ಹಾಸನ: ಬೆಳಗ್ಗೆ ತಾಳಿ ಕಟ್ಟುವಾಗ ಲವ್ವರ್ ಎಂಟ್ರಿ.! ಮುರಿದುಬಿದ್ದ ಮದುವೆ.! ಸಂಜೆ ದೇವಸ್ಥಾನದಲ್ಲಿ ಲವ್ವರ್ ಜೋತೆ ಮದುವೆಯಾದ ಹುಡುಗಿ.! ಅಂತು ಪ್ರೀತಿಸಿದವನ ಕೈ ಹಿಡಿದ ಹುಡುಗಿ
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಹಾಸನ: ಬೆಳಗ್ಗೆ ಪೋಷಕರ ಇಚ್ಛೆಯಂತೆ ನಿಗಧಿಯಾಗಿದ್ದ ಮದುವೆ ತಾಳಿ ಕಟ್ಟುವ ಮುಹೊರ್ತಕ್ಕೆ ಸರಿಯಾಗಿ ವಧುವಿನ ಲವ್ವರ್ ಎಂಟ್ರಿ ಕೊಟ್ಟ ಕಾರಣಕ್ಕೆ ಮದುವೆ ಮುರುದು ಬಿದ್ದಿತ್ತು.ಹಸೆಮಣೆಯಿಂದ ಎದ್ದು ಮಂಟಪದಿಂದ ಹೊರಟು ಹೋಗಿದ್ದ ವಧು ಸಂಜೆ ಹೊತ್ತಿಗೆ ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದಾಳೆ. ನಾಟಕೀಯ ತಿರುವು ಪಡೆದ ಈ ಘಟನೆಯಲ್ಲಿ ಯುವತಿ ಕೊನೆಗೂ ತಾನು ಇಷ್ಟಪಟ್ಟ ಹುಡುಗನನ್ನೇ ವಿವಾಹವಾಗಿದ್ದಾಳೆ.

ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಗುರು ಹಿರಿಯರ ನಿಶ್ಚಯದಂತೆ ನಿಗಧಿಯಾಗಿದ್ದ ಮದುವೆಯೊಂದು ತಾಳಿ ಕಟ್ಟುವ ಮುಹೂರ್ತಕ್ಕೆ ಸರಿಯಾಗಿ ನಿಂತುಹೋಗಿತ್ತು.! ತಾಳಿ ಕಟ್ಟೋ ವೇಳೆ ಲವ್ವರ್ ಆಗಮನದ ಕಾರಣಕ್ಕೆ ವಧು ಮದುವೆ ನಿರಾಕರಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಯುವತಿ ಕೊನೆಗೂ ತಾನು ಇಷ್ಟಪಟ್ಟ ಯುವಕನನ್ನೇ ಮದುವೆಯಾಗಿದ್ದಾಳೆ. ಪ್ರಿಯಕರ ಹಾಸನದ ಬಸವನಹಳ್ಳಿ ಗ್ರಾಮದ ರಘು ಎಂಬುವವನ ಜೊತೆ ಭೂವನಹಳ್ಳಿ ಗ್ರಾಮದ ವಧು ಪಲ್ಲವಿ ವಿವಾಹ ಮಾಡಿಕೊಂಡಿದ್ದಾಳೆ. ಹಾಸನ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಿರುವ ಗಣಪತಿ ದೇವಾಲಯದಲ್ಲಿ ಇಬ್ಬರಿಬ್ಬರ ವಿವಾಹ ನಡೆದಿದೆ.

ಮದುವೆ ಅರ್ಧದಲ್ಲೇ ನಿಂತುಹೋಗಿದ್ದ ಕಲ್ಯಾಣ ಮಂಟಪದ ಆವರಣದಲ್ಲೇ ಈ ದೇವಾಲಯ ಇದ್ದು, ಗಣಪತಿ ದೇವಾಲಯದ ಆವರಣದಲ್ಲಿ ಸರಳ ವಿವಾಹ ನಡೆದಿದೆ. ಕೆಲ ಸ್ನೇಹಿತರು ಸಂಧಾನಕಾರರ ಮಧ್ಯಸ್ಥಿಕೆಯಲ್ಲಿ ಈ ವಿವಾಹ ನೆರವೇರಿದೆ.

ಏನಿದು ಘಟನೆ?
ಹಾಸನದ ಭೂವನಹಳ್ಳಿಯ ಯುವತಿಗೆ ಆಲೂರು ತಾಲ್ಲೂಕಿನ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಅರ್ಧಕ್ಕೆ ನಿಂತು ಹೋಗಿತ್ತು.!? ಇಷ್ಟುದಿನ ಸುಮ್ಮನೆ ಇದ್ದ ಯುವತಿ ಮಂಟಪಕ್ಕೆ ಬಂದು ತಾಳಿ ಕಟ್ಟಿಸಿಕೊಳ್ಳುವ ಕ್ಷಣದಲ್ಲಿ ನನಗೆ ಮದುವೆ ಬೇಡ ಎಂದು ಹೊರಟೆ ಹೋಗಿದ್ದಾಳೆ. ಇದಕ್ಕೆ ಕಾರಣ ಪ್ರೀತಿ, ತಾನು ಇಷ್ಟಪಟ್ಟ ಹುಡುಗನನ್ನೇ ಮದುವೆಯಾಗಬೇಕು ಎಂದು ಯುವತಿ ಮದುವೆ ನಿರಾಕರಿಸಿದ್ದಾಳೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮಂಟಪದಲ್ಲಿ ಗೊಂದಲ ಹಾಗೂ ಗದ್ದಲ
ವಧು ಕಣ್ಣೀರು ಹಾಕುತ್ತಾ ನನಗೆ ಈ ಮದುವೆ ಬೇಡ ಎಂದಿದ್ದಾಳೆ. ಆಕೆಯ ಮಾತು ಕೇಳಿ ವರ ಹಾಗೂ ಗಂಡಿನ ಮನೆಯವರು ಶಾಕ್ ಆಗಿದ್ರು. ಕಲ್ಯಾಣ ಮಂಟಪದಲ್ಲಿ ಗೊಂದಲ ಹಾಗೂ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಹೆಣ್ಣಿನ ಅಪ್ಪ-ಅಮ್ಮ ಹಾಗೂ ಕುಟುಂಬಸ್ಥರು ಯುವತಿಯ ಮನವೊಲಿಕೆ ಶತ ಪ್ರಯತ್ನ ಮಾಡಿದರು ಆಕೆ ಒಪ್ಪಲೆ ಇಲ್ಲ.
ಕೊನೆಗೂ ಮದುವೆ ಮುರಿದುಬಿದ್ದಿತ್ತು ಕಲ್ಯಾಣ ಮಂದಿರಕ್ಕೆ ಪೊಲೀಸರು ಕೂಡ ಎಂಟ್ರಿ ಕೊಟ್ಟಿದ್ದರು.ಯಾರೆ ಎಷ್ಟೇ ಮನವೊಲಿಸಿದರೂ ಮದುವೆಗೆ ವಧು ಒಪ್ಪಲೆ ಇಲ್ಲ.! ಬಳಿಕ ಗಂಡಿನ ಕಡೆಯವರು ಕೂಡ ತಮಗಾದ ಅವಮಾನಕ್ಕೆ ಗಲಾಟೆ ಮಾಡಿದ್ದರು. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿದ್ದರು. ಪೊಲೀಸರ ಬಳಿ ಕೂಡ ಯುವತಿ ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ.
ನಂತರ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ವಧುವನ್ನು ಪೊಲೀಸರು ಕಲ್ಯಾಣ ಪಂಟಪದಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹಾಸನ ಬಡಾವಣೆ ಠಾಣೆಯಲ್ಲಿ ಪೊಲೀಸರು ವಧುವಿನ ವಿಚಾರಣೆ ನಡೆಸುತ್ತಿದ್ದರು. ವಧು, ವರನ ಸಂಬಂಧಿಗಳು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದರು. ವಧುವಿನ ಕಡೆಯವರಿಂದ ಮೋಸವಾಗಿದೆ ಎಂದು ದೂರು ನೀಡಲು ವರನ ಸಂಬಂಧಿಕರು ಮುಂದಾಗಿದ್ದರು. ಮಾನಸಿಕವಾಗಿ, ಆರ್ಥಿಕವಾಗಿ ನಮಗೆ ನಷ್ಟವಾಗಿದೆ ಎಂದು ದೂರು ದಾಖಲಿಸಲು ವರನ ಕುಟುಂಬಸ್ಥರು ಮುಂದಾಗಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಕೊನೆಗೂ ವಧು ಮದುವೆಯ ಮುಹೂರ್ತದ ಕ್ಷಣದವರೆಗೂ ಸುಮ್ಮನಿದ್ದು ತಾಳಿ ಕಟ್ಟುವ ಸಂಧರ್ಭದಲ್ಲಿ ಎದ್ದು ಹೋಗಿದ್ದು ಮಾತ್ರ ತಪ್ಪು.? ಮೊದಲೇ ಮನೆಯವರಿಗೆ ಎಲ್ಲವನ್ನೂ ತಿಳಿಸಿ ಪ್ರೀತಿಸಿದವನ ಜೊತೆಯಲ್ಲಿಯೇ ಮದುವೆಯಾಗಬಹುದಿತ್ತು ಎನ್ನುವುದು ಮದುವೆ ಮಂಟಪದಲ್ಲಿದ್ದವರ ಮಾತು.!


