ವಷಕ್ಕೆ ಪಡೆದು ತನಿಖೆ ನಡೆಸಿದ್ದು, ಪೊಲೀಸರ ತನಿಖೆಯಲ್ಲಿ ಪತ್ನಿ ಚೈತ್ರಾಳೆ ಊಟದಲ್ಲಿ ವಿಷದ ಮಾತ್ರೆ ಹಾಕಿರುವುದು ಬಹಿರಂಗವಾಗಿದೆ. ಅನೈತಿಕ ಸಂಬಂಧ ಹೊಂದಿದ್ದ ಶಿವು ಜೊತೆ ಸೇರಿ ಪತಿ ಹಾಗೂ ಕುಟುಂಬ ಮುಗಿಸಲು ಪ್ಲಾನ್ ಮಾಡಿದ್ದು ಬಹಿರಂಗವಾಗಿದೆ.
ಪತ್ನಿ ಚೈತ್ರಾ ಮತ್ತು ಅನೈತಿಕ ಸಂಬಂಧ ಹೊಂದಿದ್ದ ಶಿವು ಬಂಧಿಸಲು ಮುಂದಾಗಿದ್ದಾರೆ ಆಕೆಯ ಜೋತೆಗೆ ಅನೈತಿಕ ಸಂಬಂದ ಹೊಂದಿದ್ದ ಶಿವು ಎಸ್ಕೇಪ್ ಆಗಿದ್ದಾನೆ. ಅನೈತಿಕ ಸಂಬಂಧ ಉಳಿಸಿಕೊಳ್ಳಲು ಗಂಡ, ಮಕ್ಕಳು, ಅತ್ತೆ ಮಾವನ ಸಾಯಿಸಲು ಪತ್ನಿ ರೂಪಿಸಿದ್ದ ಭಯಾನಕ ಸಂಚು ಬಯಲಾಗಿ ಚೈತ್ರಾ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ


