
ಶಿವಮೊಗ್ಗ : ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು..!? ಆತ್ಮಹತ್ಯೆಗೆ ಕಾರಣ.?
ASHWASURYA/SHIVAMOGGA

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನ್ನುವಂತೆ ಕಂಡುಬಂದಿದ್ದು ಸಾವಿನ ಸುತ್ತ ಸಾಕಷ್ಟು ಶಂಕೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.!

ನೇಣಿನ ಕುಣಿಕೆಗೆ ಕೊರಳೊಡ್ಡಿದ ಯುವತಿ ವಿಷ್ಣುಪ್ರಿಯಾ (22) ಮೃತಪಟ್ಟ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ವಿಷ್ಣುಪ್ರಿಯಾ ಶಿವಮೊಗ್ಗ ನಗರ ಸಮೀಪದ ಪುರಲೆಯ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ವಿದ್ಯಾರ್ಥಿನಿ ವಿಷ್ಣುಪ್ರಿಯಾ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ ಇಂಟರ್ ಶಿಪ್ ಮುಗಿಸುವ ಕೊನೆಯ ಹಂತಕ್ಕೆ ಕೇವಲ ಹತ್ತು ದಿನ ಬಾಕಿ ಇರುವಂತೆಯೆ ತನ್ನ ಬದುಕಿಗೆ ತನ್ನ ಕೈಯಾರೆ ಉಸಿರು ನಿಲ್ಲಿಸಿಕೊಂಡಿದ್ದಾಳೆ.
ಮೃತ ವಿದ್ಯಾರ್ಥಿನಿ ಪೋಷಕರು ಮೂಲತಃ ಬಹರೈನ್ ನವರಾಗಿದ್ದು ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲಸಿದ್ದಾರೆ.

ಒಂದು ಮೂಲದ ಪ್ರಕಾರ ವಿಷ್ಣುಪ್ರಿಯಾ ತನ್ನ ಪ್ರೇಮದ ವಿಚಾರದಲ್ಲಿ ಪೋಷಕರ ಜತೆ ಜಗಳ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದು ಈ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ವಿಷ್ಣುಪ್ರಿಯಾಳ ತಂದೆ ಮತ್ತು ತಾಯಿ ಬಹರೈನ್ ಮೂಲದವರಾಗಿದ್ದು ತಮ್ಮ ಮಗಳ ಸಾವಿನ ಸುದ್ದಿ ಕೇಳಿ ಶಿವಮೊಗ್ಗದತ್ತ ಹೊರಟಿದ್ದಾರೆಂದು ತಿಳಿದುಬಂದಿದ್ದು.ವಿಷ್ಣುಪ್ರಿಯಾ ಆಂಧ್ರ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳೆಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಇನ್ನೂ ಶಿವಮೊಗ್ಗ ಗ್ರಾಮಾಂತರ ಪೊಲೀಸರ ತನಿಖೆಯಿಂದಷ್ಟೆ ಸಾವಿನ ಅಸಲಿ ಸತ್ಯ ಏನೆಂಬುದು ಬಯಲಾಗಬೇಕಿದೆ.
ಇನ್ನೇನು ತನ್ನ ವಿಧ್ಯಾರ್ಥಿ ಜೀವನದ ಗುರಿ ಮುಟ್ಟುವ ಹಂತದಲ್ಲಿ ವೈದ್ಯಕೀಯ ವಿಧ್ಯಾರ್ಥಿನಿ ತನ್ನ ಉಜ್ವಲ ಭವಿಷ್ಯಕ್ಕಾಗಿ ಬೆನ್ನಿಗೇ ನಿಂತಿದ್ದ ಪೋಷಕರನ್ನೆ ಮರೆತು ಆತ್ಮಹತ್ಯೆಗೆ ಶರಣಾಗಿರುವುದು ದುರಂತವೆ ಹೌದು.!


