ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗ ಶಿವಮೊಗ್ಗ ಕ್ಷೇತ್ರದ ಜನಪ್ರಿಯ ಸಂಸದ ಬಿ ವೈ ರಾಘವೇಂದ್ರ ಅವರ ಹಿರಿಯ ಸುಪುತ್ರ ಶ್ರೀ ಸುಭಾಷ್ ಮತ್ತು ಶ್ರೀಮತಿ ಶ್ರಾವಣ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡು ನವ ವಧುವರರಿಗೆ ಶುಭ ಹಾರೈಸಿದರು.





ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ವೈ ಮೊಮ್ಮಗನ ಆರತಕ್ಷತೆಯಲ್ಲಿ ಸಿಎಂ ಮತ್ತು ಡಿಸಿಎಂ,ಕೇಂದ್ರದ ಮಂತ್ರಿಗಳು ಆನೇಕ ಗಣ್ಯಾತಿಗಣ್ಯರು ನಟ ರಾಕಿಂಗ್ ಸ್ಟಾರ್ ಯಶ್ ಭಾಗಿ

ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮೊಮ್ಮಗ,ಶಿವಮೊಗ್ಗ ಕ್ಷೇತ್ರದ ಜನಪ್ರಿಯ ಸಂಸದರಾದ ಬಿವೈ ರಾಘವೇಂದ್ರ (BY Raghavendra)ಅವರ ಪುತ್ರ ಸುಭಾಷ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಶನಿವಾರ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೋತೆಗೆ ರಾಜ್ಯಸರ್ಕಾರದ ಆನೇಕ ಸಚಿವರು ಶಾಸಕರು,




ಮಾಜಿ ಪ್ರಧಾನಿ ಹಚ್ ಡಿ ದೇವೆಗೌಡ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಜೆ ಪಿ ನಡ್ಡಾ, ಪ್ರಹಲ್ಲಾದ್ ಜೋಷಿ,ಹೆಚ್ ಡಿ ಕುಮಾರಸ್ವಾಮಿ, ವಿ.ಸೋಮಣ್ಣ, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.ಇನ್ನೂ ಚಿತ್ರ ನಟರಾದ ರಾಕಿಂಗ್ ಸ್ಟಾರ್ ಯಶ್, ಡಾಲಿ ಧನಂಜಯ್,ಹಿರಿಯ ನಟ ಅನಂತ್ ನಾಗ್,ಸುಂದರ್ ರಾಜ್,ಪ್ರಮೀಳಾ ಜೋಷಾಯ್,ರಮೇಶ್ ಅರವಿಂದ್, ಇನ್ನಿತರರು ಆಗಮಿಸಿದ್ದರು.





ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಭಾಷ್ ಹಾಗೂ ಶ್ರಾವಣಾ ಆರತಕ್ಷತೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಸಂಭ್ರಮದಲ್ಲಿ ಜಮೀರ್ ಅಹ್ಮದ್, ಬೈರತಿ ಸುರೇಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿವೈ ರಾಘವೇಂದ್ರ ಶಾಲು ಹೊದಿಸಿ ಗೌರವಿಸಿದರು. ಶಾಲಿನಿ ರಜನೀಶ್ ಅವರಿಗೆ ರಾಘವೇಂದ್ರ ಪತ್ನಿ ಶಾಲು ಹೊದಿಸಿ ಸ್ವಾಗತಿಸಿದರು.






ಮಾರ್ಚ್ 24ರಂದು ಕಲಬುರಗಿಯಲ್ಲಿ ಬಿಎಸ್ವೈ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಬಿವೈ ರಾಘವೇಂದ್ರ ಪುತ್ರ ಸುಭಾಷ್ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ-ದೀಪಾಲಿ ದಂಪತಿಯ ಪುತ್ರಿ ಶ್ರಾವಣ ಅವರನ್ನು ಭಾನುವಾರ ವರಿಸಲಿದ್ದಾರೆ.

