ಉಡುಪಿ ಓಸಿ ಬಿಡ್ಡರ್ ಬುಕ್ಕಿ ಲಿಯೋ ಕರ್ನೆಲಿಯೊ ಜೊತೆಗೆ ಏಜೆಂಟ್ ವಿಠಲ್ ದೇವಾಡಿಗ ಅರೇಸ್ಟ್ !
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಉಡುಪಿ: ಜಿಲ್ಲೆಯ ಕುರ್ಕಾಲು ಗ್ರಾಮದ ಶಂಕರಪುರದ ಅಶ್ವತಕಟ್ಟೆ ಬಸ್ ನಿಲ್ದಾಣದ ಬಳಿ ಮಟ್ಕಾ ಎಜೇಂಟ್ ಚಿಟಿ ಬರೆಯುತ್ತಿದ್ದ ವಿಠಲ ದೇವಾಡಿಗ ಎಂಬಾತನನ್ನು ಪೊಲೀಸರು ಬಂಧಿಸಿ ಆತನ ಹತ್ತಿರವಿದ್ದ ಮಟ್ಕಾ ಸಂಖ್ಯೆ ಬರೆದಿರುವ ಚೀಟಿ, ನಗದು, ಪರಿಕರ ಜಪ್ತಿ ಮಾಡಿಕೊಂಡು ವಿಚಾರಣೆಗೆ ಒಳಪಡಿಸಿದ್ದರು.
ಈತ ಮಟ್ಕಾ ಚೀಟಿ ನೀಡುವ ಬಗ್ಗೆ ಪೊಲೀಸರ ವಿಚಾರಣೆಗೆ ಒಳಪಡಿಸಿದಾಗ ಮಟ್ಕಾ ಬುಕ್ಕಿ ಉಡುಪಿಯ ಲಿಯೋ ಕರ್ನೆಲಿಯೋ ತಿಳಿಸಿದಂತೆ ತಾನು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಯನ್ನು ಕಾನೂನು ಬಾಹಿರವಾಗಿ ಬರೆಯುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿಠಲ ದೇವಾಡಿಗ ಮತ್ತು ಲಿಯೋ ಕರ್ನೇಲಿಯೋ ಇವರುಗಳು ಸಂಘಟಿತರಾಗಿ ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡಿ ಅವರಿಂದ ಹಣ ಸಂಗ್ರಹ ಮಾಡುತ್ತಿದ್ದುದರ ವಿರುದ್ದ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲ ಆರೋಪಿ ವಿಠಲ ದೇವಾಡಿಗ ವಿರುದ್ಧ ಈಗಾಗಲೇ 12 ಪ್ರಕರಣಗಳು ದಾಖಲಾಗಿದೆ. ಎರಡನೇ ಆರೋಪಿಯಾದ ಲಿಯೋ ಕರ್ನೇಲಿಯೋ ವಿರುದ್ಧ ಈಗಾಗಲೇ ಸುಮಾರು 34 ಪ್ರಕರಣಗಳು ದಾಖಲಾಗಿದೆ.
ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ ಉಡುಪಿ ಜಿಲ್ಲೆಯಾದ್ಯಂತ ಓಸಿ ದಂಧೆಯಲ್ಲಿ ತೊಡಗಿದ್ದ ಓಸಿ ಬಿಡ್ಡೀರ್‌ಗಳು ಮತ್ತು ಏಜೆಂಟರ್‌ಗಳು
ಹೌದು ಮಟ್ಕಾ ಮಾರಿ ಉಡುಪಿ ಜಿಲ್ಲೆಯಾದ್ಯಂತ ಬಡವರ ಕೂಲಿ ಕಾರ್ಮಿಕರಬದುಕನ್ನು ಬರಡು ಮಾಡಿದೆ. ಅ ಮಟ್ಟಕ್ಕೆ ಮಟ್ಕಾ ದಂಧೆ ಕರಾವಳಿ ಉಡುಪಿ ಜಿಲ್ಲೆಯನ್ನು ನುಂಗಿ ನೆಣೆಯುತ್ತಿದೆ.ದಿನದಿಂದ ದಿನಕ್ಕೆ ಮಟ್ಕಾ ದಂಧೆಯು ಕರಾವಳಿಯ ಉದ್ದಗಲಕ್ಕೂ ಹರಡಿಕೊಂಡಿದ್ದು ಮಟ್ಕಾ ದಂಧೆಯನ್ನು ಸಂಪೂರ್ಣ ನಿರ್ಣಾಮ ಮಾಡುವತ್ತ ಉಡುಪಿ ಜಿಲ್ಲಾ ಪೊಲೀಸರು ದೃಢವಾದ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಹತ್ತಾರು ಮಂದಿ ಮಟ್ಕಾ ಏಜೆಂಟರ ಜೋತೆಗೆ ಮಟ್ಕಾ ಬುಕ್ಕಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

